ಲಸಕ್ಕೆ ಬಾರದ ವ್ಯಕ್ತಿಗಳನ್ನು ಕತ್ತೆಗೆ ಹೋಲಿಸುತ್ತೇವೆ. ಆದರೆ, ಕಾಶ್ಮೀರದಲ್ಲಿ ತಹಶೀಲ್ದಾರ್‌ ಹುದ್ದೆಗೆ ಪರೀಕ್ಷೆ ಬರೆಯಲು ಕತ್ತೆಯೊಂದಕ್ಕೆ ಹಾಲ್‌ ಟಿಕೆಟ್‌ ನೀಡಲಾಗಿದೆ. 

ಕೆಲಸಕ್ಕೆ ಬಾರದ ವ್ಯಕ್ತಿಗಳನ್ನು ಕತ್ತೆಗೆ ಹೋಲಿಸುತ್ತೇವೆ. ಆದರೆ, ಕಾಶ್ಮೀರದಲ್ಲಿ ತಹಶೀಲ್ದಾರ್‌ ಹುದ್ದೆಗೆ ಪರೀಕ್ಷೆ ಬರೆಯಲು ಕತ್ತೆಯೊಂದಕ್ಕೆ ಹಾಲ್‌ ಟಿಕೆಟ್‌ ನೀಡಲಾಗಿದೆ.

ಹೌದು, ನಂಬಲಸಾಧ್ಯವಾದರೂ ಸತ್ಯ. ಕುಚೇಷ್ಟೆಯ ಪರಮಾವಧಿ ಎಂಬಂತೆ ಜಮ್ಮು- ಕಾಶ್ಮೀರ ಸೇವಾ ಆಯ್ಕೆ ಮಂಡಳಿ ಕಚುರ್‌ ಖಾರ್‌ (ಕಂದು ಕತ್ತೆ)ಯ ಹೆಸರಿನಲ್ಲಿ ಪ್ರವೇಶ ಪತ್ರ ಹೊರಡಿಸಿದೆ.

ಕತ್ತೆಯ ಫೋಟೋ ಇರುವ ಹಾಲ್‌ ಟಿಕೆಟ್‌ ಇದೀಗ ಟ್ವೀಟರ್‌ ಮತ್ತು ಫೇಸ್‌ಬುಕ್‌ನಲ್ಲಿ ವೈರಲ್‌ ಆಗಿದೆ. ಅಂದಹಾಗೆ ಈ ರೀತಿ ಆಗುತ್ತಿರುವುದು ಇದೇ ಮೊದಲಲ್ಲ. ಎರಡು ವರ್ಷದ ಹಿಂದೆ ಹಸುವೊಂದಕ್ಕೆ ಹಾಲ್‌ ಟಿಕೆಟ್‌ ನೀಡಿ ಜಮ್ಮು ಕಾಶ್ಮೀರ ಆಡಳಿತ ನಗೆಪಾಟಲಿಗೀಡಾಗಿತ್ತು.