ಲಾಹೋರ್‌[ಅ.01]: ಮುಂಬೈ ದಾಳಿ ಪ್ರಕರಣ ಸೇರಿ ಭಾರತದಲ್ಲಿ ಹಲವು ಸ್ಫೋಟ ಪ್ರಕರಣಗಳ ಮಾಸ್ಟರ್‌ಮೈಂಡ್‌ ಆಗಿರುವ ಜಮಾತ್‌ ಉದ್‌ ದವಾ ಉಗ್ರ ಹಫೀಜ್‌ ಸಯೀದ್‌ ಪ್ರಾಣ ಬೆದರಿಕೆ ಎದುರಿಸುತ್ತಿದ್ದಾನೆ ಎಂದು ಆತನ ಪರ ವಕೀಲರು ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದಾರೆ.

ಹಫೀಜ್‌, ಅಜರ್‌ ವಿರುದ್ಧ ಕ್ರಮಕ್ಕೆ ಪಾಕಿಸ್ತಾನಕ್ಕೆ ಅಮೆರಿಕ ವಾರ್ನಿಂಗ್!

ಈ ಹಿನ್ನೆಲೆಯಲ್ಲಿ ಮುಂಬೈ ದಾಳಿಗೆ ಹಣ ಸಹಾಯ ಮಾಡಿದ ಪ್ರಕರಣದಲ್ಲಿ ಸಯೀದ್‌ ಭಾಗಿಯಾಗಿರುವ ಪ್ರಕರಣವನ್ನು ಪಾಕಿಸ್ತಾನದ ಪಂಜಾಬ್‌ ಪ್ರಾಂತ್ಯದ ಗುಜ್ರನ್‌ವಾಲಾ ನ್ಯಾಯಾಲಯದಿಂದ ಲಾಹೋರ್‌ ನ್ಯಾಯಾಲಯಕ್ಕೆ ವರ್ಗಾಯಿಸಲು ನಿರ್ಧರಿಸಲಾಗಿದೆ.

UAPA ತಿದ್ದುಪಡಿ ಕಾನೂನು: ದಾವೂದ್ ಸೇರಿ ನಾಲ್ವರು ಉಗ್ರ ಪಟ್ಟಿಗೆ!

ಈ ಕುರಿತು ಸಯೀದ್‌ ಮತ್ತು ಪ್ರಕರಣದ ಇತರೆ ಆರೋಪಿಗಳು ಮಾಡಿದ್ದ ಮನವಿಯನ್ನು ಲಾಹೋರ್‌ ಹೈಕೋರ್ಟ್‌ನ ಮಾನ್ಯ ಮಾಡಿದೆ. ಇದು ಪ್ರಕರಣದಿಂದ ಸಯೀದ್‌ ಬಚಾವ್‌ಗೆ ಮಾಡಿದ ತಂತ್ರ ಎಂದು ಹೇಳಲಾಗಿದೆ.