ವರುಷಕ್ಕೊಮ್ಮೆ ದರುಶನ ಭಾಗ್ಯ ಕರುಣಿಸೋ ಹಾಸನಾಂಬೆ . ಬಹಳ ಕುತೂಹಲ, ಕಾತರದಿಂದ ಕಾಯುತ್ತಿದ್ದ ಭಕ್ತರಿಗೆ ಕೊನೆಗೂ ದರುಶನ ಭಾಗ್ಯ ಕರುಣಿಸಿದ್ದಾಳೆ.

ಹಾಸನ (ಅ.12): ವರುಷಕ್ಕೊಮ್ಮೆ ದರುಶನ ಭಾಗ್ಯ ಕರುಣಿಸೋ ಹಾಸನಾಂಬೆ . ಬಹಳ ಕುತೂಹಲ, ಕಾತರದಿಂದ ಕಾಯುತ್ತಿದ್ದ ಭಕ್ತರಿಗೆ ಕೊನೆಗೂ ದರುಶನ ಭಾಗ್ಯ ಕರುಣಿಸಿದ್ದಾಳೆ.

ಹಾಸನ ಉಸ್ತುವಾರಿ ಸಚಿವ ಎ.ಮಂಜು, ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಸೇರಿದಂತೆ ಹಲವು ಗಣ್ಯರು ಸಾಕ್ಷಿಯಾದ್ರು. ನೈವೇದ್ಯ ಸೇರಿ ಹಲವು ಪೂಜೆ ನಡೆಯಬೇಕಿದ್ದರಿಂದ ನಾಳೆಯಿಂದ ಭಕ್ತರಿಗೆ ದರ್ಶನದ ವ್ಯವಸ್ಥೆ ಮಾಡಲಾಗಿತ್ತು. ಆದ್ರೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಬಂದಿದ್ದರಿಂದ ದರ್ಶನಕ್ಕೆ ಅನುವು ಮಾಡಿಕೊಡಲಾಯ್ತು.

ಇಂದಿನಿಂದ ಇದೇ ತಿಂಗಳ 21ರ ತನಕ ದೇವಿ ದರ್ಶನ ಸಿಗಲಿದೆ. ದಿನದ 24 ಗಂಟೆಯೂ ದೇವಿನ ದರ್ಶನಕ್ಕೆ ವ್ಯವಸ್ಥೆ ಮಾಡಿದ್ದು, ನೀವು ಕೂಡಾ ಹಾಸನಾಂಬೆಯ ದರ್ಶನ ಪಡೆಯಬಹುದು.