ಗುಜರಾತ್ ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣಾ ಫಲಿತಾಂಶ ಪ್ರಕಟ

Gujarat municipal polls 2018 BJP wins but victory margin falls
Highlights

ಗುಜರಾತ್ ಸ್ಥಳೀಯಾಡಳಿತ ಸಂಸ್ಥೆಗಳಿಗೆ ನಡೆದ ಚುನಾವಣೆ ಫಲಿತಾಂಶಗಳು ಪ್ರಕಟವಾಗಿದ್ದು, ಬಿಜೆಪಿಯು  75ರ ಪೈಕಿ 47 ಕಡೆ ಜಯಭೇರಿ ಬಾರಿಸಿದೆ.

ನವದೆಹಲಿ: ಗುಜರಾತ್ ಸ್ಥಳೀಯಾಡಳಿತ ಸಂಸ್ಥೆಗಳಿಗೆ ನಡೆದ ಚುನಾವಣೆ ಫಲಿತಾಂಶಗಳು ಪ್ರಕಟವಾಗಿದ್ದು, ಬಿಜೆಪಿಯು  75ರ ಪೈಕಿ 47 ಕಡೆ ಜಯಭೇರಿ ಬಾರಿಸಿದೆ.

ಕಳೆದ ಬಾರಿ 59 ಸ್ಥಾನಗಳನ್ನು ಗಳಿಸಿದ್ದ ಬಿಜೆಪಿ ಈ ಬಾರಿ 47 ಕಡೆ ಜಯಗಳಿಸಿದೆ. ಕಳೆದ ಬಾರಿ 13 ಕಡೆ ಗೆಲುವು ಸಾಧಿಸಿದ್ದ ಕಾಂಗ್ರೆಸ್ ಈ ಬಾರಿ 16 ಕಡೆ ಅಧಿಕಾರದ ಚುಕ್ಕಾಣಿ ಹಿಡಿಯುವಲ್ಲಿ ಯಶಸ್ವಿಯಾಗಿದೆ.

ಉಳಿದ ಕಡೆ, ಎನ್’ಸಿಪಿ-1, ಬಿಎಸ್ಪಿ-1, ಹಾಗೂ 6 ಕಡೆ ಯಾರಿಗೂ ಬಹುಮತ ಸಿಕ್ಕಿಲ್ಲವೆಂದು ಚುನಾವಣಾ ಆಯುಕ್ತರು ತಿಳಿಸಿದ್ದಾರೆ.

ಕಳೆದ ಫೆ.17ರಂದು ಗುಜರಾತ್ ರಾಜ್ಯದ್ಯಂತ  ಸ್ಥಳೀಯಾಡಳಿತ ಸಂಸ್ಥೆಗಳಿಗೆ,  2 ಜಿಲ್ಲಾ ಪಂಚಾಯತ್, 17 ತಾಲ್ಲೂಕು ಹಾಗೂ 1400 ಗ್ರಾಮ ಪಂಚಾಯತ್’ಗಳಿಗೆ ಚುನಾವಣೆ ನಡೆದಿತ್ತು.

ಕಳೆದ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಬಿಜಪಿ 99 ಸೀಟುಗಳನನ್ನು ಗಳಿಸುವ ಮೂಲಕ  ಪ್ರಯಾಸದಾಯಕ ಜಯ ಗಳಿಸಿತ್ತು. ಕಾಂಗ್ರೆಸ್ 77 ಸ್ಥಾನಗಳನ್ನು ಗಳಿಸಿತ್ತು.

loader