ಸೂರತ್ : ಬೌದ್ಧ ಧರ್ಮ ದೀಕ್ಷಾ ಸಮಿತಿ ಜನವರಿ 19 ರಂದು ಸೂರತ್ ನಲ್ಲಿ ಏರ್ಪಡಿಸಿರುವ ಕಾರ್ಯಕ್ರಮದಲ್ಲಿ 400 ಮಂದಿ ಒಂದೇ ಬಾರಿಗೆ ಬೌದ್ಧ ಧರ್ಮ ಸ್ವೀಕಾರ ಮಾಡಲಿದ್ದಾರೆ. 

ಇದೇ ಮೊದಲ ಬಾರಿಗೆ ಈ ರೀತಿ ಅತ್ಯಂತ ಹೆಚ್ಚಿನ ಸಂಖ್ಯೆಯ ಜನರ ಸಾಮೂಹಿಕವಾಗಿ ಬೌದ್ಧ ಧರ್ಮ ಸ್ವೀಕಾರ ಸಮಾರಂಭ ನಡೆಯಲಿದೆ.

ಈ ಕಾರ್ಯಮದ ಉದ್ಘಾಟನೆಯನ್ನು ಸ್ವತಃ  ಇಲ್ಲಿನ ಜಿಲ್ಲಾಧಿಕಾರಿಯೇ ಉದ್ಘಾಟಿಸಲಿದ್ದಾರೆ ಎಂದು ಆಂಮಂತ್ರಣ ಪತ್ರಿಕೆ ಮುದ್ರಿಸಲಾಗಿದೆ.  ಅಲ್ಲದೇ ಆದಾಯ ತೆರಿಗೆ ಇಲಾಖೆ ಅಧಿಕಾರಿ ಕಾರ್ಯಕ್ರಮದಲ್ಲಿ ಮುಖ್ಯ  ಅತಿಥಿಯಾಗಿ ಆಹ್ವಾನಿಸಲಾಗಿದೆ. 

ಸಾಮೂಹಿಕವಾಗಿ ಒಟ್ಟು 125 ಕುಟುಂಬಗಳ 432 ಮಂದಿ ಬೌದ್ಧ ಧರ್ಮ ಸ್ವೀಕರಿಸಿ ಈ ವೇಳೆ ಪ್ರಮಾಣ ಪತ್ರ ಪಡೆದುಕೊಳ್ಳಲಿದ್ದಾರೆ. ಎಲ್ಲರೂ ಕೂಡ ಕಾನೂನಿನ ಅಡಿಯಲ್ಲಿಯೇ ಧರ್ಮ ಮತಾಂತರವಾಗುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.

ಆದರೆ ಈ ಬಗ್ಗೆ ಮಾತನಾಡಿದ ಜಿಲ್ಲಾಧಿಕಾರಿ ದವಳ್ ಪಟೇಲ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದು ಕಷ್ಟ ಸಾಧ್ಯ. ಯಾಕೆಂದರೆ ಪ್ರಧಾನಿ ನರೇಂದ್ರ ಮೋದಿ ಜನವರಿ 19 ರಂದು ಸೂರತ್ ಗೆ ಆಗಮಿಸಲಿದ್ದಾರೆ ಎಂದು ಹೇಳಿದ್ದಾರೆ.