ಶಸ್ತ್ರ ಚಿಕಿತ್ಸೆ ಎಂದರೆ ಮೈ ನಡುಗುತ್ತದೆ. ಅಂಥದ್ದರಲ್ಲಿ ಆಂಧ್ರಪ್ರದೇಶದಲ್ಲಿ ಮಹಿಳೆಯೊಬ್ಬಳು ಮೆದುಳಿನ ಶಸ್ತ್ರ ಚಿಕಿತ್ಸೆಯ ವೇಳೆ ಹಾಯಾಗಿ ಬಾಹುಬಲಿ ಚಿತ್ರ ವೀಕ್ಷಿಸಿದ್ದಾಳೆ.
ತೆಲ್ಲಂಗಾನ(ಅ.06): ಶಸ್ತ್ರ ಚಿಕಿತ್ಸೆ ಎಂದರೆ ಮೈ ನಡುಗುತ್ತದೆ. ಅಂಥದ್ದರಲ್ಲಿ ಆಂಧ್ರಪ್ರದೇಶದಲ್ಲಿ ಮಹಿಳೆಯೊಬ್ಬಳು ಮೆದುಳಿನ ಶಸ್ತ್ರ ಚಿಕಿತ್ಸೆಯ ವೇಳೆ ಹಾಯಾಗಿ ಬಾಹುಬಲಿ ಚಿತ್ರ ವೀಕ್ಷಿಸಿದ್ದಾಳೆ.
ಇಂಥದ್ದೊಂದು ವಿಚಿತ್ರ ಗುಂಟೂರಿನ ಆಸ್ಪತ್ರೆಯೊಂದರಲ್ಲಿ ನಡೆದಿದೆ. 43 ವರ್ಷದ ನರ್ಸ್ ವಿನಯಾ ಕುಮಾರಿ ಎಂಬಾಕೆಗೆ ಮಿದುಳಿನಲ್ಲಿ ಗಡ್ಡೆಯೊಂದು ಇರುವುದು ಪತ್ತೆಯಾಗಿತ್ತು. ಈ ಕಾರಣಕ್ಕಾಗಿ ಆಕೆಯ ತಲೆಯನ್ನು ಕತ್ತರಿಸಿ ವೈದ್ಯರು ಶಸ್ತ್ರ ಚಿಕಿತ್ಸೆ ನಡೆಸುತ್ತಿದ್ದರೆ, ಆಕೆ ಮಾತ್ರ ಚಿತ್ರ ನೊಡುವುದರಲ್ಲಿ ತಲ್ಲೀನಳಾಗಿದ್ದಳು.
