ಮಧ್ಯ ಪ್ರದೇಶ, ಮಹಾರಾಷ್ಟ್ರ ಮತ್ತು ತಮಿಳುನಾಡು ಬಳಿಕ ರೈತರ ಸರ್ಕಾರ ಸಾಲ ಮನ್ನಾ ಹೋರಾಟದ ಬಿಸಿ  ಪ್ರಧಾನಿ ತವರುರಾಜ್ಯ ಗುಜರಾತ್’ಗೂ ತಟ್ಟಿದೆ. ಕ್ಷತ್ರಿಯ ಸೇನಾ ಠಾಕೂರ್ ನೇತೃತ್ವದಲ್ಲಿ ಇಂದು ನಡೆದ ಹೋರಾಟದಲ್ಲಿ ಸಾಲ ಮನ್ನಾ ಮಾಡಬೇಕೆಂದು ಆಗ್ರಹಿಸಿ ರೈತರು ನೂರಾರು ಲೀಟರ್ ಹಾಲನ್ನು ರಸ್ತೆಗೆ ಸುರಿದು ಪ್ರತಿಭಟಿಸಿದ್ದಾರೆ.

ಅಹಮದಾಬಾದ್ (ಜು.05): ಮಧ್ಯ ಪ್ರದೇಶ, ಮಹಾರಾಷ್ಟ್ರ ಮತ್ತು ತಮಿಳುನಾಡು ಬಳಿಕ ರೈತರ ಸರ್ಕಾರ ಸಾಲ ಮನ್ನಾ ಹೋರಾಟದ ಬಿಸಿ ಪ್ರಧಾನಿ ತವರುರಾಜ್ಯ ಗುಜರಾತ್’ಗೂ ತಟ್ಟಿದೆ.

ಕ್ಷತ್ರಿಯ ಸೇನಾ ಠಾಕೂರ್ ನೇತೃತ್ವದಲ್ಲಿ ಇಂದು ನಡೆದ ಹೋರಾಟದಲ್ಲಿ ಸಾಲ ಮನ್ನಾ ಮಾಡಬೇಕೆಂದು ಆಗ್ರಹಿಸಿ ರೈತರು ನೂರಾರು ಲೀಟರ್ ಹಾಲನ್ನು ರಸ್ತೆಗೆ ಸುರಿದು ಪ್ರತಿಭಟಿಸಿದ್ದಾರೆ.

ಸರ್ಕಾರ ಶೀಘ್ರ ನಿರ್ಧಾರ ಕೈಗೊಳ್ಳದ ಪಕ್ಷದಲ್ಲಿ ಹೈನುಗಾರರು ಹಾಲನ್ನು ಡೈರಿಗೆ ನೀಡದೇ ರಸ್ತೆಗೆ ಚೆಲ್ಲುವುದಾಗಿ ಈ ಹಿಂದೆಯೇ ಎಚ್ಚರಿಕೆ ನೀಡಿದ್ದರು. ಹಾಲು ರಸ್ತೆಗೆ ಚೆಲ್ಲುವುದನ್ನು ತಡೆಯಲು ಅಧಿಕಾರಿಗಳು ಪ್ರಯತ್ನಿಸಿದರೂ ರೈತರೂ ನೂರಾರು ಲೀಟರ್ ಹಾಲನ್ನು ಚೆಲ್ಲಿದ್ದಾರೆ.

2 ದಿನಗಳ ಮಟ್ಟಿಗೆ ರಾಜ್ಯಾದ್ಯಂತ ಹಾಲು ನಿಷೇಧವನ್ನು ಘೋಷಿಸಿದ್ದೆವು. ಬೇಡಿಕೆ ಈಡೇರಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಭಾರೀ ಪ್ರತಿಭಟನೆಗಳನ್ನು ಹಮ್ಮಿಕೊಳ್ಳಲಾಗುವುದು. ಗುಜರಾತ್ ರೈತರಿಗೆ ಅಧಿಕಾರದಲ್ಲಿರುವವರನ್ನು ಬದಲಾಯಿಸುವ ಸಾಮರ್ಥ್ಯವಿದೆ, ಎಂದು ರೈತ ಮುಖಂಡರು ಹೇಳಿದ್ದಾರೆ.

(ಚಿತ್ರ: ಏಎನ್ಐ)