Asianet Suvarna News Asianet Suvarna News

ಹರ್ಯಾಣ ನಾಗರಿಕ ಸೇವೆ ಪರೀಕ್ಷೆ ಪಶ್ನೆಪತ್ರಿಕೆ 1 ಕೋಟಿಗೆ ಸೇಲ್..?

ಮರುದಿನ ಪರೀಕ್ಷೆಯಲ್ಲಿ ಆ ಪ್ರಶ್ನೆಗಳೂ ಇದ್ದವು ಎಂದು ಸ್ವತಃ ಸುಮನ್ ಅವರೇ ಹರ್ಯಾಣ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್.ಜೆ. ವಜಿಫ್‌'ದಾರ್ ಅವರಿಗೆ ದೂರು ಸಲ್ಲಿಸಿದ್ದಾರೆ.

Haryana Civil Services Judicial Branch candidate alleges question paper was offered for Rs 1 crore

ನವದೆಹಲಿ(ಆ.20):ಹರ್ಯಾಣ ನಾಗರಿಕ ಸೇವೆಗಳ (ನ್ಯಾಯಾಂಗ ವಿಭಾಗ) ಪರೀಕ್ಷೆಯ ಪ್ರಶ್ನೆ ಪತ್ರಿಕೆಗೆ ಮಧ್ಯವರ್ತಿಗಳು 1 ಕೋಟಿ ರು. ಬೆಲೆ ನಿಗದಿಪಡಿಸಿದ್ದ ಸಂಗತಿ ಹರ್ಯಾಣದಲ್ಲಿ ಬೆಳಕಿಗೆ ಬಂದಿದ್ದು, ಪ್ರಕರಣ ಇದೀಗ ಕೋರ್ಟ್ ಮೆಟ್ಟಿಲೇರಿದೆ.

ಕಳೆದ ಜು.16ರಂದು ಪರೀಕ್ಷೆ ನಿಗದಿಯಾಗಿತ್ತು. ಸುಮನ್ ಎಂಬಾಕೆ ಅಭ್ಯರ್ಥಿಯಾಗಿದ್ದರು. ಅವರನ್ನು ಸುಶೀಲಾ ಹಾಗೂ ಸುನೀತಾ ಎಂಬ ಇಬ್ಬರು ಸಂಪರ್ಕಿಸಿ, ಪ್ರಶ್ನೆ ಪತ್ರಿಕೆ ಬೇಕು ಎಂದರೆ 1 ಕೋಟಿ ರು.ನೀಡುವಂತೆ ಹೇಳಿದ್ದರು. ಅಲ್ಲದೆ ಅವರು ಜು.15ರಂದು ಕನಿಷ್ಠ ಎರಡು ಪ್ರಶ್ನೆಗಳನ್ನು ನೀಡಿದ್ದರು.

ಮರುದಿನ ಪರೀಕ್ಷೆಯಲ್ಲಿ ಆ ಪ್ರಶ್ನೆಗಳೂ ಇದ್ದವು ಎಂದು ಸ್ವತಃ ಸುಮನ್ ಅವರೇ ಹರ್ಯಾಣ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್.ಜೆ. ವಜಿಫ್‌'ದಾರ್ ಅವರಿಗೆ ದೂರು ಸಲ್ಲಿಸಿದ್ದಾರೆ. ಈ ಸಂಬಂಧ ಆಂತರಿಕ ತನಿಖೆಗೆ ಮುಖ್ಯ ನ್ಯಾಯಮೂರ್ತಿ ಆದೇಶಿಸಿದ್ದಾರೆ. ಈ ನಡುವೆ, ಏಕಸದಸ್ಯ ಪೀಠ ಕೂಡ ಈ ಬಗ್ಗೆ ವಿಚಾರಣೆ ಆರಂಭಿಸಿದೆ

Follow Us:
Download App:
  • android
  • ios