ಈತನ ವಿರುದ್ಧ ಒಂದು ಕೊಲೆ ಮತ್ತು 2 ಕೊಲೆ ಯತ್ನ ಆರೋಪಗಳು ದಾಖಲಾಗಿವೆ.

ಹೂಸ್ಟನ್(ಫೆ.28): ಕನಾಸ್‌ನಲ್ಲಿ ಭಾರತೀಯ ಟೆಕ್ಕಿ ಶ್ರೀನಿವಾಸ ಕುಚಿಭೋಟ್ಲ ಅವರನ್ನು ಗುಂಡು ಹಾರಿಸಿ ಕೊಂದ ಆರೋಪಿ, ನೌಕಾಪಡೆ ಮಾಜಿ ಯೋಧ ಆ್ಯಡಂ ಪ್ಯೂರಿನ್ಟನ್ ಸೋಮವಾರ ಸ್ಥಳೀಯ ಜಾನ್ಸನ್ ಕೌಂಟಿ ಜಿಲ್ಲಾ ನ್ಯಾಯಾಲಯದ ಮುಂದೆ ಹಾಜರಾದ. ಈತನ ವಿರುದ್ಧ ಒಂದು ಕೊಲೆ ಮತ್ತು 2 ಕೊಲೆ ಯತ್ನ ಆರೋಪಗಳು ದಾಖಲಾಗಿವೆ. ದಾಖಲಾದ ಪ್ರಕರಣಗಳು ಸಾಬೀತಾದರೆ ಆತನಿಗೆ 50 ವರ್ಷ ಜೈಲು ಶಿಕ್ಷೆ ಆಗಲಿದೆ ಎಂದು ಸರ್ಕಾರಿ ವಕೀಲ ಸ್ಟೀವ್ ಹೋವ್ ಹೇಳಿದ್ದಾರೆ.