ಗೋ ಹತ್ಯೆ ಮತ್ತು ಗೋ ಮಾಂಸ ಸಾಗಾಣೆದಾರರಿಗೆ ಕಠಿಣ ಶಿಕ್ಷೆಗೆ ಗುರಿ ಪಡಿಸುವ ಸಂಬಂಧ ಇವತ್ತು ಗುಜರಾತ್ ವಿಧಾನಸಭೆಯಲ್ಲಿ ತಿದ್ದುಪಡಿ ಮಸೂದೆ ಅಂಗೀಕಾರವಾಗಿದೆ.
ಗಾಂಧಿನಗರ (ಮಾ.31): ಉತ್ತರ ಪ್ರದೇಶದಲ್ಲಿ ಗೋ ಹತ್ಯೆ ನಿಷೇಧ ಮಸೂದೆ ಜಾರಿಯಾಗಿರುವ ಬೆನ್ನಲ್ಲೇ ಗುಜರಾತ್ನಲ್ಲಿಯೂ ಕೂಡ ಗೋ ಹತ್ಯೆ ನಿಷೇಧ ಮಸೂದೆ ಅಂಗೀಕಾರವಾಗಿದೆ.
ಗೋ ಹತ್ಯೆ ಮತ್ತು ಗೋ ಮಾಂಸ ಸಾಗಾಣೆದಾರರಿಗೆ ಕಠಿಣ ಶಿಕ್ಷೆಗೆ ಗುರಿ ಪಡಿಸುವ ಸಂಬಂಧ ಇವತ್ತು ವಿಧಾನಸಭೆಯಲ್ಲಿ ತಿದ್ದುಪಡಿ ಮಸೂದೆ ಅಂಗೀಕಾರವಾಗಿದೆ.
ಗೋಹತ್ಯೆ ಮಾಡಿದವರಿಗೆ ಜೀವಾವಧಿ ಶಿಕ್ಷೆ ವಿಧಿಸುವ ಮಸೂದೆ ಅಂಗೀಕಾರವಾಗಿದೆ. ಅಲ್ದೇ ಗೋಹತ್ಯೆ ಮಾಡಿದರೆ, ಕನಿಷ್ಠ 7 ವರ್ಷ ಗರಿಷ್ಠ ಜೀವಾವಧಿ ಶಿಕ್ಷೆ ವಿಧಿಸಲಾಗಿದ್ದು, ಕನಿಷ್ಠ 50 ಸಾವಿರ ರೂಪಾಯಿ ದಂಡ ವಿಧಿಸುವ ಮಸೂದೆ ಅಂಗೀಕಾರವಾಗಿದೆ.
