ಟ್ರಂಪ್ ನಿರ್ಧಾರಕ್ಕೆ ವ್ಯಾಪಕ ವಿರೋಧ : ಪತ್ನಿಯಿಂದಲೂ ಅತೃಪ್ತಿ

H1B visa rule change: Trump Wife oppose
Highlights

ದೇಶದೊಳಕ್ಕೆ ಅಕ್ರಮವಾಗಿ ಒಳನುಸುಳುವ ಕುಟುಂಬಗಳಿಂದ ಅವರ ಮಕ್ಕಳನ್ನು ಪ್ರತ್ಯೇಕಗೊಳಿಸುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇತೃತ್ವದ ಅಮೆರಿಕ ಸರ್ಕಾ ರದ ವಿವಾದಾತ್ಮಕ ನಿರ್ಧಾರ ವ್ಯಾಪಕ ವಿರೋಧಕ್ಕೆ ಕಾರಣ ವಾಗಿದೆ. 

ವಾಷಿಂಗ್ಟನ್: ದೇಶದೊಳಕ್ಕೆ ಅಕ್ರಮವಾಗಿ ಒಳನುಸುಳುವ ಕುಟುಂಬಗಳಿಂದ ಅವರ ಮಕ್ಕಳನ್ನು ಪ್ರತ್ಯೇಕಗೊಳಿಸುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇತೃತ್ವದ ಅಮೆರಿಕ ಸರ್ಕಾ ರದ ವಿವಾದಾತ್ಮಕ ನಿರ್ಧಾರ ವ್ಯಾಪಕ ವಿರೋಧಕ್ಕೆ ಕಾರಣ ವಾಗಿದೆ. ವೈದ್ಯರು, ವಕೀಲರು, ಧಾರ್ಮಿಕ ನಾಯಕರು ಮಾತ್ರವೇ ಅಲ್ಲದೆ, ಸ್ವತಃ ಅಮೆರಿಕದ ಪ್ರಥಮ ಮಹಿಳೆಯೂ ಆದ ಟ್ರಂಪ್ ಪತ್ನಿ ಮೆಲಾನಿಯಾ ಟ್ರಂಪ್ ಅವರೇ ಇದೆಲ್ಲ ನೋಡಲಾಗುತ್ತಿಲ್ಲ ಎಂದ ಅತೃಪ್ತಿ ವ್ಯಕ್ತಪಡಿಸಿದರು. 

ಅಕ್ರಮ ವಲಸೆ ಸಮಸ್ಯೆ ತಡೆಗೆ ಮೆಕ್ಸಿಕೋ ಗಡಿಯಲ್ಲಿ ಗೋಡೆ ಸೇರಿದಂತೆ ಹಲವು ಭರವಸೆಗಳನ್ನು ಚುನಾವಣೆ ಪೂರ್ವದಲ್ಲಿ ನೀಡಿದ್ದ ಟ್ರಂಪ್ ಅವರು, ಕಳೆದ ಮೇನಲ್ಲಿ ಶೂನ್ಯ ಸಹಿಷ್ಣುತೆಯ ವಲಸೆ ನೀತಿಯೊಂದನ್ನು ಜಾರಿಗೆ  ತಂದಿದ್ದಾರೆ. ಯಾರೇ ಅಮೆರಿಕ ಗಡಿಯೊಳಕ್ಕೆ ಅಕ್ರಮವಾಗಿ ನುಸುಳಿದರೆ, ಅವರನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸ ಲಾಗುತ್ತದೆ. ಅವರ ಜತೆಯಲ್ಲಿ ಮಕ್ಕಳಿದ್ದರೆ, ಪೋಷಕರಿಂದ ಪ್ರತ್ಯೇಕಿಸಿ, ನಿರಾಶ್ರಿತರ ಕೇಂದ್ರಕ್ಕೆ ರವಾನಿಸಲಾಗುತ್ತಿದೆ.

ಈವರೆಗೆ 2 ಸಾವಿರ ಮಕ್ಕಳನ್ನು ಈ ರೀತಿ ಅವರ ಪೋಷಕರಿಂದ ಪ್ರತ್ಯೇಕಿಸಲಾಗಿದೆ. ಮುಂದಿನ ದಿನಗಳಲ್ಲಿ ಒಳನುಸುಳುವವರಿಗೆ ಇದು ಎಚ್ಚರಿಕೆ ಗಂಟೆಯಾಗಲಿದೆ ಎಂದು ಅಮೆರಿಕ ಹೇಳಿಕೊಳ್ಳುತ್ತಿದೆ. ಆದರೆ ಇದಕ್ಕೆ ಸಮಾಜದ ವಿವಿಧ ಸ್ತರಗಳು ಮಾತ್ರವೇ ಅಲ್ಲದೆ ಟ್ರಂಪ್‌ರ ಪತ್ನಿ ಮೆಲಾನಿಯ ವಿರೋಧ ವ್ಯಕ್ತಪಡಿಸಿದ್ದಾರೆ. ಮಕ್ಕಳು ಅವರ ಕುಟುಂಬದಿಂದ ಪ್ರತ್ಯೇಕಗೊಳ್ಳುವುದನ್ನು ನೋಡ ಲು ನಾನು ದ್ವೇಷಿಸುತ್ತೇನೆ ಎಂದಿದ್ದಾರೆ ಮೆಲಾನಿಯಾ.

loader