ಹಾಸನ, (ನ. 03): ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಅವರ ಇಬ್ಬರು ಮಕ್ಕಳಿಗೆ ಹಾಸನ ನಗರಸಭೆ ನೋಟೀಸ್ ಜಾರಿ ಮಾಡಿದೆ. 

ಸಚಿವ ಹೆಚ್.ಡಿ. ರೇವಣ್ಣ ಅವರ ಪುತ್ರರಾದ ಪ್ರಜ್ವಲ್ ರೇವಣ್ಣ ಮತ್ತು ಸೂರಜ್ ರೇವಣ್ಣಗೆ ಸರ್ಕಾರಿ ಜಾಗ ಒತ್ತುವರಿ ಮಾಡಿ ನಿರ್ಮಿಸಿರುವ ಅಕ್ರಮ ಕಟ್ಟಡವನ್ನು ತೆರವುಗೊಳಿಸುವಂತೆ ನೋಟಿಸ್ ನೀಡಿದೆ.

ದೇವೇಗೌಡ ಕುಟುಂಬವನ್ನು ಕೋರ್ಟ್‌ಗೆ ಎಳೆಯುತ್ತೇನೆಂದ ಮಾಜಿ ಸಚಿವ

7 ದಿನಗಳ ಒಳಗಾಗಿ ಕಟ್ಟಡ ತೆರವುಗೊಳಿಸುವಂತೆ ನೋಟೀಸ್​ನಲ್ಲಿ ಉಲ್ಲೇಖಿಸಲಾಗಿದೆ. ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿರುವ ನಗರಸಭೆ ವಾರ್ಡ್ ನಂಬರ್ 1ರಲ್ಲಿ ಪ್ರಜ್ವಲ್ ಮತ್ತು ಸೂರಜ್ ರೇವಣ್ಣರಿಗೆ ಸೇರಿದ ಕಟ್ಟಡಗಳು ಅಕ್ರಮವಾಗಿ ತಲೆ ಎತ್ತಿವೆ.

 ಅಕ್ರಮ ರಸ್ತೆ ಒತ್ತುವರಿಗಳಿಂದಾಗಿ ಈ ಭಾಗದಲ್ಲಿ ಅತೀ ಹೆಚ್ಚು ವಾಹನ ದಟ್ಟಣೆ ಇದೆ. ಅಕ್ರಮ ಕಟ್ಟಡ ತೆರವು ಮೂಲಕ ರಸ್ತೆ ಅಗಲೀಕರಣ ಮಾಡಲು ನಗರಸಭೆ ಮುಂದಾಗಿದೆ. 

ಈ ಹಿನ್ನೆಲೆಯಲ್ಲಿ ಹೆದ್ದಾರಿಯಿಂದ 6 ಮೀಟರ್​ನಷ್ಟು ಜಾಗವನ್ನು ತೆರವುಗೊಳಿಸಬೇಕೆಂದು ನಿರ್ದಿಷ್ಟ ಕಟ್ಟಡಗಳ ಮಾಲೀಕರಿಗೆ ಸೂಚನೆ ನೀಡಲಾಗಿದೆ.