Asianet Suvarna News Asianet Suvarna News

Demonetisation| ಜನ ಜೀವನವನ್ನೇ ಬದಲಾಯಿಸಿತ್ತು ಆ ಒಂದು 'ಐಡಿಯಾ': ಟ್ರೆಂಡಿಂಗ್‌ನಲ್ಲಿ 'Notebandi'!

* ರಾತ್ರೋ ರಾತ್ರಿ ಬ್ಯಾನ್ ಆಗಿತ್ತು 500, 1000 ರೂಪಾಯಿ ನೋಟುಗಳು

* ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು ಆ ಒಂದು ನಿರ್ಧಾರ

* ನೋಟ್‌ ಬ್ಯಾನ್ ಐಡಿಯಾ ಕೊಟ್ಟಿದ್ದ ಅನಿಲ್ ಬೊಕಿಲ್ ಹೇಳೋದೇನು?

Anil Bokil man pitched demonetisation to PM Modi leading to Rs 500 Rs 1,000 note ban pod
Author
Bangalore, First Published Nov 8, 2021, 3:43 PM IST
  • Facebook
  • Twitter
  • Whatsapp

ನವದೆಹಲಿ(ನ.08): ನೋಟು ಅಮಾನ್ಯೀಕರಣವನ್ನು (Note ban) ಪ್ರಧಾನಿ ನರೇಂದ್ರ ಮೋದಿಯವರ (narendra Modi) ಮಾಸ್ಟರ್‌ಸ್ಟ್ರೋಕ್ ಎಂದು ಪರಿಗಣಿಸಲಾಗಿದೆ. ಅಂದಿನ ಆ ಆದೇಶ ಜನರ ಜೀವನವನ್ನೇ ಬದಲಾಯಿಸಿತ್ತು. ನವೆಂಬರ್ 8, 2016 ರ ಮಧ್ಯರಾತ್ರಿಯಿಂದ ನೋಟು ಅಮಾನ್ಯೀಕರಣವನ್ನು (Demonetisation) ಜಾರಿಗೆ ತರಲಾಗಿತ್ತು. ಅಂದರೆ ಈ ಆದೇಶ ಜಾರಿಯಾಗಿ ಇಂದಿಗೆ ಬರೋಬ್ಬರಿ 5 ವರ್ಷ. ನೋಟು ಅಮಾನ್ಯೀಕರಣದ ಬಗ್ಗೆ ವಿರೋಧ ಪಕ್ಷಗಳು ಯಾವತ್ತೂ ಕೇಂದ್ರವನ್ನು ದೂರುತ್ತವೆ. ಇದೊಂದು ತಪ್ಪು ನಿರ್ಧಾರ ಎಂದು ಕಿಡಿ ಕಾರುತ್ತವೆ. ಆದರೆ ಆರ್ಥಿಕ ತಜ್ಞ ಅನಿಲ್ ಬೋಕಿಲ್ ಈ ಐಡಿಯಾವನ್ನು ಪ್ರಧಾನಿ ಮೋದಿಯವರಿಗೆ ನೀಡಿದ್ದು, ಅದು ಯಶಸ್ವಿಯಾಗಿದೆ ಎಂದು ಅವರು ಪರಿಗಣಿಸಿದ್ದಾರೆ. ಪುಣೆ ಮೂಲದ ಎಕನಾಮಿಸ್ಟ್ ಫೌಂಡೇಶನ್ ಮುಖ್ಯಸ್ಥ ಅನಿಲ್ ಬೋಕಿಲ್ (Anil Bokil), 'ದೈನಿಕ್ ಭಾಸ್ಕರ್' ಜೊತೆ ಮಾತನಾಡುತ್ತಾ, ಕಪ್ಪುಹಣ ಮತ್ತು ನಕಲಿ ಹಣವನ್ನು ತಡೆಯುವ ನಿಟ್ಟಿನಲ್ಲಿ ಇದೊಂದು ಯಶಸ್ವಿ ಹೆಜ್ಜೆ ಎಂದು ಬಣ್ಣಿಸಿದ್ದಾರೆ. 

ಇದನ್ನು ಬಿಟ್ಟರೆ ಭಾರತಕ್ಕೆ ಬೇರಾವ ಆಯ್ಕೆ ಇರಲಿಲ್ಲ

ಅನಿಲ್ ಬೊಕಿಲ್ ಪ್ರಕಾರ, ಈಗ ಡಿಜಿಟಲ್ ಆರ್ಥಿಕತೆಯು (Digital Economy) ವೇಗವಾಗಿ ಬೆಳೆದಿದೆ. ಭಾರತ ಪ್ರಗತಿಯತ್ತ ಸಾಗುತ್ತಿದ್ದರೆ ಅದರ ಹಿಂದೆ ದೊಡ್ಡ ಪಾತ್ರವಿದೆ. ಭಾರತವು ಡಿಜಿಟಲ್ ಆರ್ಥಿಕತೆಯಾಗಿರುವುದರಿಂದ ವಿದೇಶಿ ನೇರ ಹೂಡಿಕೆ (ಎಫ್‌ಡಿಐ) ವಿದೇಶದಿಂದ ಬರುತ್ತಿದೆ. ಅಂದರೆ ನೇರವಾಗಿ ಹೂಡಿಕೆ ಮಾಡಲಾಗುತ್ತಿದೆ ಹಾಗೂ ಡಿಜಿಟಲ್ ಆರ್ಥಿಕತೆಯಿಂದ ಪಾರದರ್ಶಕತೆ ಹೆಚ್ಚಿದೆ. ಲೇವಾದೇವಿ ವ್ಯವಸ್ಥೆಯನ್ನು ನಿಷೇಧಿಸಲಾಗಿದೆ. ಬಡ್ಡಿದರ ಕಡಿಮೆಯಾಗಿದೆ. ಬೇನಾಮಿ ಆಸ್ತಿ ಕಡಿಮೆಯಾಗುತ್ತಿದೆ. ನೋಟು ಅಮಾನ್ಯೀಕರಣಕ್ಕೆ ಮುನ್ನ ಶೇಕಡಾ 86ರಷ್ಟು ದೊಡ್ಡ ನೋಟುಗಳು ಅಂದರೆ 500 ಮತ್ತು 1000 ರೂಪಾಯಿಗಳು ಚಲಾವಣೆಯಲ್ಲಿತ್ತು, ಪ್ರಸ್ತುತ ಕೇವಲ ಶೇಕಡಾ 18 ರಷ್ಟು ಮಾತ್ರ ಇವೆ ಎಂದು ಬೋಕಿಲ್ ಹೇಳಿದ್ದಾರೆ. ಅಂದರೆ, ಪ್ರಸ್ತುತ 28 ಲಕ್ಷ ಕೋಟಿ ರೂಪಾಯಿಯ 2 ಸಾವಿರ ನೋಟುಗಳು ಚಲಾವಣೆಯಲ್ಲಿವೆ. ಇದರಿಂದ ನಕಲಿ ಕರೆನ್ಸಿ ಪ್ರಮಾಣ ಕಡಿಮೆಯಾಗಿದೆ. 

ಸದ್ಯ ಶೇ.50-55ರಷ್ಟು 500 ನೋಟುಗಳು ಚಲಾವಣೆಯಲ್ಲಿವೆ. 200 ನೋಟುಗಳು 14-15 ಶೇ. ಅಂದರೆ, ದೊಡ್ಡ ನೋಟುಗಳು ಕಪ್ಪುಹಣವನ್ನು ಉತ್ತೇಜಿಸುತ್ತಿದ್ದವು. ಕರೋನಾ ಅವಧಿಯ ನಂತರ ಭಾರತದ ಜಿಡಿಪಿ ಬೆಳವಣಿಗೆ ಹೆಚ್ಚಿದ್ದರೆ, ಅದರ ಹಿಂದೆ ನೋಟು ಅಮಾನ್ಯೀಕರಣವಿದೆ. 100 ಕೋಟಿ ಜನರಿಗೆ ಲಸಿಕೆ, ದೇಶದ ಶೇ.80ರಷ್ಟು ಬಡವರಿಗೆ ಉಚಿತ ಪಡಿತರ, ರೈತರ ಖಾತೆಗೆ 2000 ರೂಪಾಯಿ, ಇದೆಲ್ಲವೂ ಡಿಜಿಟಲ್ ಕರೆನ್ಸಿಯಿಂದಾಗಿ ನಡೆದಿದೆ. ನೋಟು ಅಮಾನ್ಯೀಕರಣ ಆಗದೇ ಇದ್ದಿದ್ದರೆ ಡಿಜಿಟಲ್ ಕರೆನ್ಸಿ ಚಲಾವಣೆ ಹೆಚ್ಚಾಗುತ್ತಿರಲಿಲ್ಲ. ನಂತರ ಈ ಜನರು ನಗದು ಪಾವತಿಸಬೇಕಾಗುತ್ತಿತ್ತು, ಅದು ಸಾಧ್ಯವಾಗುತ್ತಿರಲಿಲ್ಲ ಎಂದಿದ್ದಾರೆ.

ಮೋದಿಗೆ ಐಡಿಯಾ ಕೊಟ್ಟವರು ಬೋಕಿಲ್

ಮಹಾರಾಷ್ಟ್ರದ (Maharashtra) ಲಾತೂರ್‌ನಲ್ಲಿ ಜನಿಸಿದ 53 ವರ್ಷದ ಅನಿಲ್ ಬೋಕಿಲ್ ಮೂಲತಃ ಮೆಕ್ಯಾನಿಕಲ್ ಇಂಜಿನಿಯರ್. ಆದಾಗ್ಯೂ, ಅವರು ಅರ್ಥಶಾಸ್ತ್ರವನ್ನು ಅಧ್ಯಯನ ಮಾಡಿದರು ಮತ್ತು ತಮ್ಮ ಪಿಎಚ್ಡಿ ಮಾಡಿದರು. ಬೋಕಿಲ್ ಪ್ರಕಾರ, ನೋಟು ಅಮಾನ್ಯೀಕರಣಕ್ಕೆ ಮೂರು ವರ್ಷಗಳ ಮೊದಲು ಅವರು ಈ ವಿಚಾರವನ್ನು ಮೋದಿಯವರಿಗೆ ಹೇಳಿದ್ದರು. ಆಗ ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿದ್ದರು. ಅವರಿಗೆ ಕೇವಲ 9 ನಿಮಿಷಗಳ ಸಭೆಯ ಸಮಯವನ್ನು ನೀಡಲಾಗಿತ್ತು, ಆದರೆ ಮೋದಿ ಅವರೊಂದಿಗೆ 2 ಗಂಟೆಗಳ ಕಾಲ ಚರ್ಚಿಸಿದ್ದರು. ನೋಟು ಅಮಾನ್ಯೀಕರಣವು ದೇಶದಲ್ಲಿ ಯಶಸ್ವಿಯಾಗಿದೆ ಎಂದು ಬೊಕಿಲ್ ನಂಬಿದ್ದಾರೆ. ಮೋದಿ ತಮ್ಮ ಗುರಿಯಲ್ಲಿ ಯಶಸ್ವಿಯಾಗಿದ್ದಾರೆಂದಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್

ನೋಟು ಅಮಾನ್ಯೀಕರಣದ ಬಗ್ಗೆ ಹಲವರಲ್ಲಿ ಅಸಮಾಧಾನವೂ ಇದೆ. ಇದು ಮೋದಿಯವರ ತಪ್ಪು ನಿರ್ಧಾರ ಎಂದು ಅನೇಕರು ಕರೆದಿದ್ದಾರೆ.  #Black_Day_Indian_Economy ಟ್ವಿಟ್ಟರ್‌ನಲ್ಲಿ ಟ್ರೆಂಡಿಂಗ್ ಆಗಿದೆ. ಜನರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

#5 ನೇ ಪುಣ್ಯತಿಥಿಯಂದು, ನನ್ನ ಹೃತ್ಪೂರ್ವಕ ಸಂತಾಪಗಳು!!

ನೋಟು ಅಮಾನ್ಯೀಕರಣವನ್ನು ಭಾರತೀಯ ಇತಿಹಾಸದಲ್ಲಿ ಕರಾಳ ದಿನ ಎಂದು ಕರೆಯಲಾಗುವುದು.
#ರೈತರ ಪ್ರತಿಭಟನೆ #Black_Day_Indian_Economy, ಮರಳಿ ಬಂದ ಕಪ್ಪುಹಣವೆಷ್ಟು? ಭಯೋತ್ಪಾದನೆ ಮುಗಿಯಿತೇ? ಆರ್ಥಿಕತೆಯ ಸ್ಥಿತಿ ಏನು? ಎಂದು ಒಬ್ಬರು ಪ್ರಶ್ನಿಸಿದ್ದಾರೆ.

ನೋಟು ಅಮಾನ್ಯೀಕರಣ ಎಷ್ಟರಮಟ್ಟಿಗೆ ಯಶಸ್ವಿಯಾಗಿದೆ ಎಂದರೆ ಬಿಜೆಪಿಯ ಯಾವೊಬ್ಬ ನಾಯಕರು ಅಥವಾ ಅವರ ಮಿತ್ರಪಕ್ಷಗಳು ತಮ್ಮ ಭಾಷಣಗಳಲ್ಲಿ ಅದರ ಬಗ್ಗೆ ಮಾತನಾಡಲಿಲ್ಲ ಎಂದು ಮತ್ತೊಬ್ಬರು ಕಾಲೆಳೆದಿದ್ದಾರೆ. 

Follow Us:
Download App:
  • android
  • ios