ಗುಜರಾತ್​ ಚುನಾವಣೆ ಫಲಿತಾಂಶ. ಇದು ಬರೀ ಫಲಿತಾಂಶವಲ್ಲ. ಎರಡೂ ಪಕ್ಷಗಳ  ವ್ಯಕ್ತಿಗಳ ರಾಜಕೀಯ ಭವಿಷ್ಯ ನಿರ್ಧರಿಸುವ ಫಲಿತಾಂಶ. ಇಡೀ ದೇಶ ಗುಜರಾತ್​ ರಿಸಲ್ಟ್​ಗಾಗಿ ಬಿಟ್ಟ ಕಣ್ಣು ಬಿಟ್ಟಂಗೆ ಕಾದು ಕೂತಿದೆ.  ಇಡೀ ದೇಶವೇ ಗುಜರಾತ್​ ಚುನಾವಣೆ ಫಲಿತಾಂಶಕ್ಕಾಗಿ ಕಾಯುತ್ತಿದೆ. ಅದು ಸೆಮಿಫೈನಲ್​.  ಪ್ರಧಾನಿ ನರೇಂದ್ರ ಮೋದಿ - ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹಣೆಬರಹ ಬರೆಯುವ ಫಲಿತಾಂಶವಿದು.

ಗುಜರಾತ್ (ಡಿ.18): ಗುಜರಾತ್​ ಚುನಾವಣೆ ಫಲಿತಾಂಶ. ಇದು ಬರೀ ಫಲಿತಾಂಶವಲ್ಲ. ಎರಡೂ ಪಕ್ಷಗಳ ವ್ಯಕ್ತಿಗಳ ರಾಜಕೀಯ ಭವಿಷ್ಯ ನಿರ್ಧರಿಸುವ ಫಲಿತಾಂಶ. ಇಡೀ ದೇಶ ಗುಜರಾತ್​ ರಿಸಲ್ಟ್​ಗಾಗಿ ಬಿಟ್ಟ ಕಣ್ಣು ಬಿಟ್ಟಂಗೆ ಕಾದು ಕೂತಿದೆ.

ಇಡೀ ದೇಶವೇ ಗುಜರಾತ್​ ಚುನಾವಣೆ ಫಲಿತಾಂಶಕ್ಕಾಗಿ ಕಾಯುತ್ತಿದೆ. ಅದು ಸೆಮಿಫೈನಲ್​. ಪ್ರಧಾನಿ ನರೇಂದ್ರ ಮೋದಿ - ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹಣೆಬರಹ ಬರೆಯುವ ಫಲಿತಾಂಶವಿದು.

ವಿಜಯದ ಮಾಲೆ ಯಾರ ಕೊರಳಿಗೆ?

ಈಗಾಗಲೇ ಹಲವು ಚುನಾವಣೋತ್ತರ ಸಮೀಕ್ಷೆಗಳು ಬಿಜೆಪಿಗೆ ಸ್ಪಷ್ಟ ಬಹುಮತ ಕೊಟ್ಟಿವೆ. ಪ್ರಥಮ ಹಂತದಲ್ಲಿ ಶೇ.68, ಎರಡನೇ ಹಂತದಲ್ಲಿ 68.7 ಮತದಾನ ನಡೆದಿದೆ. ಆದ್ರೆ ಮ್ಯಾಜಿಕ್​ ನಂಬರ್​ 92 ಸ್ಥಾನ ಗೆದ್ದು ಯಾರು ವಿಜಯದ ಪತಾಕೆ ಹಾರಿಸ್ತಾರೆ ಅನ್ನೋದೇ ಕುತೂಹಲ.

ಪ್ರಧಾನಿ ನರೇಂದ್ರ ಮೋದಿ ತವರು ರಾಜ್ಯವಾದ್ದರಿಂದ ಪ್ರಧಾನಿ ಗುಜರಾತ್​ ಚುನಾವಣೆ ಗೆಲುವು ಭಾರಿ ಪ್ರತಿಷ್ಠೆಯಾಗಿದೆ. ಗುಜರಾತ್​ ಗೆಲುವು ಮೋದಿಗೆ ಎಷ್ಟೋ ಪ್ರತಿಷ್ಠೆಯಾಗಿದೆ ಅಂದ್ರೆ ಮೋದಿ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಮೆಗಾ ಱಲಿ ಮೂಲಕ ಮತಯಾಚಿಸಿದ್ದರು. ಇನ್ನೂ ರಾಹುಲ್​ ಗಾಂಧಿ ಎಐಸಿಸಿ ಅಧ್ಯಕ್ಷ ಪಟ್ಟ ನಂತ್ರ ಗುಜರಾತ್​ ಚುನಾವಣಾ ಫಲಿತಾಂಶ ದೊಡ್ಡ ಅಗ್ನಿ ಪರೀಕ್ಷೆಯಾಗಿದೆ. ಇಲ್ಲಿಯ ಗೆಲುವು ದೇಶದ ಹಲವು ರಾಜಕೀಯ ಮನ್ವಂತರಕ್ಕೆ ಕಾರಣವಾಗುವುದು ಅಷ್ಟೇ ಸತ್ಯ.

ಗುಜರಾತ್​ನಲ್ಲಿ ಬಿಜೆಪಿ 22 ವರ್ಷಗಳಿಂದ ಅಧಿಕಾರದಲ್ಲಿದೆ.. ಇಲ್ಲಿ ಮತ್ತೆ ಅಧಿಕಾರ ಉಳಿಸಿಕೊಳ್ಳುವುದು ಬಿಜೆಪಿ ನಾಯಕರಿಗೆ ಭಾರಿ ಸವಾಲು. ಬಿಜೆಪಿ ಚಾಣಕ್ಯ ಅಂದೇ ಖ್ಯಾತಿಯಾಗಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್​ ಶಾ ಗುಜರಾತ್​ನವರೇ ಆಗಿರೋದರಿಂದ ಈ ಗೆಲುವು ಅನಿವಾರ್ಯ.

ಹಾರ್ದಿಕ್​ ಪಟೇಲ್​, ಜಿಗ್ನೇಶ್​ ವೇಮಾನಿ, ಅಲ್ಪೇಶ್​ ಠಾಕೂರ್​.. ಗುಜರಾತ್​ನಲ್ಲಿ ಈ ಮೂರು ಯುವ ನಾಯಕರು ತಮ್ಮ ವಿಭಿನ್ನ ಹೋರಾಟಗಳಿಂದಲೇ ರಾಜಕೀಯಕ್ಕೆ ಬಂದವರು.. ಗುಜರಾತ್ ಚುನಾವಣೆ ಈ ಮೂವರ ಮುಂದಿನ ಭವಿಷ್ಯವನ್ನು ಈ ಫಲಿತಾಂಶ ನಿರ್ಧರಿಸಲಿದೆ.

ಗುಜರಾತಿಯರನ್ನು ಭಾವನಾತ್ಮಕವಾಗಿ ಸೆಳೆದಿರುವ ಮೋದಿಯವರ 22 ವರ್ಷಗಳ ಅಧಿಕಾರ ಉಳಿಯುತ್ತಾ...?ದೇಶಾದ್ಯಂತ ಸೋತು ಸುಣ್ಣವಾಗುತ್ತಿರುವ ಕಾಂಗ್ರೆಸ್​ಗೆ ಗುಜರಾತ್​ ಫಲಿತಾಂಶ ಟಾನಿಕ್ ನೀಡುತ್ತಾ...? ಸರ್ಕಾರದ ವಿರುದ್ಧ ಬಂಡಾಯವೆದ್ದವರಿಗೆ ಗೆಲುವು ಸಿಗುತ್ತಾ..? ಎಐಸಿಸಿ ನೂತನ ಅಧ್ಯಕ್ಷರಾಗಿರುವ ರಾಹುಲ್​ ಗಾಂಧಿಗೆ ಗೆಲುವಿನ ಸ್ವಾಗತ ಸಿಗುತ್ತಾ..? ಇವೆಲ್ಲಾ ಪ್ರಶ್ನೆಗಳಿಗೆ ಗುಜರಾತ್​ ಚುನಾವಣೆ ಫಲಿತಾಂಶ ಉತ್ತರ ನೀಡಲಿದೆ.