18 ವರ್ಷಗಳ ಹಿಂದೆ ಇಬ್ಬರು ಸಾಧ್ವಿಗಳನ್ನ ರೇಪ್ ಮಾಡಿ ಬಳಿಕ ಬೆದರಿಕೆ ಒಟ್ಟಿದ ಅಪರಾಧದಡಿಯಲ್ಲಿ ಡೇರಾ ಸಚ್ಚಾ ಸೌಧದ ಮುಖಂಡ ಗುರ್ಮೀತ್ ರಾಮ್ ರಹೀಂಗೆ ಸೋಮವಾರದಂದು 20 ವರ್ಷಗಳ ಜೈಲು ಶಿಕ್ಷೆಯ ತೀರ್ಪು ಪ್ರಕಟಿಸಲಾಗಿದೆ. ಇದರೊಂದಿಗೆ 30 ಲಕ್ಷ ದಂಡವನ್ನೂ ವಿಧಿಸಲಾಗಿದೆ. ಸಿಬಿಐ ವಿಶೇಷ ನ್ಯಾಯಾಲಯದಿಂದ ಪ್ರಕಟವಾದ ಈ ಶಿಕ್ಷೆಯ ತೀರ್ಪಿನ ಬಳಿಕ ರಾಮ್ ರಹೀಂ ಅನಾರೋಗ್ಯದ ಕುರಿತಾಗಿ ನಾಟಕವಾಡಿದರಾದರೂ ಯಾವುದೇ ಪ್ರಯೋಜನವಾಗಿಲ್ಲ. ಕೊನೆಗೂ ಅತ್ಯಾಚಾರಿ ಬಾಬಾ ಜೈಲು ಕೈದಿಯಾಗಿದ್ದಾರೆ. ಆದರೆ ಈ ಎಲ್ಲಾ ಬೆಳವಣಿಗೆಗಳ ಬಳಿಕ ಬಾಬಾ ಪೊಲೀಸರ ಕೈಯಿಂದ ತಪ್ಪಿಸಿಕೊಳ್ಳಲು ಬಹುದೊಡ್ಡ ಚಕ್ರವ್ಯೂಹವೊಂದನ್ನು ರಚಿಸಿದ್ದರು ಎಂಬ ಸ್ಪೋಟಕ ಮಾಹಿತಿ ಬಯಲಾಗಿದೆ. ಈ ಕುರಿತಾಗಿ ಖುದ್ದು ಪೊಲೀಸರೇ ಮಾಹಿತಿ ನೀಡಿದ್ದಾರೆ. ಅಷ್ಟಕ್ಕೂ ಅವರು ಮಾಡಿದ ಆ ಸ್ಕೆಚ್ ಏನು? ಇಲ್ಲಿದೆ ವಿವರ.

ಹರ್ಯಾಣ(ಆ.31): 18 ವರ್ಷಗಳ ಹಿಂದೆ ಇಬ್ಬರು ಸಾಧ್ವಿಗಳನ್ನ ರೇಪ್ ಮಾಡಿ ಬಳಿಕ ಬೆದರಿಕೆ ಒಟ್ಟಿದ ಅಪರಾಧದಡಿಯಲ್ಲಿ ಡೇರಾ ಸಚ್ಚಾ ಸೌಧದ ಮುಖಂಡ ಗುರ್ಮೀತ್ ರಾಮ್ ರಹೀಂಗೆ ಸೋಮವಾರದಂದು 20 ವರ್ಷಗಳ ಜೈಲು ಶಿಕ್ಷೆಯ ತೀರ್ಪು ಪ್ರಕಟಿಸಲಾಗಿದೆ. ಇದರೊಂದಿಗೆ 30 ಲಕ್ಷ ದಂಡವನ್ನೂ ವಿಧಿಸಲಾಗಿದೆ. ಸಿಬಿಐ ವಿಶೇಷ ನ್ಯಾಯಾಲಯದಿಂದ ಪ್ರಕಟವಾದ ಈ ಶಿಕ್ಷೆಯ ತೀರ್ಪಿನ ಬಳಿಕ ರಾಮ್ ರಹೀಂ ಅನಾರೋಗ್ಯದ ಕುರಿತಾಗಿ ನಾಟಕವಾಡಿದರಾದರೂ ಯಾವುದೇ ಪ್ರಯೋಜನವಾಗಿಲ್ಲ. ಕೊನೆಗೂ ಅತ್ಯಾಚಾರಿ ಬಾಬಾ ಜೈಲು ಕೈದಿಯಾಗಿದ್ದಾರೆ. ಆದರೆ ಈ ಎಲ್ಲಾ ಬೆಳವಣಿಗೆಗಳ ಬಳಿಕ ಬಾಬಾ ಪೊಲೀಸರ ಕೈಯಿಂದ ತಪ್ಪಿಸಿಕೊಳ್ಳಲು ಬಹುದೊಡ್ಡ ಚಕ್ರವ್ಯೂಹವೊಂದನ್ನು ರಚಿಸಿದ್ದರು ಎಂಬ ಸ್ಪೋಟಕ ಮಾಹಿತಿ ಬಯಲಾಗಿದೆ. ಈ ಕುರಿತಾಗಿ ಖುದ್ದು ಪೊಲೀಸರೇ ಮಾಹಿತಿ ನೀಡಿದ್ದಾರೆ. ಅಷ್ಟಕ್ಕೂ ಅವರು ಮಾಡಿದ ಆ ಸ್ಕೆಚ್ ಏನು? ಇಲ್ಲಿದೆ ವಿವರ.

ಬಾಬಾ ರಚಿಸಿದ್ದ ಚಕ್ರವ್ಯೂಹದ ಕುರಿತಾಗಿ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಶಾಕಿಂಗ್ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಈ ಕುರಿತಾಗಿ ಮಾತನಾಡಿದ ಅವರು 'ಈಗಾಗಲೇ ಅತ್ಯಾಚಾರವೆಸಗಿರುವ ಅಪರಾಧದಡಿಯಲ್ಲಿ 20 ವರ್ಷ ಜೈಲು ಶಿಕ್ಷೆ ಅನುಭವಿಸುತ್ತಿರುವ ಬಾಬಾನನ್ನು, ಸಿಬಿಐ ವಿಶೇಷ ನ್ಯಾಯಾಲಯ ಆಗಸ್ಟ್ 25ರಂದು ಪಂಚಕುಲಾದಲ್ಲಿ ವಿಚಾರಣೆ ನಡೆಸಿ ಅಪರಾಧಿ ಎಂದು ಘೋಷಿಸಿತ್ತು. ಅಲ್ಲದೇ ಶಿಕ್ಷೆಯ ತೀರ್ಪನ್ನು 28ರಂದು ಕಾಯ್ದಿರಿಸಿತ್ತು. ಈ ಸಂದರ್ಭದಲ್ಲಿ ಬಾಬಾನನ್ನು ಕೋರ್ಟ್ ಆವರಣದಿಂದ ರೋಹ್ತಕ್'ನ ಸೆಂಟ್ರಲ್ ಜೈಲಿಗೆ ರವಾನಿಸಬೇಕಾಗಿತ್ತು. ಆದರೆ ಬಾಬಾ ಮಾತ್ರ ಪೊಲೀಸರ ವಶದಿಂದ ತಪ್ಪಿಸಿಕೊಳ್ಳಲು ಬಹುದೊಡ್ಡ ಸಂಚನ್ನು ರೂಪಿಸಿದ್ದರು. ಆದರೆ ಸೂಕ್ತ ಸಮಯದಲ್ಲಿ ಬಾಬಾನ ಉದ್ದೇಶವರಿತ ಪೊಲೀಸರು ಆತನ ಪ್ಲಾನ್'ನ್ನು ವಿಫಲಗೊಳಿಸಿ ರೋಹ್ತಕ್ ಜೈಲಿಗೆ ರವಾನಿಸುವಲ್ಲಿ ಯಶಸ್ವಿಯಾಗಿದ್ದಾರೆ' ಎಂದು ತಿಳಿಸಿದ್ದಾರೆ.

ಗುರುಗಾಂವ್'ನಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಈ ಸಂಚಿನ ವಿವರಣೆ ನೀಡಿದ ಪೊಲೀಸ್ ಮಹಾ ನಿರ್ದೇಶಕ ಕೆ.ಕೆ ರಾವ್ 'ಪೊಲೀಸ್ ಉಪ ಆಯುಕ್ತ(ಅಪರಾಧ ದಳ) ಸುಮಿತ್ ಕುಮಾರ್'ರವರ ನಾಯಕತ್ವದಲ್ಲಿ ಪೊಲೀಸ್ ತಂಡವೊಂದು 'ಬಾಬಾನನ್ನು ಕೋರ್ಟ್'ನಿಂದಲೇ ಪೊಲೀಸರ ವಶದಿಂದ ಅಪಹರಿಸಲು ಆತನ ಬೆಂಬಲಿಗರು ರೂಪಿಸಿದ್ದ ಸಂಚಬನ್ನು ವಿಫಲಗೊಳಿಸಿದ್ದರು. ಬಾಬಾ ಕೋರ್ಟ್'ನಲ್ಲಿ ತನ್ನನ್ನು ಅಪರಾಧಿ ಎಂದು ಘೋಷಿಸಿದ ಮರುಕ್ಷಣವೇ ತಾನು ಸಿರ್ಸಾದಿಂದ ತನ್ನ ಬಟ್ಟೆಯಿರುವ 'ಕೆಂಪು ಬ್ಯಾಗ್'ನ್ನು ತಂದಿದ್ದೇನೆ. ಇದನ್ನು ತನಗೆ ಕೊಡುವಂತೆ ಕೇಳಿಕೊಂಡಿದ್ದರು. ವಾಸ್ತವವಾಗಿ ಇದು ತನ್ನ ಬೆಂಬಲಿಗರಿಗೆ ಬಾಬಾ ನೀಡಿದ ರಹಸ್ಯ ಸಂದೇಶವಾಗಿತ್ತು. ಈ ಮೂಲಕ ಕೋರ್ಟ್'ನಲ್ಲಿ ತನ್ನನ್ನು ದೋಷಿ ಎಂದು ಘೋಷಿಸಿರುವ ಸುದ್ದಿಯನ್ನು ಬೆಂಬಲಿಗರಿಗೆ ತಲುಪಿಸಿ ಗಲಭೆ ಸೃಷ್ಟಿಸುವ ಉದ್ದೇಶ ಅವರದ್ದಾಗಿತ್ತು. ಕೋರ್ಟ್'ನಿಂದ ಹೊರಬರುತ್ತಿದ್ದಂತೆಯೇ ಯಾವಾಗ ಬಾಬಾ ಗಾಡಿಯಿಂದ ಕೆಂಪು ಬ್ಯಾಗ್ ಹೊರಗೆ ತೋರಿಸಿದರೋ ಅದೇ ಸಮಯದಲ್ಲಿ ಸುಮಾರು 2 ಕಿಲೋ ಮೀಟರ್ ದೂರದಲ್ಲಿ ಟಿಯರ್ ಗ್ಯಾಸ್ ಸ್ಪೋಟಗೊಳ್ಳಲಾರಂಭವಾಯಿತು.

ಆ ಕ್ಷಣದಲ್ಲೇ ನಮಗೆ ಇದರ ಹಿಂದೆ ಯಾವುದೋ ಸಂಚು ಇದೆ ಎಂಬುವುದು ಅರಿವಾಯಿತು. ಆದರೆ ಬಾಬಾನ ದತ್ತು ಪುತ್ರಿ ಪಂಚಕುಲಾ ಕೋರ್ಟ್ ಆವರಣದಲ್ಲಿ ತುಂಬಾ ಹೊತ್ತು ನಿಂತುಕೊಳ್ಳುವುದನ್ನು ನಿಷೇಧಿಸಿದ್ದರೂ, ನಿಂತುಕೊಂಡೇ ಇದ್ದಾಗ ನಮ್ಮ ಅನುಮಾನ ಮತ್ತಷ್ಟು ಮತ್ತಷ್ಟು ಆಳವಾಯಿತು. ಬೆಂಬಲಿಗರು ಗಲಭೆ ಹುಟ್ಟಿಸಲಿ ಎಂದು ಗಾಡಿಯಲ್ಲಿ ಕುಳಿತುಕೊಳ್ಳಲೂ ತುಂಬಾ ವಿಳಂಬ ಮಾಡುತ್ತಿದ್ದರು ಹೀಗಾಗಿ ನಾವು ವಿಳಂಬ ಮಾಡಬೇಡಿ ಎದು ಕೇಳಿಕೊಂಡೆವು. ಬೆಂಬಲಿಗರು ಸೆಕ್ಟರ್ ಒಂದರಲ್ಲಿ ಹಿಂಸಾಚಾರ ಆರಂಭಿಸಿದ್ದರೆ ಸಾವಿನ ಸಂಖ್ಯೆ ಹೆಚ್ಚಾಗುವ ಆತಂಕವಿತ್ತು. ಈ ವೇಳೆ ಮುಂದಾಲೋಚನೆ ಮಾಡಿದ ಪೊಲೀಸ್ ಆಯುಕ್ತ ಸುನಿಲ್ ಕುಮಾರ್ ಬೆಂಬಲಿಗರನ್ನು ದಾರಿ ತಪ್ಪಿಸುವ ಸಲುವಾಗಿ ಬಾಬಾನನ್ನು ಅವರಿಗಾಗೇ ಕಾದಿರಿಸಿದ ವಾಹನದಲ್ಲಿ ಕರೆದೊಯ್ಯದೇ ಪೊಲೀಸ್ ವಾಹನದಲ್ಲಿ ರವಾನಿಸಲು ನಿರ್ಧರಿಸಿದರು. ಇಷ್ಟರಲ್ಲೇ ಬಾಬಾನ ಬಹುಕಾಲದ ಅಂಗರಕ್ಷಕರು ಗುರ್ಮೀತ್'ನನ್ನು ಸುತ್ತುವರೆದಿದ್ದರು.

ಆದರೆ ಸೂಕ್ತ ಸಮಯದಲ್ಲಿ ಸುನಿಲ್ ಕುಮಾರ್ ಮತ್ತವರ ತಂಡ ಕಮಾಂಡೋಗಳನ್ನು ಹೊಡೆದೋಡಿಸುವಲ್ಲಿ ಯಶಶ್ವಿಯಾದರು. ಈ ಸಂದರ್ಭದಲ್ಲಿ ಫೈರಿಂಗ್ ನಡೆಸದಂತೆ ಎಚ್ಚರವಹಿಸಿದ್ದೆವು. ಇನ್ನು ಗುರ್ಮೀತ್ ಕಮಾಂಡೋಗಳ ಬಳಿ ಶಸ್ತ್ರಾಸ್ತಗಳನ್ನು ಹೊಂದಿದ್ದರು. ಆದರೂ ಸೂಕ್ತ ಸಮಯದಲ್ಲಿ ತೆಗೆದುಕೊಂಡ ನಿರ್ಧಾರದಿಂದ ಅತ್ಯಾಚಾರಿಯನ್ನು ಜೈಲಿಗಟ್ಟುವಲ್ಲಿ ಪೊಲೀಸ್ ಪಡೆ ಯಶಸ್ವಯಾಗಿದೆ ಎಂದು ಅವರು ತಿಳಿಸಿದ್ದಾರೆ.