ಪಲನ್‌ಪುರ್(ಜು.17)  ಇನ್ನು ಮದುವೆಯಾದ ಸ್ತ್ರೀಯರಿಗೆ ಮೊಬೈಲ್ ನಿಷಿದ್ಧ. ಅಂತರ-ಜಾತಿ ವಿವಾಹವಾದರೆ ದಂಡ ಕಟ್ಟಬೇಕು! ಗುಜರಾತ್ ನ ಪ್ರದೇಶವೊಂದರಲ್ಲಿ ಊರ ಹಿರಿಯರು ಇಂಥದ್ದೊಂದು ತೀರ್ಮಾನ ತೆಗೆದುಕೊಂಡಿದ್ದಾರೆ.

ಜುಲೈ 14 ರಂದು ನಡೆದ ಊರಿನ ಹಿರಿಯರ ಸಭೆಯಲ್ಲಿ ಇಂಥದ್ದೊಂದು ತೀರ್ಮಾನ ತೆಗೆದುಕೊಳ್ಳಲಾಗಿದೆ. ದಂಟಿವಾಡಾ ತಾಲೂಕಿನ 12 ಜನ ಹಿರಿಯರು ಸಭೆ ನಡೆಸಿ ಇಂಥದ್ದೊಂದು ಆದೇಶ ನೀಡಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಎಂಎಲ್ಎ ಗನಿಬೇನ್ ಠಾಕೂರ್ ಇದರಲ್ಲಿ ಅಂಥ ದೊಡ್ಡ ತಪ್ಪು ನನಗೇನು ಕಾಣುತ್ತಿಲ್ಲ ಎಂದಿದ್ದಾರೆ.  ಹೆಣ್ಣು ಮಕ್ಕಳು ಮೊಬೈಲ್ ನಿಂದ ದೂರವಿದ್ದು ವಿದ್ಯಾಭ್ಯಾಸದ ಕಡೆ ಹೆಚ್ಚಿನ ಗಮನ ನೀಡಬೇಕು ಎಂಬ ಸಲಹೆಯನ್ನು ನೀಡಿದ್ದಾರೆ.

ಮದುವೆಯಾಗದ ಹೆಣ್ಣು ಮಕ್ಕಳ ಕೈಗೆ ಮೊಬೈಲ್ ಸಿಗುವಂತಿಲ್ಲ. ಒಂದು ವೇಳೆ ಮೊಬೆಐಲ್ ಕಂಡುಬಂದರೆ ಅವರ ಪಾಲಕರು ದಂಡ ಕಟ್ಟಬೇಕಾಗುತ್ತದೆ ಎಂದು ಹಿರಿಯರ ಆದೇಶ ಹೇಳಿದೆ. 

Realme 3i: ಅಗ್ಗದ ಮೊಬೈಲ್ ನೋಡುವವರಿಗೆ ಚೆಂದದ ಫೋನ್!

ಸಂದರ್ಭ ಎದುರಾಯಿತು ಎಂದು ಅಂತರ್ ಜಾತಿ ವಿವಾಹಕ್ಕೆ ಮುಂದಾದರೆ ಪಾಲಕರು 1.5 ಲಕ್ಷ ರೂ. ನಿಂದ 2 ಲಕ್ಷ ರೂ. ದಂಡ ಕಟ್ಟಬೇಕಾಗುತ್ತದೆ.

ನಾವು ಟ್ಯಾಬ್ಲೆಟ್ ಮತ್ತು ಲ್ಯಾಪ್ ಟಾಪ್ ಬಳಕೆಗೆ ಅವಕಾಶ ನೀಡಿದ್ದೇವೆ. ಕಾಲೇಜಿಗೆ ತೆರಳುವ ಹೆಣ್ಣುಮಕ್ಕಳು ವಿದ್ಯಾಭ್ಯಾಸದ ಕಡೆ ಹೆಚ್ಚು ಗಮನ ನೀಡಲಿ ಎಂಬುದೇ ಈ ತೀರ್ಮಾನದ ಹಿಂದಿನ ಉದ್ದೇಶ ಎಂದು ಸಮುದಾಯದ ಹಿರಿಯ ಸುರೇಶ್ ಠಾಕೂರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.