ಉಮೇಶ್ ರೆಡ್ಡಿ ತನ್ನ ಹೋರಾಟ ಮಾತ್ರ ನಿಲ್ಲಿಸಿಲ್ಲ. ನೇಣುಕುಣಿಕೆಯಿಂದ ಪಾರಾಗಲು ರಾಷ್ಟ್ರಪತಿಯ ಮೊರೆ ಹೋಗಲು ನಿರ್ಧಾರಿಸಿದ್ದಾನಂತೆ. ಅಲ್ಲಿ ಕ್ಷಮಾಧಾನ ಸಿಕ್ಕರೆ ರೆಡ್ಡಿ ಗಲ್ಲು ಕುಣಿಕೆಯಿಂದ ಪಾರಾಗುತ್ತಾನೆ. ಆದರೆ, ಘೋರ ಅಪರಾಧಗಳನ್ನು ಎಸಗಿರುವ ಈತನಿಗೆ ಕ್ಷಮಾಧಾನ ಸಿಗುವ ಸಾಧ್ಯತೆ ತೀರಾ ಕಡಿಮೆಯೇ ಎಂದೆನ್ನಲಾಗುತ್ತಿದೆ.
ಬೆಳಗಾವಿ(ಅ. 08): ವಿಕೃತ ಕಾಮಿ ಉಮೇಶ್ ರೆಡ್ಡಿಯ ಕಾನೂನಾತ್ಮಕ ಹೋರಾಟದ ಎಲ್ಲ ಬಾಗಿಲುಗಳು ಬಂದ್ ಆಗಿವೆ. ಉಮೇಶ ರೆಡ್ಡಿ ಸುಪ್ರೀಂ ಕೋರ್ಟಿನಲ್ಲಿ ಸಲ್ಲಿಸಿದ್ದ ಅರ್ಜಿ ವಜಾಗೊಂಡ ಹಿನ್ನೆಲೆಯಲ್ಲಿ ಈತನಿಗೆ ಗಲ್ಲು ಗ್ಯಾರಂಟಿ ಎಂಬುದು ಉನ್ನತ ಮೂಲಗಳ ಮಾಹಿತಿ. ಗಲ್ಲುಗೇರಿಸಲು ಕೆಲವು ಕಾನೂನಾತ್ಮಕ ಪ್ರಕ್ರಿಯೆಗಳು ಪೂರ್ಣಗೊಳ್ಳಬೇಕಾಗಿದೆ. ಬ್ಲ್ಯಾಕ್ ವಾರೆಂಟ್ ಜಾರಿಯಾದ ಬಳಿಕ ಗಲ್ಲಿಗೇರಿಸಲು ಕ್ಷಣಗಣನೆ ಆರಂಭವಾಗಲಿದೆ.
ಬೆಳಗಾವಿಯಲ್ಲೇ ಗಲ್ಲು?
ನಮ್ಮ ರಾಜ್ಯದಲ್ಲಿ ಗಲ್ಲು ಶಿಕ್ಷೆ ನೀಡುವ ವ್ಯವಸ್ಥೆ ಇರೋದು ಮೂರೇ ಜೈಲುಗಳಲ್ಲಿ. ಒಂದು ಬಳ್ಳಾರಿ ಜೈಲು. ಇನ್ನೊಂದು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲು, ಮತ್ತೊಂದು ಬೆಳಗಾವಿ ಹಿಂಡಲಗಾ ಜೈಲು. ಸದ್ಯಕ್ಕೆ ಹಿಂಡಲಗಾ ಜೈಲಿನಲ್ಲಿ ಗಲ್ಲು ಶಿಕ್ಷೆ ನೀಡುವ ವ್ಯವಸ್ಥೆ ಮಾತ್ರ ಇನ್ನೂ ಜೀವಂತವಾಗಿದೆ. ಹೀಗಾಗಿ ಈ ಜೈಲಿನಲ್ಲಿಯೇ ಉಮೇಶ್ ರೆಡ್ಡಿಯನ್ನ ಗಲ್ಲಿಗೇರಿಸುವದು ಖಚಿತವಾದಂತಾಗಿದೆ.
ಆದ್ರೆ, ಉಮೇಶ್ ರೆಡ್ಡಿ ತನ್ನ ಹೋರಾಟ ಮಾತ್ರ ನಿಲ್ಲಿಸಿಲ್ಲ. ನೇಣುಕುಣಿಕೆಯಿಂದ ಪಾರಾಗಲು ರಾಷ್ಟ್ರಪತಿಯ ಮೊರೆ ಹೋಗಲು ನಿರ್ಧಾರಿಸಿದ್ದಾನಂತೆ. ಅಲ್ಲಿ ಕ್ಷಮಾಧಾನ ಸಿಕ್ಕರೆ ರೆಡ್ಡಿ ಗಲ್ಲು ಕುಣಿಕೆಯಿಂದ ಪಾರಾಗುತ್ತಾನೆ. ಆದರೆ, ಘೋರ ಅಪರಾಧಗಳನ್ನು ಎಸಗಿರುವ ಈತನಿಗೆ ಕ್ಷಮಾಧಾನ ಸಿಗುವ ಸಾಧ್ಯತೆ ತೀರಾ ಕಡಿಮೆಯೇ ಎಂದೆನ್ನಲಾಗುತ್ತಿದೆ. 1983ರ ಬಳಿಕ ಕರ್ನಾಟಕದಲ್ಲಿ ಮೊದಲ ಬಾರಿಗೆ ಗಲ್ಲುಶಿಕ್ಷೆ ಜಾರಿಯಾಗುವ ಕಾಲ ಬಂದಿದೆ.
- ಮಂಜುನಾಥ್ ಎಚ್.ಪಾಟೀಲ್, ಸುವರ್ಣ ನ್ಯೂಸ್, ಬೆಳಗಾವಿ
