ರೈತರ ಸಾಲ ಮನ್ನಾ ವಿಚಾರವನ್ನು ವಿಧಾನಸಭೆಯಲ್ಲಿಂದು ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಪ್ರಸ್ತಾಪಿಸಿದ್ದಾರೆ.
ಬೆಂಗಳೂರು (ಮಾ.27): ರೈತರ ಸಾಲ ಮನ್ನಾ ವಿಚಾರವನ್ನು ವಿಧಾನಸಭೆಯಲ್ಲಿಂದು ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಪ್ರಸ್ತಾಪಿಸಿದ್ದಾರೆ.
ಸರ್ಕಾರಕ್ಕೆ ರೈತರ ಸಾಲಮನ್ನಾ ಮಾಡಲು ಇಚ್ಛಾಶಕ್ತಿ ಕೊರತೆಯಿದೆ. ಬಜೆಟ್ನಲ್ಲಿ ಮೀಸಲಿಟ್ಟ ಹಣವನ್ನು ಸರ್ಕಾರ ಸರಿಯಾಗಿ ಖರ್ಚು ಮಾಡುತ್ತಿಲ್ಲ. ನಾನು ಸಿಎಂ ಆಗಿದ್ದಾಗ ಕೇವಲ 20 ದಿನದಲ್ಲಿ ಸಾಲಮನ್ನಾ ಮಾಡಿದ್ದೆ ಎಂದಿದ್ದಾರೆ.
2013-14 ರಲ್ಲಿ ಬಜೆಟ್ ಅಂದಾಜಿನಂತೆ 23,590 ಕೋಟಿ ಖರ್ಚಾಗಿಲ್ಲ. 2014 -15 ನೇ ಸಾಲಿನಲ್ಲಿ 22, 571 ಕೋಟಿ ಖರ್ಚಾಗಿಲ್ಲ. 2015-16 ನೇ ಸಾಲಿನಲ್ಲಿ 18,000 ಕೋಟಿ ಖರ್ಚಾಗಿಲ್ಲ. 4 ವರ್ಷಗಳಲ್ಲಿ ಒಟ್ಟು 80 ಸಾವಿರ ಕೋಟಿ ಹಣ ಬಿಡುಗಡೆಯಾಗಿಲ್ಲ. ಬಿಎಸ್ವೈ ಸಿಎಂ ಆಗಿದ್ದಾಗ ಪ್ರಧಾನಿ ಮಧ್ಯ ಪ್ರವೇಶಿಸಬೇಕು ಎಂದಿದ್ದರು. ಬಿಎಸ್ವೈ ಮಾತನಾಡಿದ ದಾಖಲೆಯನ್ನು ಕುಮಾರಸ್ವಾಮಿ ಪ್ರದರ್ಶಿಸಿದರು.
ಈಗ ಸಿಎಂ ಕೇಂದ್ರ ಮಧ್ಯೆ ಪ್ರವೇಶಿಸಬೇಕೆಂದರೆ ಆಗಲ್ಲ ಎನ್ನುತ್ತಾರೆ. ಇಲ್ಲಿ ಕಾಂಗ್ರೆಸ್ ಆಡಳಿತ ನಡೆಸುತ್ತಿದೆ, ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇದೆ. ಡಿಸೆಂಬರ್ವರೆಗೂ ಅಸಲು ಮರು ಪಾವತಿಗೆ ಕಾಲಾವಕಾಶ ಕೊಡಬೇಕು ಎಚ್.ಡಿ.ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.
