ನೆದರ್ ಲ್ಯಾಂಡ್'ನ ಹೇಗ್ನ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಕುಲಭೂಷಣ್ ಜಾಧವ್ ಪರ ಪರಿಣಾಮಕಾರಿಯಾಗಿ ವಾದ ಮಂಡಿಸುತ್ತಿರುವ ಭಾರತದ ಹಿರಿಯ ವಕೀಲ ಹರೀಶ್ ಸಾಳ್ವೆ, ತಮ್ಮ ವಾದ ಮಂಡನೆಗಾಗಿ ಕೇವಲ 1 ರೂ. ಸಂಭಾವನೆ ಪಡೆದಿದ್ದಾರೆ. ಈ ವಿಷಯವನ್ನು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಬಹಿರಂಗಪಡಿಸಿದ್ದಾರೆ.
ನವದೆಹಲಿ(ಮೇ.16): ನೆದರ್ ಲ್ಯಾಂಡ್'ನ ಹೇಗ್ನ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಕುಲಭೂಷಣ್ ಜಾಧವ್ ಪರ ಪರಿಣಾಮಕಾರಿಯಾಗಿ ವಾದ ಮಂಡಿಸುತ್ತಿರುವ ಭಾರತದ ಹಿರಿಯ ವಕೀಲ ಹರೀಶ್ ಸಾಳ್ವೆ, ತಮ್ಮ ವಾದ ಮಂಡನೆಗಾಗಿ ಕೇವಲ 1 ರೂ. ಸಂಭಾವನೆ ಪಡೆದಿದ್ದಾರೆ. ಈ ವಿಷಯವನ್ನು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಬಹಿರಂಗಪಡಿಸಿದ್ದಾರೆ.
ಭಾರತದ ಯಾವುದೇ ಒಬ್ಬ ಉತ್ತಮ ವಕೀಲರು ಹರೀಶ್ ಸಾಳ್ವೆ ಅವರಿಗಿಂತಲೂ ಕಡಿಮೆ ಸಂಭಾವನೆ ಪಡೆದು ಕುಲಭೂಷಣ್ ಪರ ವಾದ ಮಂಡನೆ ಮಾಡುತ್ತಿದ್ದರು ಎಂದು ವ್ಯಕ್ತಿಯೊಬ್ಬರು ಟ್ವೀಟ್ ಮಾಡಿದ್ದರು. ಇದಕ್ಕೆ ಸುಷ್ಮಾ ಪ್ರತಿಕ್ರಿಯೆ ನೀಡಿದ್ದು, ಅದರಲ್ಲಿ ಹರೀಶ್ ಸಾಳ್ವೆ 1 ರೂ. ಸಂಭಾವನೆ ಪಡೆದಿರುವುದಾಗಿ ತಿಳಿಸಿದ್ದಾರೆ.
ಮಾಜಿ ಸಾಲಿಸಿಟರ್ ಜನರಲ್ ಹರೀಶ್ ಸಾಳ್ವೆ ದೇಶದ ಅತ್ಯಂತ ದುಬಾರಿ ವಕೀಲರಲ್ಲಿ ಒಬ್ಬರು ಎಂದು ಗುರುತಿಸಿಕೊಂಡಿದ್ದಾರೆ. ಅವರು ಹಲವಾರು ಪ್ರತಿಷ್ಠಿತ ವ್ಯಕ್ತಿಗಳ ಪರ ವಾದ ಮಂಡನೆ ಮಾಡಿದ್ದು, ದುಬಾರಿ ಮೊತ್ತವನ್ನು ಸಂಭಾವನೆಯಾಗಿ ಪಡೆದಿದ್ದಾರೆ. ಬಾಲಿವುಡ್ನ ಖ್ಯಾತ ನಟ ಸಲ್ಮಾನ್ ಖಾನ್ ಪರ ಹರೀಶ್ ಸಾಳ್ವೆ ವಾದ ಮಂಡನೆ ಮಾಡುತ್ತಿದ್ದಾರೆ. ಸಲ್ಮಾನ್ ತಮ್ಮ ವಿರುದ್ಧದ ಬಹುತೇಕ ಪ್ರಕರಣಗಳಲ್ಲಿ ಖುಲಾಸೆಗೊಳ್ಳುವಲ್ಲಿ ಹರೀಶ್ ಪರಿಣಾಮಕಾರಿ ವಾದ ನೆರವಾಗಿದೆ.
