ಕಾಶಿಯನ್ನು ‘ಖಾಸಿಂ’ ಎಂದು ತಲೆ ಚಚ್ಚಿಕೊಂಡ ದೇವೇಗೌಡ್ರು!

First Published 14, Feb 2018, 9:33 AM IST
H D Devegouda Done a mistake in Stage
Highlights

ತೀರ್ಥಹಳ್ಳಿಯಲ್ಲಿ ಸೋಮವಾರ ನಡೆದ ಜೆಡಿಎಸ್ ಸಮಾವೇಶದಲ್ಲಿ ನಿರೂಪಕ ಕಾಶಿ ಅವರನ್ನು ಮಾಜಿ ಪ್ರಧಾನಿ ದೇವೇಗೌಡರು ತಪ್ಪುಗ್ರಹಿಕೆಯಿಂದ  ಖಾಸಿಂ ಎಂದು ಕರೆದು ಬಳಿಕ ತಮ್ಮ ತಪ್ಪಿನ ಅರಿವಾಗಿ ತಾವೇ ತಲೆ ಚಚ್ಚಿಕೊಂಡರು!

ಶಿವಮೊಗ್ಗ (ಫೆ.14): ತೀರ್ಥಹಳ್ಳಿಯಲ್ಲಿ ಸೋಮವಾರ ನಡೆದ ಜೆಡಿಎಸ್ ಸಮಾವೇಶದಲ್ಲಿ ನಿರೂಪಕ ಕಾಶಿ ಅವರನ್ನು ಮಾಜಿ ಪ್ರಧಾನಿ ದೇವೇಗೌಡರು ತಪ್ಪುಗ್ರಹಿಕೆಯಿಂದ  ಖಾಸಿಂ ಎಂದು ಕರೆದು ಬಳಿಕ ತಮ್ಮ ತಪ್ಪಿನ ಅರಿವಾಗಿ ತಾವೇ ತಲೆ ಚಚ್ಚಿಕೊಂಡರು!
ಕಾಶಿ ಅವರು ಬಹುದಿನಗಳಿಂದ ಗಡ್ಡ ಬಿಟ್ಟಿದ್ದಾರೆ. ತೀರ್ಥಹಳ್ಳಿ ಸಮಾವೇಶದಲ್ಲಿ ವೇದಿಕೆ ಮೇಲಿದ್ದ  ದೇವೇಗೌಡರು ನಿರೂಪಕರ ಹೆಸರೇನೆಂದು ಯಾರನ್ನೋ  ಕೇಳಿದ್ದಾರೆ. ಅವರು ಕಾಶಿ ಎಂದು ಹೇಳಿದ್ದಾರೆ. ಆದರೆ,
ಅದನ್ನು ಮಾಜಿ ಪ್ರಧಾನಿಗಳು ಖಾಸಿಂ ಎಂದು ಕೇಳಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ, ತಾವು ಭಾಷಣ ಮಾಡುವಾಗ ಕಾಶಿ ಅವರನ್ನು ಹತ್ತಿರ ಕರೆದು ‘ಎಷ್ಟು ಚೆನ್ನಾಗಿ ಕನ್ನಡ ಮಾತನಾಡುತ್ತಾನೆ ಈ ಹುಡುಗ’ ಎಂದು ಬೆನ್ನು ತಟ್ಟಿ ಹೆಗಲ ಮೇಲೆ ಕೈ ಹಾಕಿ ಮಾತು ಮುಂದುವರಿಸಿದರು.

‘ದೇಶದಲ್ಲಿ ಧರ್ಮ ಸಮನ್ವಯತೆ ಬೇಕು. ಖಾಸಿಂ ಎಷ್ಟು ಚೆನ್ನಾಗಿ ಮಾತನಾಡುತ್ತಾರೆ. ಆದರೆ, ವಿನಾ ಕಾರಣ ಧರ್ಮ ಸಮನ್ವಯತೆ ಹದಗೆಡುತ್ತಿದೆ’ ಎಂದು ಭಾಷಣ ಮಾಡಿದರು. ಅಷ್ಟೊತ್ತಿಗಾಗಲೇ ಸಭಿಕರು ಸೇರಿ ನೆರೆದಿದ್ದವರಿಗೆಲ್ಲ ಸತ್ಯ ಗೊತ್ತಾಗಿತ್ತು. ಆದರೆ, ಯಾರಿಗೂ ಹೇಳಲು ಸಾಧ್ಯವಾಗಲಿಲ್ಲ. ಬಳಿಕ ದೇವೇಗೌಡರು ಭಾಷಣ ಮುಗಿಸಿ ಬಂದಾಗ ಕಾಶಿ ತಮ್ಮ ವಿಸಿಟಿಂಗ್ ಕಾರ್ಡ್ ನೀಡಿ ನನ್ನ ಹೆಸರು ‘ಕಾಶಿ’ ಎಂದ. 

loader