ಆರು಼ಷಿ-ಹೇಮರಾಜ್ ಜೋಡಿ ಕೊಲೆ ಪ್ರಕರಣದಲ್ಲಿ 4 ವರ್ಷಗಳ ಕಾಲ ಜೈಲು ಪಾಲಾಗಿದ್ದ ಡಾ. ರಾಜೇಶ್ ಮತ್ತು ನೂಪುರ್ ತಲ್ವಾರ್ ದಂಪತಿಗಳನ್ನು ಗಾಜಿಯಾ ಬಾದ್ ದಾಸ್ನಾ ಜೈಲಿನಿಂದ ಇಂದು ಬೀಳ್ಕೊಡಲಾಯಿತು.

ನವದೆಹಲಿ (ಅ.17): ಆರು಼ಷಿ-ಹೇಮರಾಜ್ ಜೋಡಿ ಕೊಲೆ ಪ್ರಕರಣದಲ್ಲಿ 4 ವರ್ಷಗಳ ಕಾಲ ಜೈಲು ಪಾಲಾಗಿದ್ದ ಡಾ. ರಾಜೇಶ್ ಮತ್ತು ನೂಪುರ್ ತಲ್ವಾರ್ ದಂಪತಿಗಳನ್ನು ಗಾಜಿಯಾ ಬಾದ್ ದಾಸ್ನಾ ಜೈಲಿನಿಂದ ಇಂದು ಬೀಳ್ಕೊಡಲಾಯಿತು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

2013 ರಲ್ಲಿ ನಡೆದ ಅರುಷಿ-ಹೇಮರಾಜ್ ಜೋಡಿ ಹತ್ಯೆ ಪ್ರಕರಣದಲ್ಲಿ ತಲ್ವಾರ್ ದಂಪತಿಗಳಿಗೆ ತ್ವರಿತ ನ್ಯಾಯಾಲಯ ಡಾಸ್ನಾ ಜಿಲ್ಲಾ ಜೈಲಿಗೆ ಕಳುಹಿಸಿತ್ತು. ಮೊನ್ನೆ ಇದರ ವಿಚಾರಣೆ ನಡೆಸಿದ ಅಲಹಾಬಾದ್ ಹೈಕೋರ್ಟ್ ಅವರನ್ನು ಖುಲಾಸೆಗೊಳಿಸಿದೆ. ಪ್ರಾಥಮಿಕ ತನಿಖಾ ವರದಿ ಸಂದರ್ಭಕ್ಕೆ ತಕ್ಕನಾಗಿದೆ. ಅದನ್ನು ಪರಿಗಣಿಸಲಾಗುವುದಿಲ್ಲ ಎಂದು ಅಲಹಬಾದ್ ಹೈಕೋರ್ಟ್ ತೀರ್ಪು ನೀಡಿದೆ.

ಜೈಲಿನಿಲ್ಲಿರುವ ಸಹ ಖೈದಿಗಳಿಗೆ ಪುಸ್ತಕಗಳು, ಬಟ್ಟೆ, ಶೂ ಜೊತೆ ಇತ್ಯಾದಿಗಳನ್ನು ನೀಡಿದ್ದಾರೆ. ತಲ್ವಾರ್ ದಂಪತಿಗಳ ನಡೆಯ ಬಗ್ಗೆ ಸಹಖೈದಿಗಳು ಮೆಚ್ಚುಗೆ ಸೂಚಿಸಿದ್ದಾರೆ.