ಒಡಿಸ್ಸಾ ಜಿಲ್ಲಾ ಪರಿಷತ್ ಚುನಾವಣೆ ಫಲಿತಾಂಶ ಕಳಪೆಯಾಗಿರುವುದಕ್ಕೆ ನೈತಿಕ ಹೊಣೆಹೊತ್ತು ಬಿ.ಕೆ ಹರಿಪ್ರಸಾದ್ ಎಐಸಿಸಿ ಜನರಲ್ ಸೆಕ್ರೆಟರಿ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ.
ನವದೆಹಲಿ (ಮಾ.13): ಒಡಿಸ್ಸಾ ಜಿಲ್ಲಾ ಪರಿಷತ್ ಚುನಾವಣೆ ಫಲಿತಾಂಶ ಕಳಪೆಯಾಗಿರುವುದಕ್ಕೆ ನೈತಿಕ ಹೊಣೆಹೊತ್ತು ಬಿ.ಕೆ ಹರಿಪ್ರಸಾದ್ ಎಐಸಿಸಿ ಜನರಲ್ ಸೆಕ್ರೆಟರಿ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ.
ಹರಿಪ್ರಸಾದ್ ರಾಜಿನಾಮೆಯಿಂದ ರಾಹುಲ್ ಗಾಂಧಿ ತಮ್ಮದೇ ವಲಯದಲ್ಲಿ ತಂಡವನ್ನು ಕಟ್ಟಿಕೊಳ್ಳಬಹುದು ಹಾಗೂ ಪದಾಧಿಕಾರಿ ಯಾರಾಗಬೇಕೆಂದು ಸ್ವತಂತ್ರವಾಗಿ ನಿರ್ಧರಿಸಬಹುದು ಎಂದು ಬ್ರಿಜೇಶ್ ಕಾಳಪ್ಪ ಹೇಳಿದ್ದಾರೆ.
ಒಡಿಸ್ಸಾ ಉಸ್ತುವಾರಿಯನ್ನು ಬಿ.ಕೆ ಹರಿಪ್ರಸಾದ್ ಗೆ ವಹಿಸಲಾಗಿತ್ತು. ಜಿಲ್ಲಾ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲನುಭವಿಸಿದ್ದಕ್ಕೆ ಪಕ್ಷದ ನಾಯಕರು ಇವರೇ ಕಾರಣ ಎಂದು ಆರೋಪಿಸಿರುವ ಹಿನ್ನೆಲೆಯಲ್ಲಿ ನೈತಿಕ ಹೊಣೆ ಹೊತ್ತು ರಾಜಿನಾಮೆ ನೀಡಿದ್ದಾರೆ.
