ಕಾವೇರಿ ತೀರ್ಪಿನಲ್ಲಿ ಸಿಎಂ ಸಿಹಿ ಹಂಚಿದ್ದು ಯಾವ ಪುರುಷಾರ್ಥಕ್ಕೆ?

news | Wednesday, February 21st, 2018
suvarna Web Desk
Highlights

ಕಾವೇರಿ ನದಿ ನೀರು ಹಂಚಿಕೆ ಕುರಿತ ಸುಪ್ರಿಂಕೋರ್ಟ್ ತೀರ್ಪಿನ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿರುವ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು, ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸಭೆಯಲ್ಲಿ ಸಿಹಿ ಹಂಚಿರು
ವುದು ಯಾವ ಪುರುಷಾರ್ಥಕ್ಕೆ ಎಂದು ಪ್ರಶ್ನಿಸಿದ್ದಾರೆ.

ಶ್ರವಣಬೆಳಗೊಳ (ಫೆ.21):  ಕಾವೇರಿ ನದಿ ನೀರು ಹಂಚಿಕೆ ಕುರಿತ ಸುಪ್ರಿಂಕೋರ್ಟ್ ತೀರ್ಪಿನ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿರುವ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು, ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸಭೆಯಲ್ಲಿ ಸಿಹಿ ಹಂಚಿರು
ವುದು ಯಾವ ಪುರುಷಾರ್ಥಕ್ಕೆ ಎಂದು ಪ್ರಶ್ನಿಸಿದ್ದಾರೆ.

ವಾಸ್ತವ ನೆಲೆಯಲ್ಲಿ ಚಿಂತನೆ ಮಾಡಿದಾಗ  ನಮಗೆ ಈ ತೀರ್ಪಿನಿಂದಲೂ ತೃಪ್ತಿ ಆಗಿಲ್ಲ. ಹೀಗಾಗಿ ಅನ್ಯಾಯದ ವಿರುದ್ಧ ಹೋರಾಟ ಮಾಡಲಾಗುವುದು ಎಂದರು. ನ್ಯಾಯಯುತವಾಗಿ ನಮಗೆ ವಾರ್ಷಿಕ 14.75 ಟಿಎಂಸಿಯಲ್ಲ. 40 ಟಿಎಂಸಿಗೂ ಅಧಿಕ ನೀರು ಉಳಿಯಬೇಕಿತ್ತು. ಸಿಗಬೇಕಿತ್ತು. ಬೆಂಗಳೂರಿಗೆ 10 ಟಿಎಂಸಿಗೂ ಹೆಚ್ಚು ನೀರು ಬಳಸಿಕೊಳ್ಳಲು ಅವಕಾಶ ನೀಡಬೇಕಿತ್ತು. ನಾವು ಯಾವುದೇ ರೀತಿಯಲ್ಲೂ ತಮಿಳುನಾಡಿಗೆ ಮೋಸ, ಅನ್ಯಾಯ ಕಿಂಚಿತ್ತೂ ಮಾಡಿಲ್ಲ. ಆದರೂ ತಮಿಳುನಾಡು ಸುಪ್ರಿಂ ನೀಡಿರುವ ತೀರ್ಪಿನ ವಿರುದ್ಧ ತಕರಾರು ತೆಗೆದರೆ ನಮ್ಮಲ್ಲೂ ಬೇಕಾದಷ್ಟು ಅಸ್ತ್ರಗಳಿವೆ ಎಂಬ ಎಚ್ಚರಿಕೆ ಸಂದೇಶವನ್ನು ಇದೇ ವೇಳೆ ರವಾನಿಸಿದರು. ಸುಪ್ರಿಂ ತೀರ್ಪಿನಿಂದ ನಿರೀಕ್ಷಿತ ನ್ಯಾಯ ಸಿಗದಿದ್ದರೂ ವಿಧಾನಸಭೆಯಲ್ಲಿ
ಸಿದ್ದರಾಮಯ್ಯನವರು ಸಿಹಿ ಹಂಚಿದ್ದಾರೆ. ಯಾವ ಪುರುಷಾರ್ಥಕ್ಕಾಗಿ ಹಂಚಿದ್ದಾರೆ? ಇವರಿಗೇನಾದರೂ ಸೂಕ್ಷ್ಮ ವಿವೇಚನೆ ಇದೆಯೇ? ಎಂದಿದ್ದಾರೆ. 

Comments 0
Add Comment

    Related Posts

    CM Two Constituencies Story

    video | Thursday, April 12th, 2018
    suvarna Web Desk