1986ರಲ್ಲಿ ಕೂಡ್ಲು ಗೇಟ್ ಸಿಂಗಸಂದ್ರದಲ್ಲಿ ಬಿಡಿಎ ಹೆಚ್'ಎಲ್'ಗೆ 324 ಎಕರೆ ಬಡಾವಣೆ ನಿರ್ಮಿಸಲು ಜಾಗವನ್ನು ನೀಡಿತ್ತು. ಅದರಲ್ಲಿ 38 ಎಕರೆ ಜಾಗವನ್ನು ಪಾರ್ಕ್ ಹಾಗೂ ರಸ್ತೆಗಾಗಿ ಬಿಟ್ಟು ಸುಮಾರು 3900 ಸೈಟ್'ಗಳನ್ನು 2011ರಲ್ಲಿ ಹಂಚಿಕೆ ಮಾಡಲಾಗಿತ್ತು.  

ಬೆಂಗಳೂರು(ಸೆ.12): ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್'ಗೆ ಸೇರಿದ್ದ ಬಡಾವಣೆಗಾಗಿ ನೀಡಲಾಗಿದ್ದ ಜಾಗವನ್ನು ಏರ್'ಕ್ರಾಫ್ಟ್ ಎಂಪ್ಲಾಯಿಸ್ ಗೃಹನಿರ್ಮಾಣ ಸಹಕಾರ ಸಂಘದ ಮಾಜಿ ಅಧ್ಯಕ್ಷ ಹಾಗೂ ನಾಗಮಂಗಲ ಮಾಜಿ ಶಾಸಕ ಸುರೇಶ್ ಗೌಡಾ ಅಕ್ರಮವಾಗಿ 39 ಸೈಟ್'ಗಳನ್ನಾಗಿ ಪರಿವರ್ತಿಸಿ ಮಾರಾಟ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

1986ರಲ್ಲಿ ಕೂಡ್ಲು ಗೇಟ್ ಸಿಂಗಸಂದ್ರದಲ್ಲಿ ಬಿಡಿಎ ಹೆಚ್'ಎಲ್'ಗೆ 324 ಎಕರೆ ಬಡಾವಣೆ ನಿರ್ಮಿಸಲು ಜಾಗವನ್ನು ನೀಡಿತ್ತು. ಅದರಲ್ಲಿ 38 ಎಕರೆ ಜಾಗವನ್ನು ಪಾರ್ಕ್ ಹಾಗೂ ರಸ್ತೆಗಾಗಿ ಬಿಟ್ಟು ಸುಮಾರು 3900 ಸೈಟ್'ಗಳನ್ನು 2011ರಲ್ಲಿ ಹಂಚಿಕೆ ಮಾಡಲಾಗಿತ್ತು. ಇದರಲ್ಲಿ ಪಾರ್ಕ್ ಹಾಗೂ ಆಟದ ಮೈದಾನಕ್ಕೆಂದು ಮೀಸಲಿಟ್ಟ ಸರ್ವೇ ನಂ 32/2, 103/3, 105/3, 106/5 ಮತ್ತು 6ರ ಜಾಗವನ್ನು ಏರ್'ಕ್ರಾಫ್ಟ್ ಎಂಪ್ಲಾಯಿಸ್ ಗೃಹನಿರ್ಮಾಣ ಸಹಕಾರ ಸಂಘ ಸುಮಾರು 39 ಸೈಟ್'ಗಳನ್ನು ಮಾಡಿ ಬಡವಣೆಯನ್ನಾಗಿ ಪರಿವರ್ತಿಸಿದೆ. ಈ ಅಕ್ರಮಗಳಿಗೆಲ್ಲ ಎಚ್ಎಎಲ್ ಗೃಹನಿರ್ಮಾಣ ಮಂಡಳಿ ಮಾಜಿ ಅಧ್ಯಕ್ಷ ಹಾಗೂ ನಾಗಮಗಲ ಮಾಜಿ ಶಾಸಕ ಸುರೇಶ್ ಗೌಡಾ ಅವರೇ ಪ್ರಮುಖ ಕಾರಣ ಎನ್ನುವುದು ಎಚ್ಎಎಲ್ ನೌಕರರ ಆರೋಪವಾಗಿದೆ.

ಈ ಬಗ್ಗೆ ಮಾತನಾಡಿದ ಎಚ್ಎಎಲ್ ನೌಕರ ಶಶಿಧರ್, 2015 ರಲ್ಲಿ 38 ಎಕರೆಯಲ್ಲಿ ಸುಮಾರು 8 ಎಕರೆ ಪಾರ್ಕ್ ಜಾಗದಲ್ಲಿ 100ಕ್ಕೂ ಹೆಚ್ಚು ನಿವೇಶನವನ್ನಾಗಿ ಪರಿವರ್ತಿಸಲಾಗಿದೆ. ಉಳಿದ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದು, ಪಾರ್ಕ್ ಕಾಣಿಸ್ತಿಲ್ಲ. ಅಚ್ಚರಿ ಅಂದ್ರೆ ಆ ನಿವೇಶನವನ್ನು ಹೆಚ್ಎಎಲ್ ನ ನಿವೃತ್ತ ನೌಕರರಿಗೆ ಹಂಚಿಕೆ ಮಾಡುವುದಾಗಿ ಹೇಳಿ ಅವರಿಂದ 30 ರಿಂದ 40 ಲಕ್ಷ ರೂಪಾಯಿ ಹಣ ಪಡೆದು ಹಲವು ಮಂದಿಗೆ ಸೈಟೂ ನೀಡದೆ, ಹಣವೂ ಕೊಡದೆ ವಂಚಿಸಲಾಗಿದೆಯೆಂದು ಆರೋಪಿಸಿದ್ದಾರೆ.