ಎರಡು ಐರಾವತ ಬಸ್ಸುಗಳು ರೆಸಾರ್ಟ್'ಗೆ ಬಂದಿವೆ. ಗುಜರಾತ್ ಶಾಸಕರನ್ನು ಕರೆದೊಯ್ಯಲು ಈ ಬಸ್ಸುಗಳು ಬಂದಿವೆ ಎನ್ನಲಾಗಿದೆ. ಮೂಲಗಳ ಪ್ರಕಾರ, ಗುಜರಾತ್ ಶಾಸಕರನ್ನು ಬೆಂಗಳೂರು ಅಥವಾ ಮಡಿಕೇರಿಗೆ ಶಿಫ್ಟ್ ಮಾಡಬಹುದೆನ್ನಲಾಗಿದೆ. ಮಡಿಕೇರಿಗೆ ಶಾಸಕರನ್ನು ಕರೆದೊಯ್ಯುವುದು ನಿಶ್ಚಿತ ಎನ್ನುವಂಥ ಮಾಹಿತಿಯೂ ಸುವರ್ಣನ್ಯೂಸ್'ಗೆ ಸಿಕ್ಕಿದೆ.

ಬೆಂಗಳೂರು(ಆ. 05): ಐಟಿ ರೇಡ್'ಗೆ ತುತ್ತಾಗಿರುವ ಬಿಡದಿ ಸಮೀಪದ ಈಗಲ್ಟನ್ ರೆಸಾರ್ಟ್'ನಿಂದ ಗುಜರಾತ್ ಶಾಸಕರನ್ನು ಬೇರೆಡೆಗೆ ಶಿಫ್ಟ್ ಮಾಡುವ ಸಾಧ್ಯತೆ ಇದೆ. ಎರಡು ಐರಾವತ ಬಸ್ಸುಗಳು ರೆಸಾರ್ಟ್'ಗೆ ಬಂದಿವೆ. ಗುಜರಾತ್ ಶಾಸಕರನ್ನು ಕರೆದೊಯ್ಯಲು ಈ ಬಸ್ಸುಗಳು ಬಂದಿವೆ ಎನ್ನಲಾಗಿದೆ. ಮೂಲಗಳ ಪ್ರಕಾರ, ಗುಜರಾತ್ ಶಾಸಕರನ್ನು ಬೆಂಗಳೂರು ಅಥವಾ ಮಡಿಕೇರಿಗೆ ಶಿಫ್ಟ್ ಮಾಡಬಹುದೆನ್ನಲಾಗಿದೆ. ಮಡಿಕೇರಿಗೆ ಶಾಸಕರನ್ನು ಕರೆದೊಯ್ಯುವುದು ನಿಶ್ಚಿತ ಎನ್ನುವಂಥ ಮಾಹಿತಿಯೂ ಸುವರ್ಣನ್ಯೂಸ್'ಗೆ ಸಿಕ್ಕಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಒಂದು ವಾರದಿಂದ ಗುಜರಾತ್ ಶಾಸಕರು ಈಗಲ್ಟನ್ ರೆಸಾರ್ಟ್'ನಲ್ಲಿದ್ದಾರೆ. ಡಿಕೆ ಶಿವಕುಮಾರ್ ಅವರೇ ಎಲ್ಲಾ ವ್ಯವಸ್ಥೆ ಮಾಡಿದ್ದರು. ಆದರೆ, ಮೂರು ದಿನಗಳ ಹಿಂದೆ ಐಟಿ ಇಲಾಖೆಯು ಡಿಕೆಶಿ ಮೇಲೆ ದಿಢೀರ್ ದಾಳಿ ನಡೆಸಿದೆ. ಡಿಕೆಶಿಗೆ ಸಂಬಂಧಿಸಿದ 50ಕ್ಕೂ ಹೆಚ್ಚು ಸ್ಥಳ ಮತ್ತು ವ್ಯಕ್ತಿಗಳ ಮೇಲೆ ಐಟಿ ದಾಳಿ ದಾಖಲೆಗಳನ್ನು ವಶಪಡಿಸಿಕೊಂಡಿದೆ. ಗುಜರಾತ್ ಶಾಸಕರು ಇರುವ ರೆಸಾರ್ಟ್ ಮೇಲೂ ಐಟಿ ದಾಳಿ ಮಾಡಿದೆ. ಇದು ರಾಷ್ಟ್ರಮಟ್ಟದ ಸುದ್ದಿಯಾಗಿ ಇಡೀ ದೇಶದ ಹೈಪ್ರೊಫೈಲ್ ಪ್ರಕರಣಗಳಲ್ಲೊಂದೆನಿಸಿದೆ.