ಹ್ಯಾರಿಸ್ ಪುತ್ರನ ದಾಂಧಲೆ: ವಿದ್ವತ್'ನನ್ನು ಫರ್ಜಿ ರೆಸ್ಟೋರೆಂಟ್'ನಲ್ಲಿ ಭಾರಿ ಅನಾಹುತವಾಗದಂತೆ ತಡೆದಿದ್ದು ಆ ಒಂದು ಹೆಸರು !

First Published 19, Feb 2018, 5:09 PM IST
Guru Rajkumar save His Friend Vidvat at Restorant
Highlights

ಈ ಸಂದರ್ಭದಲ್ಲಿ ನಲಪಾಡ್ ಹಾದುಹೋಗುವಾಗ ವಿದ್ವತ್'ನನ್ನು ಸರಿಯಾಗಿ ಕುಳಿತುಕೊಳ್ಳು ಎಂದು ಗದರಿಸಿದ್ದಾರೆ. ಕಾಲು ನೋಯುವ ಕಾರಣದಿಂದ ನಾನು ರೀತಿಯೇ ಕುಳಿತುಕೊಳ್ಳುವುದಾಗಿ ವಿದ್ವತ್ ಉತ್ತರ ಕೊಟ್ಟಿದ್ದಾನೆ.

ಬೆಂಗಳೂರು(ಫೆ.19): ಉದ್ಯಮಿಯೊಬ್ಬರ ಪುತ್ರ ವಿದ್ವತ್ ಮೇಲೆ ಅಮಾನೀಯವಾಗಿ ಶಾಂತಿನಗರದ ಶಾಸಕ ಎನ್.ಎ ಹ್ಯಾರಿಸ್ ಪುತ್ರ ಮೊಹಮದ್ ನಲ್'ಪಾಡ್ ಹಲ್ಲೆ ಮಾಡಿ 36 ಗಂಟೆಯ ನಂತರ ಶರಣಾಗತಿಯ ಸಂದರ್ಭದಲ್ಲಿ ಬಂಧಿಸಿದ್ದು ಆಯಿತು.

ಆದರೆ ಈಗ ಮತ್ತೊಂದು ಸುದ್ದಿಯೇನಂದರೆ ಹ್ಯಾರಿಸ್ ಪುತ್ರನ ಮೇಲೆ ಹಲ್ಲೆ ನಡೆಸುತ್ತಿರುವ ಸಂದರ್ಭದಲ್ಲಿ ಯುಬಿ ಸಿಟಿತ ಫರ್ಜಿ ರೆಸ್ಟೋರೆಂಟ್'ನಲ್ಲಿ ಹಲವು ಗಣ್ಯರು ಪಾಲ್ಗೊಂಡಿದ್ದರು. ಸ್ಥಳೀಯ ಶಾಸಕರು, ಸಂಸದರ ಪುತ್ರರಲ್ಲದೆ ಸಿನಿಮಾ ಮುಂತಾದ ಕ್ಷೇತ್ರದ ಗಣ್ಯರ ಪುತ್ರರು ಅಲ್ಲಿ ಸೇರಿದ್ದರು.

ಅದರಲ್ಲಿ ಕನ್ನಡದ ಕಣ್ಮಣಿ ಡಾ.ರಾಜ್'ಕುಮಾರ್ ಮೊಮ್ಮಗ ನಟ ರಾಘವೇಂದ್ರ ರಾಜ್'ಕುಮಾರ್ ದ್ವಿತೀಯ ಪುತ್ರ ಗುರು ರಾಜ್'ಕುಮಾರ್ ಕೂಡ ಇದ್ದರು. ಕೆಲ ದಿನಗಳ ಹಿಂದಷ್ಟೆ ಅಪಘಾತದಿಂದ ಕಾಲಿಗೆ ಶಸ್ತ್ರಚಿಕಿತ್ಸೆಗೊಳಗಾಗಿದ್ದರು. ಈ ಕಾರಣದಿಂದಾಗಿ ರೆಸ್ಟೋರೆಂಟ್'ನಲ್ಲಿ ಕಾಲನ್ನು ಮುಂದಕ್ಕೆ ಚಾಚಿಕೊಂಡು ಕುಳಿತುಕೊಂಡಿದ್ದರು. ಈ ಸಂದರ್ಭದಲ್ಲಿ ನಲಪಾಡ್ ಹಾದುಹೋಗುವಾಗ ವಿದ್ವತ್'ನನ್ನು ಸರಿಯಾಗಿ ಕುಳಿತುಕೊಳ್ಳು ಎಂದು ಗದರಿಸಿದ್ದಾರೆ. ಕಾಲು ನೋಯುವ ಕಾರಣದಿಂದ ನಾನು ರೀತಿಯೇ ಕುಳಿತುಕೊಳ್ಳುವುದಾಗಿ ವಿದ್ವತ್ ಉತ್ತರ ಕೊಟ್ಟಿದ್ದಾನೆ.

ಮಾತಿಗೆ ಮಾತು ಬೆಳೆದು ನಲಪಾಡ್ ವಿದ್ವತ್'ನನ್ನು ಮೊದಲು ತಳ್ಳಿದ್ದಾನೆ. ವಿದ್ವತ್ ಕೂಡ ಅನಂತರ ತಳ್ಳಿದ್ದಾನೆ. ಗಲಾಟೆ ಜೋರಾದಾಗ ವಿದ್ವತ್'ಗೆ ಮನಬಂದಂತೆ ನಲಪಾಡ್ ಹಾಗೂ ಆತನ ಸಂಗಡಿಗರು ಥಳಿಸಿದ್ದಾರೆ. ಇನ್ನು ಹೆಚ್ಚಿನದಾಗಿ ಹಲ್ಲೆ ನಡೆಸಬೇಕು ಎನ್ನುವಷ್ಟರಲ್ಲಿ ರಾಘವೇಂದ್ರ ರಾಜ್'ಕುಮಾರ್ ಪುತ್ರ ಗುರು ರಾಜ್'ಕುಮಾರ್ ಮಧ್ಯಪ್ರವೇಶಿಸಿ ನಾನು ರಾಜ್ ಕುಮಾರ್ ಎಂದಾಗ ಹಲ್ಲೆ ನಡೆಯುವುದನ್ನು ನಿಲ್ಲಿಸಿದ್ದಾರೆ.

loader