ಹನೂರು ಬಿಜೆಪಿ ಟಿಕೆಟ್ ಫೈಟ್’ಗೆ ತೆರೆ; ಯಾರಿಗೆ ಮಣೆ ಹಾಕಿದ್ದಾರೆ ಬಿಎಸ್’ವೈ?

First Published 1, Apr 2018, 9:51 PM IST
Hanuru Constituency Ticket Decided to Parimala Nagappa Son
Highlights

ಹನೂರು ಕ್ಷೇತ್ರದ ಬಿಜೆಪಿ ಟಿಕೆಟ್ ಫೈಟ್’ಗೆ ಕೊನೆಗೂ ತೆರೆ ಬಿದ್ದಿದೆ. ಪರಿಮಳಾ ನಾಗಪ್ಪ, ಸೋಮಣ್ಣ ನಡುವಿನ ಟಿಕೆಟ್ ಗುದ್ದಾಟಕ್ಕೆ ಫುಲ್’ಸ್ಟಾಪ್ ಬಿದ್ದಿದೆ. ಪರಿಮಳಾ ನಾಗಪ್ಪ ಪುತ್ರ ಪ್ರೀತನ್’ಗೆ  ಹನೂರು ಕ್ಷೇತ್ರದ ಟಿಕೆಟ್  ಕೊಡಲು ಬಿಎಸ್’ವೈ ನಿರ್ಧರಿಸಿದ್ದಾರೆ. 

ಬೆಂಗಳೂರು (ಏ. 01): ಹನೂರು ಕ್ಷೇತ್ರದ ಬಿಜೆಪಿ ಟಿಕೆಟ್ ಫೈಟ್’ಗೆ ಕೊನೆಗೂ ತೆರೆ ಬಿದ್ದಿದೆ. ಪರಿಮಳಾ ನಾಗಪ್ಪ, ಸೋಮಣ್ಣ ನಡುವಿನ ಟಿಕೆಟ್ ಗುದ್ದಾಟಕ್ಕೆ ಫುಲ್’ಸ್ಟಾಪ್ ಬಿದ್ದಿದೆ. ಪರಿಮಳಾ ನಾಗಪ್ಪ ಪುತ್ರ ಪ್ರೀತನ್’ಗೆ  ಹನೂರು ಕ್ಷೇತ್ರದ ಟಿಕೆಟ್  ಕೊಡಲು ಬಿಎಸ್’ವೈ ನಿರ್ಧರಿಸಿದ್ದಾರೆ. 

ಬಿಎಸ್​ವೈ ನಿರ್ಧಾರಕ್ಕೆ ಸೋಮಣ್ಣ ಒಪ್ಪಿಗೆ ನೀಡಿದ್ದಾರೆ. ಯಡಿಯೂರಪ್ಪ ಅವರ ತೀರ್ಮಾನಕ್ಕೆ ನಾವು ತಲೆಬಾಗಿದ್ದೇವೆ. ಅವರ ನಿರ್ಧಾರಕ್ಕೆ ನಾನು ಬದ್ಧ ಎಂದು ಬಿಎಸ್​​ವೈ ಜೊತೆ ಸಂಧಾನದ ಸಭೆ ಬಳಿಕ ಸೋಮಣ್ಣ  ಹೇಳಿದ್ದಾರೆ.  

ಸಭೆಯಿಂದ ಹೊರ ಬಂದ ಬಳಿಕ ಹನೂರು ಟಿಕೆಟ್ ಕೈತಪ್ಪಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.  ಟಿಕೆಟ್ ಕೈತಪ್ಪಲು ಕಾರಣವಾದ ಶಿಷ್ಯ ಶಿವಕುಮಾರ್’ನನ್ನು ನೋಡಿ ರೇಗಾಡಿದ್ದಾರೆ.  ನಿನಗೆ ಇದೆ ಇನ್ನು, ನಿಮ್ಮಂತವರಿಂದಲೇ ನಮಗೆ ಹೀಗಾಗ್ತಿರೋದು. ಮುಂದೆ ನಿಂಗೈತೆ ಮಾರಿಹಬ್ಬ ಎಂದು ಫುಲ್ ಗರಂ ಆಗಿದ್ದಾರೆ.  
 

loader