ಗುರುವಾರ ರಾತ್ರಿ ಪೊಲೀಸರು ಮಾಧವನಗರ ಬಳಿ ವಾಹನಗಳ ತಪಾಸಣೆ ಕೈಗೊಂಡಿದ್ದರು. ಈ ವೇಳೆ ಡಸ್ಟರ್ ಕಾರ್ ಅನ್ನು ತಡೆದ ಪೊಲೀಸರು ಪರಿಶೀಲನೆ ಆರಂಭಿಸಿದ್ದರು. ಈ ವೇಳೆ ವಾಹನದಲ್ಲಿ ಎರಡು ಬ್ಯಾಗ್‌ನಲ್ಲಿ 49.50 ಲಕ್ಷ ಹಣ ಕಂಡು ಬಂದಿದೆ.

ಬೆಂಗಳೂರು(ನ.19): ದಾಖಲೆಗಳಿಲ್ಲದೆ ಕಾರಿನಲ್ಲಿ 49.50 ಲಕ್ಷ ಸಾಗಿಸುತ್ತಿದ್ದ ಆರು ಮಂದಿಯನ್ನು ಸಿಸಿಬಿ ಪೊಲೀಸರು ಗುರುವಾರ ರಾತ್ರಿ ಶೇಷಾದ್ರಿಪುರಂನ ಮಾದವನಗರದ ಬಳಿ ಬಂಸಿದ್ದಾರೆ.

ಗುರುವಾರ ರಾತ್ರಿ ಪೊಲೀಸರು ಮಾಧವನಗರ ಬಳಿ ವಾಹನಗಳ ತಪಾಸಣೆ ಕೈಗೊಂಡಿದ್ದರು. ಈ ವೇಳೆ ಡಸ್ಟರ್ ಕಾರ್ ಅನ್ನು ತಡೆದ ಪೊಲೀಸರು ಪರಿಶೀಲನೆ ಆರಂಭಿಸಿದ್ದರು. ಈ ವೇಳೆ ವಾಹನದಲ್ಲಿ ಎರಡು ಬ್ಯಾಗ್‌ನಲ್ಲಿ 49.50 ಲಕ್ಷ ಹಣ ಕಂಡು ಬಂದಿದೆ. ಆದರೆ, ಹಣ ಸಾಗಿಸುತ್ತಿದ್ದವರು ಯಾವುದೇ ದಾಖಲೆಗಳನ್ನು ಒದಗಿಸಿಲ್ಲ. ಈ ಹಿನ್ನೆಲೆಯಲ್ಲಿ ಹಣ ಜಪ್ತಿ ಮಾಡಿದ ಪೊಲೀಸರು ಆದಾಯ ತೆರಿಗೆ ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ. ಘಟನೆ ಸಂಬಂಧ ಆರು ಮಂದಿಯನ್ನು ಬಂಧಿಸಲಾಗಿದೆ. ಶಿವಮೊಗ್ಗದಿಂದ ಹಣ ತರಲಾಗುತ್ತಿತ್ತು ಎಂದು ವಿಚಾರಣೆ ವೇಳೆ ತಿಳಿದು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.