ಎಚ್-1ಬಿ ವೀಸಾ ವಿಚಾರವನ್ನು ಬಹಳ ಗಂಭೀರವಾಗಿ ಪರಿಗಣಿಸುವುದಿಲ್ಲ. ನಮಗೆ ಅದು ಆದ್ಯತೆಯೂ ಅಲ್ಲ ಎಂದು ಅಮೇರಿಕಾ ಭಾರತಕ್ಕೆ ಹೇಳಿದೆ.
ನವದೆಹಲಿ (ಮಾ.04): ಎಚ್-1ಬಿ ವೀಸಾ ವಿಚಾರವನ್ನು ಬಹಳ ಗಂಭೀರವಾಗಿ ಪರಿಗಣಿಸುವುದಿಲ್ಲ. ನಮಗೆ ಅದು ಆದ್ಯತೆಯೂ ಅಲ್ಲ ಎಂದು ಅಮೇರಿಕಾ ಭಾರತಕ್ಕೆ ಹೇಳಿದೆ.
ಎಚ್ –ಬಿ ವೀಸಾ ವಿಚಾರ ನಮ್ಮ ಆದ್ಯತೆಯಲ್ಲ. ಇದು ವಲಸೆ ನೀತಿಯ ಒಂದು ಅಂಗವೆಂದು ಅಮೇರಿಕಾ ಹೇಳಿದೆ. ಎಚ್1-ಬಿ ವೀಸಾ ಬಳಕೆಯನ್ನು ಮೊಟಕುಗೊಳಿಸಲು ಟ್ರಂಪ್ ಆಡಳಿತವು ಕಾರ್ಯಕಾರಿ ಆದೇಶವನ್ನು ತಂದಿತ್ತು. ಇದು ಚರ್ಚೆಗೆ ಕಾರಣವಾಗಿತ್ತು.
ತಂತ್ರಜ್ಞಾನ ವಲಯಕ್ಕೆ ಭಾರತೀಯರ ಕೊಡುಗೆ ಅಪಾರ ಎನ್ನುವುದನ್ನು ಅಮೇರಿಕಾ ಮನಗಂಡಿದೆ. ಹಾಗಾಗಿ ವೀಸಾ ವಿಚಾರಕ್ಕೆ ಆದ್ಯತೆ ನೀಡುವುದಿಲ್ಲ. ಇದು ವಲಸೆ ನೀತಿಯ ಒಂದು ಭಾಗವೆಂದು ಹೇಳಿದೆ.
