ಆಧಾರ್ ಕಡ್ಡಾಯ ಉಗ್ರರ ಕಟ್ಟಿ ಹಾಕಿತೆ? ಮಮತಾ ಪ್ರಶ್ನೆ

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 27, Jul 2018, 9:28 PM IST
Has Aadhaar Brought Down Terrorism Mamata Banerjee Aks Centre
Highlights

ಕೇಂದ್ರ ಸರಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ  ಮಾಡಿರುವ ಮಮತಾ ಬ್ಯಾನರ್ಜಿ ಆಧಾರ್ ವಿಚಾರದಲ್ಲಿ ಮಾತನಾಡಿದ್ದಾರೆ.

ಕೋಲ್ಕತ್ತಾ[ಜು.27] ವಿವಿಧ ಸೇವೆಗಳಿಗೆ ಆಧಾರ್ ಕಡ್ಡಾಯ ಮಾಡಿದ ನಂತರ ಭಯೋತ್ಪಾದನೆ ಕಡಿಮೆಯಾಗಿದೆ, ಉಗ್ರರ ಅಟ್ಟಹಾಸ ನಿಯಂತ್ರಣಕ್ಕೆ ಬಂದಿದೆಯೇ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೇಂದ್ರ ಸರಕಾರವನ್ನು ಪ್ರಶ್ನೆ ಮಾಡಿದ್ದಾರೆ.

ಕೇಂದ್ರ ಸರಕಾರ ಎಲ್ಲದಕ್ಕೂ ಆಧಾರ್ ಕಡ್ಡಾಯ ಎಂದು ಹೇಳುತ್ತಿದೆ. ಇದು ಉಗ್ರಗಾಮಿಗಳ ಸಂಖ್ಯೆ ಕಡಿಮೆ ಮಾಡಿದೆಯೇ ಎಂದು ಪ್ರಶ್ನಿಸಿರುವ ಅವರು ಈ ರೀತಿ ವೈಯಕ್ತಿಕ ದಾಖಲೆಗಳನ್ನು ಪ್ರತಿಯೊಂದಕ್ಕೂ ಲಿಂಕ್ ಮಾಡುವುದು ಭದ್ರತೆಗೆ ಧಕ್ಕೆ ತರುತ್ತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ಕೇಂದ್ರದ ಎನ್ ಡಿಎ ಒಕ್ಕೂಟದ ವಿರುದ್ಧ ಎಲ್ಲ ಪಕ್ಷಗಳು ಒಂದಾಗಿದ್ದು ಮಹಾಘಟಬಂಧನ ನಿರ್ಮಾಣಕ್ಕೆ ಮುಂದಾಗಿರುವುದು ಹಳೆ ಸುದ್ದಿ. ಅದರ ಜತೆಗೆ ಮಮತಾ ಬ್ಯಾನರ್ಜಿ ಅವರನ್ನು ಮುಂದಿನ ಪ್ರಧಾನಿ ಅಭ್ಯರ್ತಿಯಾಗಿಯೂ ಘೋಷಿಸುವ ಸಾಧ್ಯತೆ ಇದೆ.

loader