'ಅವ್ರನ್ನೆಲ್ಲಾ ನೇಣಿಗೇರಿಸಿ: ಬಾಬಾ ರಾಮದೇವ್..!

Hang Godmen Involved In Illegal Activities, Says Baba Ramdev
Highlights

ತಪ್ಪು ಮಾಡಿದ ಸ್ವಯಂ ಘೋಷಿತ ದೇವಮಾನವರನ್ನು ಗಲ್ಲಿಗೇರಿಸಿ

ಬಾಬಾ ಆದರೆನಂತೆ ಕಾನೂನು ಎಲ್ಲರಿಗೂ ಒಂದೇ

ರಾಜಸ್ಥಾನದಲ್ಲಿ ಬಾಬಾ ರಾಮದೇವ್ ಹೇಳಿಕೆ

ಕೇಸರಿ ಬಟ್ಟೆ ಧಾರ್ಮಿಕ ನಾಯಕರ ಮಾನದಂಡವಲ್ಲ 

ಕೋಟಾ(ಜೂ.20): ಅಕ್ರಮ ಚಟುವಟಿಕೆಗಳಲ್ಲಿ ಭಾಗಿಗಳಾಗಿರುವ ಸ್ವಯಂ ಘೋಷಿತ ದೇವಮಾನವರು, ಬಾಬಾಗಳನ್ನು ಗಲ್ಲಿಗೇರಿಸಬೇಕು ಎಂದು ಯೋಗ ಗುರು ಬಾಬಾ ರಾಮ್ ದೇವ್ ಹೇಳಿದ್ದಾರೆ. ರಾಜಸ್ಥಾನದ ಕೋಟಾದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ರಾಮದೇವ್, 'ಮಿತಿ ಮೀರುವವರನ್ನು ಜೈಲಿಗಟ್ಟುವುದು ಮಾತ್ರವಲ್ಲ, ಮರಣದಂಡನೆ ಶಿಕ್ಷೆ ವಿಧಿಸಬೇಕು' ಎಂದು ಹೇಳಿದರು. 

ಕೇಸರಿ ಬಟ್ಟೆಯೊಂದೇ ಧಾರ್ಮಿಕ ನಾಯಕರ ಮಾನದಂಡವಾಗಬಾರದು, ಎಲ್ಲಾ ಕೆಲಸಗಳಿಗೆ ಒಂದು ಶಿಷ್ಟಾಚಾರವಿದೆ, ಅದರಂತೆ ಅದರದೇ ಆದ ಮಿತಿಗಳೂ ಇವೆ. ಬಾಬಾ, ಯೋಗಿಗಳಿಗೆ ಸಹ ಇದು ಅನ್ವಯ ಎಂದು ರಾಮದೇವ್ ಅಭಿಪ್ರಾಯಪಟ್ಟರು.

ಕೇಸರಿ ಬಣ್ಣದ ಬಟ್ಟೆ ಧರಿಸಿದ ಮಾತ್ರಕ್ಕೆ ಯಾರೂ ದೇವಮಾನವರಾಗುವುದಿಲ್ಲ ಎಂದಿರುವ ರಾಮದೇವ್, ತಪ್ಪು ಮಾಡಿದವರು ಯಾರೇ ಆದರೂ ಅವರಿಗೆ ಸೂಕ್ತ ಶಿಕ್ಷೆಯಾಗಲೇಬೇಕು ಎಂದು ಹೇಳಿದರು. ಸ್ವಯಂಘೊಷಿತ ದೇವಮಾನವನೊಬ್ಬರ ಮೇಲೆ ಅತ್ಯಾಚಾರ, ಹತ್ಯೆ ಪ್ರಕರಣದ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ರಾಮದೇವ್ ಅವರ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ.
 

loader