ಪಕೋಡಾ ಮಾರಿ ಎಂದು ಚಾಯ್’ವಾಲಾ ಮಾತ್ರ ಹೇಳಬಲ್ಲರು : ಹಾರ್ದಿಕ್

First Published 23, Jan 2018, 9:33 AM IST
Hardik Patel Attack PM Modi
Highlights

ಖಾಸಗಿ ಕಚೇರಿಗಳ ಎದುರು ಪಕೋಡಾ ಮಾರಾಟ ಮಾಡಿದರೂ, ದಿನಕ್ಕೆ 200 ರು. ಸಂಪಾದನೆಯಾಗುತ್ತದೆ. ಇದೇನು ಉದ್ಯೋಗವಲ್ಲವೇ? ಎಂಬ ಪ್ರಧಾನಿ ಮೋದಿ ವಿರುದ್ಧ ಪಟೇಲ್ ಸಮುದಾಯದ ಹೋರಾಟಗಾರ ಹಾರ್ದಿಕ್ ಪಟೇಲ್ ವಾಗ್ದಾಳಿ ನಡೆಸಿದ್ದಾರೆ.

ನವದೆಹಲಿ: ಖಾಸಗಿ ಕಚೇರಿಗಳ ಎದುರು ಪಕೋಡಾ ಮಾರಾಟ ಮಾಡಿದರೂ, ದಿನಕ್ಕೆ 200 ರು. ಸಂಪಾದನೆಯಾಗುತ್ತದೆ. ಇದೇನು ಉದ್ಯೋಗವಲ್ಲವೇ? ಎಂಬ ಪ್ರಧಾನಿ ಮೋದಿ ವಿರುದ್ಧ ಪಟೇಲ್ ಸಮುದಾಯದ ಹೋರಾಟಗಾರ ಹಾರ್ದಿಕ್ ಪಟೇಲ್ ವಾಗ್ದಾಳಿ ನಡೆಸಿದ್ದಾರೆ.

ಈ ಬಗ್ಗೆ ಸೋಮವಾರ ಟ್ವೀಟ್ ಮಾಡಿರುವ ಹಾರ್ದಿಕ್, ‘ನಿರುದ್ಯೋಗಿಗಳಿಗೆ ರಸ್ತೆ ಬದಿಯಲ್ಲಿ ಪಕೋಡಾ ಮಾರಾಟ ಮಾಡುವಂತೆ ಚಹಾ ಮಾರುವ ವ್ಯಕ್ತಿ ಮಾತ್ರವೇ ಸಲಹೆ ನೀಡಲು ಸಾಧ್ಯ,’ ಎಂದು ಮೋದಿ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

ಸಂದರ್ಶನ ನೀಡಿದ್ದ ಮೋದಿ ಉದ್ಯೋಗದ ಕುರಿತಾದ ಪ್ರಶ್ನೆಗೆ, ‘ಕಚೇರಿ ಮುಂದೆ ಪಕೋಡಾ ಮಾರುವ ವ್ಯಕ್ತಿ ಸಹ ದಿನಕ್ಕೆ 200 ರು. ಸಂಪಾದಿಸುತ್ತಾನೆ. ಇದು ಉದ್ಯೋಗವಲ್ಲವೇ,’ ಎಂದು ಪ್ರಶ್ನಿಸಿದ್ದರು.

loader