Asianet Suvarna News Asianet Suvarna News

ಹರೇಕಳ ಹಾಜಬ್ಬಗೆ ಪದ್ಮ ಪುರಸ್ಕಾರ, ಬದಕು ಬದಲಿಸಿದ ನೋಟ್‌ಬಂದಿ ನಿರ್ಧಾರ; ನ.8ರ ಟಾಪ್ 10 ಸುದ್ದಿ!

ಹರೇಕಳ ಹಾಜಬ್ಬ, ಕಂಬಾರ, ತುಳಸಿ ಗೌಡ ಸೇರಿದಂತೆ 119 ಮಂದಿಗೆ ಪದ್ಮ ಪ್ರಶಸ್ತಿ ಪುರಸ್ಕಾರ ನೀಡಿ ಗೌರವಿಸಲಾಗಿದೆ. ಇನ್ನು ನೋಟ್‌ಬಂದಿ ಇದೀಗ 5 ವರ್ಷ ಪೂರೈಸಿದೆ. ಇಂದಿನಿಂದ ರಾಜ್ಯದಲ್ಲಿ ಅಂಗನವಾಡಿ, ಎಲ್‌ಕೆಜಿ, ಯೂಕೆಜಿ ಆರಂಭಗೊಂಡಿದೆ. ಪುನೀತ್ ರಾಜ್‌ಕುಮಾರ್ ಸಮಾಧಿಗೆ ಕುಟುಂಬಸ್ಥರು ಪೂಜೆ ಸಲ್ಲಿಸಿದ್ದಾರೆ. ಅಡ್ವಾಣಿ ಮನೆಗೆ ತೆರಳಿ ಶುಭಕೋರಿದ ಮೋದಿ, ವ್ಯಾಟ್ಸ್ಆ್ಯಪ್ ಹೊಸ ಫೀಚರ್ಸ್ ಸೇರಿದಂತೆ ನವೆಂಬರ್ 8ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.

Harekala hajabba padmashree award to PM modi demonetization top 10 news of November 8 ckm
Author
Bengaluru, First Published Nov 8, 2021, 6:11 PM IST
  • Facebook
  • Twitter
  • Whatsapp

Padma Awards 2021| ಪದ್ಮ ಪ್ರಶಸ್ತಿ ಪ್ರಧಾನ ಸಮಾರಂಭ: ಹರೇಕಳ ಹಾಜಬ್ಬ, ಕಂಬಾರ, ತುಳಸಿ ಗೌಡಗೆ ಗೌರವ!

Harekala hajabba padmashree award to PM modi demonetization top 10 news of November 8 ckm

ದೆಹಲಿಯ ರಾಷ್ಟ್ರಪತಿ ಭವನದಲ್ಲಿರುವ (Rashtrapati Bhavan) ಐತಿಹಾಸಿಕ ದರ್ಬಾರ್ ಹಾಲ್‌ನಲ್ಲಿ 2021ನೇ ಸಾಲಿನ ಪದ್ಮ ಪ್ರಶಸ್ತಿ (Padma Awards 2021) ಪ್ರಧಾನ ಸಮಾರಂಭ ನಡೆದಿದೆ. 7 ಪದ್ಮವಿಭೂಷಣ (, 10 ಪದ್ಮಭೂಷಣ ಹಾಗೂ 102 ಪದ್ಮಶ್ರೀ (Padma Shri) ಪ್ರಶಸ್ತಿ ಸೇರಿದಂತೆ ಒಟ್ಟು 119 ಪದ್ಮ ಪ್ರಶಸ್ತಿ ನೀಡಲಾಗಿದೆ. 

Demonetisation| ಜನ ಜೀವನವನ್ನೇ ಬದಲಾಯಿಸಿತ್ತು ಆ ಒಂದು 'ಐಡಿಯಾ': ಟ್ರೆಂಡಿಂಗ್‌ನಲ್ಲಿ 'Notebandi'!

Harekala hajabba padmashree award to PM modi demonetization top 10 news of November 8 ckm

ನೋಟು ಅಮಾನ್ಯೀಕರಣವನ್ನು (Note ban) ಪ್ರಧಾನಿ ನರೇಂದ್ರ ಮೋದಿಯವರ (narendra Modi) ಮಾಸ್ಟರ್‌ಸ್ಟ್ರೋಕ್ ಎಂದು ಪರಿಗಣಿಸಲಾಗಿದೆ. ಅಂದಿನ ಆ ಆದೇಶ ಜನರ ಜೀವನವನ್ನೇ ಬದಲಾಯಿಸಿತ್ತು. ನವೆಂಬರ್ 8, 2016 ರ ಮಧ್ಯರಾತ್ರಿಯಿಂದ ನೋಟು ಅಮಾನ್ಯೀಕರಣವನ್ನು (Demonetisation) ಜಾರಿಗೆ ತರಲಾಗಿತ್ತು.

Karnataka School Reopening| ಇಂದಿನಿಂದ ಅಂಗನವಾಡಿ, ಎಲ್‌ಕೆಜಿ, ಯುಕೆಜಿ ಶುರು!

Harekala hajabba padmashree award to PM modi demonetization top 10 news of November 8 ckm

 ರಾಜ್ಯದಲ್ಲಿ ಸೋಮವಾರದಿಂದ ಎಲ್ಲ ಅಂಗನವಾಡಿ ಕೇಂದ್ರಗಳು (Anganwadi) ಹಾಗೂ ಪೂರ್ವ ಪ್ರಾಥಮಿಕ ತರಗತಿಗಳು (ಎಲ್‌ಕೆಜಿ-ಯುಕೆಜಿ) ಆರಂಭವಾಗಲಿದ್ದು, ಚಿಣ್ಣರನ್ನು ಬರಮಾಡಿಕೊಳ್ಳಲು ಶಾಲೆ, ಅಂಗನವಾಡಿ ಕೇಂದ್ರಗಳಲ್ಲಿ ಮಾರ್ಗಸೂಚಿ (Guidlines) ಅನುಸಾರ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.

Puneeth Rajkumar: ಸಮಾಧಿ ಕಾರ್ಯಕ್ಕೆ ಎರಡು ಬಸ್‌ಗಳಲ್ಲಿ ಆಗಮಿಸಿದ ರಾಜ್ ಕುಟುಂಬಸ್ಥರು!

Harekala hajabba padmashree award to PM modi demonetization top 10 news of November 8 ckm

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಗಲಿ ಇಂದಿಗೆ 11 ದಿನಗಳು ಕಳೆದಿವೆ. ಕಂಠೀರವ ಸ್ಟುಡಿಯೋದಲ್ಲಿ ಕುಟುಂಬಸ್ಥರು ಪೂಜೆ ಸಲ್ಲಿಸಿದ್ದಾರೆ. ಎರಡು ಬಸ್‌ಗಳಲ್ಲಿ ಸಂಬಂಧಿಕರು ಆಗಮಿಸಿದ್ದಾರೆ. ಪುನೀತ್ ಪತ್ನಿ ಅಶ್ವಿನಿ, ಪುತ್ರಿ ಧೃತಿ ಮತ್ತು ವಂದಿತಾ ಕಾರಿನಲ್ಲಿ ಆಗಮಿಸಿದ್ದಾರೆ.

WhatsApp community features; ಇದರಿಂದ ಸರಳವಾಗಲಿದೆ Group Talks

Harekala hajabba padmashree award to PM modi demonetization top 10 news of November 8 ckm

ಬಳಕೆದಾರರಿಗೆ ಅಗತ್ಯಕ್ಕೆ ತಕ್ಕಂತೆ ಹೊಸ ಹೊಸ ಫೀಚರ್‌ಗಳನ್ನು ವಾಟ್ಸಾಪ್ (Whatsapp) ಪರಿಚಯಿಸುತ್ತದೆ. ಇದೀಗ ಗ್ರೂಪ್ ಟಾಕ್ಸ್ ಇನ್ನು ಸುಲಭಗೊಳಿಸುವಂತೆ ಮಾಡಲು ವಾಟ್ಸಾಪ್ ಹೊಸ ಕಮ್ಯುನಿಟಿ (Community) ಫೀಚರ್ ಮೇಲೆ ಕೆಲಸ ಮಾಡುತ್ತಿದೆ ಎನ್ನಲಾಗುತ್ತಿದೆ. ಈ ಹೊಸ ಫೀಚರ್‌ನಿಂದ ಬಳಕೆದಾರರಿಗೆ ಸಾಕಷ್ಟು ಅನುಕೂಲವಾಗಲಿದೆ ಎನ್ನಲಾಗಿದೆ.

Urfi Javed; ಬೋಲ್ಡ್ ಪೋಟೋ ಹಾಕಿ ಫೆವರೇಟ್ ಜಾಗ ಕೇಳಿದ ಬೆಡಗಿ

Harekala hajabba padmashree award to PM modi demonetization top 10 news of November 8 ckm

ಪ್ರತಿದಿನ ಸೋಶಿಯಲ್ ಮೀಡಿಯಾಕ್ಕೆ ತಮ್ಮ ಹಾಟ್ ಪೋಟೋಗಳ ಮೂಲಕವೇ ಬೆಂಕಿ ಹಚ್ಚುವ  ಉರ್ಫಿ ಜಾವೇದ್(Urfi Javed) ಈ ಸಾರಿ ಬೀಚ್ (Beach) ಕಡೆ ಹೆಜ್ಜೆ ಹಾಕಿದ್ದಾರೆ.

Toyota ಸಬ್ ಕಾಂಪಾಕ್ಟ್ ಕಾರ್ Aygo X ಅನಾವರಣ, ಪಂಚ್‌ಗೆ ಠಕ್ಕರ್

Harekala hajabba padmashree award to PM modi demonetization top 10 news of November 8 ckm

ಭಾರತೀಯ ಮಾರುಕಟ್ಟೆಯಲ್ಲಿ ಬಹುದೊಡ್ಡ ಹೆಸರು ಹೊಂದಿರುವ ಟೋಯೋಟಾ ಕಂಪನಿಯು ಅಯ್ಗೋ ಎಕ್ಸ್ ಎಂಬ ಹೊಸ ಸಂಬ್ ಕಾಂಪಾಕ್ಟ್ ಕಾರನ್ನು ಅನಾವರಣಗೊಳಿಸಿದೆ. ಈ ಅಯ್ಗೋ ಎಕ್ಸ್ ಟಾಟಾ ಕಂಪನಿಯ ಪಂಚ್ ಸೇರಿದಂತೆ ಮೈಕ್ರೋ ಎಸ್‌ಯುವಿಗಲಿಗೆ ತೀವ್ರ ಸ್ಪರ್ಧೆಯನ್ನು ನೀಡಲಿವೆ. 

LK Advani Birthday: ಹಿರಿಯನ ನಾಯಕನ ಮನೆಗೆ ಭೇಟಿ ನೀಡಿ ಶುಭ ಕೋರಿದ ಪ್ರಧಾನಿ ಮೋದಿ!

Harekala hajabba padmashree award to PM modi demonetization top 10 news of November 8 ckm

ಬಿಜೆಪಿ ಹಿರಿಯ ನಾಯಕ, ಮಾಜಿ ಉಪ ಪ್ರಧಾನಿ ಎಲ್‌ಕೆ ಅಡ್ವಾಣಿಗೆ ಹುಟ್ಟು ಹಬ್ಬದ ಸಂಭ್ರಮ(Happy Birthday). 94ನೇ ವಸಂತಕ್ಕೆ ಕಾಲಿಟ್ಟ ಅಡ್ವಾಣಿ(LD Advani) ಮನೆಗೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಹುಟ್ಟು ಹಬ್ಬಕ್ಕೆ ಶುಭಕೋರಿದ್ದಾರೆ. 
 
Follow Us:
Download App:
  • android
  • ios