ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಹನುಮಂತನಗರ ಪೊಲೀಸರು 24 ಗಂಟೆ ಒಳಗೆ ಪ್ರಕರಣವನ್ನು ಭೇದಿಸಿದ್ದಾರೆ. ಕ್ರಿಕೆಟ್​​ ಆಡುತ್ತಿದ್ದ ವೇಳೆ ಮೊಬೈಲ್​​ ವಿಚಾರವಾಗಿ ನಡೆದಿದ್ದ ಚಿಕ್ಕ ಗಲಾಟೆ ಕೊಲೆಗೆ ಕಾರಣ ಎನ್ನುವ ಅಂಶ ಬೆಳಕಿಗೆ ಬಂದಿದೆ. ಈ ಪೈಕಿ ಯಶ್ವಂತ್ ಅಲಿಯಾಸ್ ತಿಪ್ಪೆ, ಶ್ರೀನಿವಾಸ್, ಸುಮನ್ ಹಾಗೂ ಮೂವರು ಬಾಲಪರಾಧಿಗಳನ್ನ ಬಂಧಿಸಿದ್ದಾರೆ.. ಅಲ್ಲದೇ ಪ್ರಮುಖ ಆರೋಪಿ ಶೇಖರ್ ಸೇರಿ ಇನ್ನುಳಿದ ಮೂವರು ಆರೋಪಿಗಳು ತಲೆ ಮರೆಸಿಕೊಂಡಿದ್ದು ಹುಡುಕಾಟ ನಡೆಸಿದ್ದಾರೆ..

ಬೆಂಗಳೂರು(ಡಿ.22): ಮಂಗಳವಾರ ಮಧ್ಯಾಹ್ನ ಹರ್ಷ ಎಂಬಾತ ಫೀಸ್​​ ಕಟ್ಟೋಕೆ ಅಂತ ಪಿಇಎಸ್​ ಕಾಲೇಜ್​​ ಬಳಿ ಬಂದಿದ್ದ ಸಂದರ್ಭ ಅಟ್ಯಾಕ್ ಮಾಡಿದ್ದ 9 ಮಂದಿ ಯುವಕರ ಗ್ಯಾಂಗ್​​ ಬ್ಯಾಟ್`​ನಿಂದ ಹಲ್ಲೆ ನಡೆಸಿ, ಚಾಕುವಿನಿಂದ ಇರಿದು ಪರಾರಿಯಾಗಿತ್ತು. ಇದರಿಂದ ಇಡೀ ಏರಿಯಾದಲ್ಲಿ ಒಂದು ರೀತಿಯ ಭಯದ ವಾತಾವರಣ ನಿರ್ಮಾಣವಾಗಿತ್ತು.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಹನುಮಂತನಗರ ಪೊಲೀಸರು 24 ಗಂಟೆ ಒಳಗೆ ಪ್ರಕರಣವನ್ನು ಭೇದಿಸಿದ್ದಾರೆ. ಕ್ರಿಕೆಟ್​​ ಆಡುತ್ತಿದ್ದ ವೇಳೆ ಮೊಬೈಲ್​​ ವಿಚಾರವಾಗಿ ನಡೆದಿದ್ದ ಚಿಕ್ಕ ಗಲಾಟೆ ಕೊಲೆಗೆ ಕಾರಣ ಎನ್ನುವ ಅಂಶ ಬೆಳಕಿಗೆ ಬಂದಿದೆ. ಈ ಪೈಕಿ ಯಶ್ವಂತ್ ಅಲಿಯಾಸ್ ತಿಪ್ಪೆ, ಶ್ರೀನಿವಾಸ್, ಸುಮನ್ ಹಾಗೂ ಮೂವರು ಬಾಲಪರಾಧಿಗಳನ್ನ ಬಂಧಿಸಿದ್ದಾರೆ.. ಅಲ್ಲದೇ ಪ್ರಮುಖ ಆರೋಪಿ ಶೇಖರ್ ಸೇರಿ ಇನ್ನುಳಿದ ಮೂವರು ಆರೋಪಿಗಳು ತಲೆ ಮರೆಸಿಕೊಂಡಿದ್ದು ಹುಡುಕಾಟ ನಡೆಸಿದ್ದಾರೆ..

ಹಲ್ಲೆ ನಡೆದ ಬಳಿಕ ರಕ್ತಸ್ರಾವವಾಗುತ್ತಿದ್ದರೂ ಸ್ಥಳೀಯ ಆಸ್ಪತ್ರೆಗಳು ಚಿಕಿತ್ಸೆ ನೀಡಲು ನಿರಾಕರಿಸಿದ್ದವು. ಮೂರು ಗಂಟೆಗಳ ನಂತರ ಜಯದೇವ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಹರ್ಷ ಸಾವನ್ನಪ್ಪಿದ್ದ. ಒಂದೆಡೆ ಗೆಳೆಯರ ಮುಂಗೋಪ ಹಾಗೂ ಆಸ್ಪತ್ರೆಗಳ ನಿರ್ಲಕ್ಷ ಒಬ್ಬ ಯುವಕನನ್ನು ಬಲಿತೆಗೆದುಕೊಂಡಿದ್ದು ಮಾತ್ರ ವಿಪರ್ಯಾಸ..