ಟ್ವಿಟ್ಟರ್ ಎಫೆಕ್ಟ್ : ಹರ್ಷ ಮೊಯ್ಲಿಗೆ ನೋ ಟಿಕೆಟ್ ?

First Published 25, Mar 2018, 7:42 AM IST
Harsha Moily May Miss Election Ticket
Highlights

ಮೇಟಿಯವರ ವರೆಗೆ ಹಲ​ವರು ತಮಗೂ ಹಾಗೂ ತಮ್ಮ ಕರುಳ ಕುಡಿ​ಗ​ಳಿಗೂ ಟಿಕೆಟ್‌ ಕೇಳು​ತ್ತಿ​ದ್ದಾರೆ. ಹಾಗಂತ ಕೇಳಿದ ಎಲ್ಲ​ರಿಗೂ ಟಿಕೆಟ್‌ ನೀಡಲು ಸಾಧ್ಯ​ವಿಲ್ಲ. ಒಬ್ಬ​ರಿಗೆ ನೀಡಿ, ಮತ್ತೊ​ಬ್ಬ​ರಿಗೆ ಟಿಕೆಟ್‌ ತಪ್ಪಿ​ಸಿ​ದರೆ ಅವರು ಬಂಡೆ​ಳುವ ಸಂಭ​ವವೇ ಹೆಚ್ಚು

ಬೆಂಗಳೂರು: ಕಾಂಗ್ರೆಸ್ ಟಿಕೆಟ್ ಹಂಚಿಕೆ ಕುರಿತಂತೆ ವೀರಪ್ಪ ಮೊಯ್ಲಿ ಹಾಗೂ ಅವರ ಪುತ್ರ ಹರ್ಷ ಖಾತೆ ಯಿಂದ ಮಾಡಲಾದ ಟ್ವೀಟ್ ಈಗ ಕಾರ್ಕಳ ಟಿಕೆಟ್ ಹಂಚಿಕೆ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಅವರಿಗೆ ಟಿಕೆಟ್ ಸಿಗುವ ಸಾಧ್ಯತೆ ಇಲ್ಲ ಎನ್ನಲಾಗುತ್ತಿದೆ.

ಈ ಬಾರಿ ಕಾಂಗ್ರೆಸ್‌ ಟಿಕೆಟ್‌ ಹಂಚಿ​ಕೆ​ಯ​ಲ್ಲಿ ಕಾಂಗ್ರೆಸ್‌ ಪಾಲಿಗೆ ಕಬ್ಬಿ​ಣದ ಕಡ​ಲೆ​ಯಾ​ಗಿ​ರು​ವುದು ದೊಡ್ಡ ಸಂಖ್ಯೆ​ಯಲ್ಲಿ ಹಿರಿಯ ನಾಯ​ಕರು ಹಾಗೂ ಅವರ ಪುತ್ರ​ರಿಗೆ ಟಿಕೆಟ್‌ ನೀಡುವ ವಿಚಾರ. ಮುಖ್ಯ​ಮಂತ್ರಿ ಸಿದ್ದ​ರಾ​ಮಯ್ಯ ಅವ​ರಿಂದ ಆರಂಭ​ಗೊಂಡು ಲೈಂಗಿಕ ಹಗ​ರ​ಣ​ದಲ್ಲಿ ಸಿಲು​ಕಿ​ಕೊಂಡ ಎಚ್‌.ವೈ. ಮೇಟಿಯವರ ವರೆಗೆ ಹಲ​ವರು ತಮಗೂ ಹಾಗೂ ತಮ್ಮ ಕರುಳ ಕುಡಿ​ಗ​ಳಿಗೂ ಟಿಕೆಟ್‌ ಕೇಳು​ತ್ತಿ​ದ್ದಾರೆ. ಹಾಗಂತ ಕೇಳಿದ ಎಲ್ಲ​ರಿಗೂ ಟಿಕೆಟ್‌ ನೀಡಲು ಸಾಧ್ಯ​ವಿಲ್ಲ. ಒಬ್ಬ​ರಿಗೆ ನೀಡಿ, ಮತ್ತೊ​ಬ್ಬ​ರಿಗೆ ಟಿಕೆಟ್‌ ತಪ್ಪಿ​ಸಿ​ದರೆ ಅವರು ಬಂಡೆ​ಳುವ ಸಂಭ​ವವೇ ಹೆಚ್ಚು. ಹೀಗಾಗಿ ಈ ವಿಚಾ​ರ​ವನ್ನು ಸಂಪೂ​ರ್ಣ​ವಾಗಿ ಹೈಕ​ಮಾಂಡ್‌ ನಿರ್ಧಾ​ರಕ್ಕೆ ಬಿಡಲು ತೀರ್ಮಾ​ನಿ​ಸ​ಲಾ​ಗಿದೆ ಎಂದು ಮೂಲ​ಗಳು ಹೇಳು​ತ್ತವೆ

loader