ಫೇಸ್‌ಬುಕ್‌ನಲ್ಲಿ ಬಿಜೆಪಿಗಿಂತ ಹಾರ್ದಿಕ್ ಪಟೇಲ್ ಹೆಚ್ಚು ಜನಪ್ರಿಯರಾಗಿದ್ದಾರೆ. ಬಿಜೆಪಿಗೆ ಮತದಾನ ಮಾಡದಂತೆ ಕೋರಿರುವ ಹಾರ್ದಿಕ್ ಫೇಸ್‌ಬುಕ್ ಪೋಸ್ಟ್‌'ಗೆ ಗುರುವಾರ ಮಧ್ಯಾಹ್ನ 11 ರವರೆಗೆ 8 ಲಕ್ಷ ಲೈಕ್ ಬಂದಿವೆ.

ಅಹ್ಮದಾಬಾದ್(ಡಿ.1): ಚುನಾವಣೆ ಎದುರಿಸುತ್ತಿರುವ ಗುಜರಾತ್‌ನಲ್ಲಿ ಬಿಜೆಪಿ ವಿರುದ್ಧ ಸಮರ ಸಾರಿರುವ ಪಟೇಲ್ ಸಮುದಾಯದ ನಾಯಕ ಹಾರ್ದಿಕ್ ಪಟೇಲ್ ಸಾಮಾಜಿಕ ಜಾಲತಾಣದಲ್ಲಿ ರಾಜ್ಯದ ಆಡಳಿತಾರೂಢ ಪಕ್ಷದ ವಿರುದ್ಧ ತೀವ್ರ ಪೈಪೋಟಿ ನೀಡುತ್ತಿದ್ದಾರೆ.

ಅದರಲ್ಲೂ ಫೇಸ್‌ಬುಕ್‌ನಲ್ಲಿ ಬಿಜೆಪಿಗಿಂತ ಹಾರ್ದಿಕ್ ಪಟೇಲ್ ಹೆಚ್ಚು ಜನಪ್ರಿಯರಾಗಿದ್ದಾರೆ. ಬಿಜೆಪಿಗೆ ಮತದಾನ ಮಾಡದಂತೆ ಕೋರಿರುವ ಹಾರ್ದಿಕ್ ಫೇಸ್‌ಬುಕ್ ಪೋಸ್ಟ್‌'ಗೆ ಗುರುವಾರ ಮಧ್ಯಾಹ್ನ 11 ರವರೆಗೆ 8 ಲಕ್ಷ ಲೈಕ್ ಬಂದಿವೆ. ಬಿಜೆಪಿಯ ಫೇಸ್‌'ಬುಕ್ ಪುಟಕ್ಕಿಂತ ಹಾರ್ದಿಕ್ ಫೇಸ್‌'ಬುಕ್ ಪುಟಕ್ಕೆ ಶೇ.300ರಷ್ಟು ಅಧಿಕ ಪ್ರತಿಕ್ರಿಯೆಗಳು ಈ ಹೊತ್ತಿಗೆ ವ್ಯಕ್ತವಾಗಿದ್ದವು.

ಕಳೆದ 7 ಸಮಾವೇಶಗಳ ಫೇಸ್‌ಬುಕ್ ಲೈವ್‌'ನಲ್ಲಿ, ಹಾರ್ದಿಕ್ ನೇರ ಪ್ರಸಾರವನ್ನು ಒಟ್ಟು 33.24 ಲಕ್ಷ ಮಂದಿ ವೀಕ್ಷಿಸಿದ್ದರೆ, ಪ್ರಧಾನಿ ಮೋದಿಯವರ ಲೈವ್ ಪ್ರಸಾರ 10.9 ಲಕ್ಷ ಮಂದಿ ಮಾತ್ರ ವೀಕ್ಷಿಸಿದ್ದಾರೆ. ಹೀಗಾಗಿ ಗುಜರಾತ್‌ನಲ್ಲಿ ಬಿಜೆಪಿಯ ಸಾಮಾಜಿಕ ಜಾಲತಾಣ ವಿಭಾಗ ಹಾರ್ದಿಕ್ ಪಟೇಲ್ ಜೊತೆ ತೀವ್ರ ಪೈಪೋಟಿ ನೀಡುವಂತಾಗಿದೆ.