ವರ್ಲ್ಡ್ ಟ್ರೇಡ್ ಸೆಂಟರ್ ಮೇಲಿಂದ ಹಾರಿ GST ಅಧಿಕಾರಿ ಆತ್ಮಹತ್ಯೆ| ಕಾರಣ ನಿಗೂಢ, ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲು

ಮುಂಬೈ[ಮೇ.14]: GST ಅಧಿಕಾರಿಯೊಬ್ಬರು ಮುಂಬೈನ ವರ್ಲ್ಡ್ ಟ್ರೇಡ್ ಸೆಂಟರ್ ಕಟ್ಟಡದಿಂದ ಜಿಗಿದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ವರದಯಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸೋಮವಾರದಂದು 51 ವರ್ಷದ GST ಅಧಿಕರಿಯೊಬ್ಬರು ಮುಂಬೈ ಕೆಫೆ ಪರೇಡ್ ನ ವರ್ಲ್ಡ್ ಟ್ರೇಡ್ ಸೆಂಟರ್ ನ 31ನೇ ಮಹಡಿಯಿಂದ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಇನ್ನು ಆತ್ಮಹತ್ಯೆಗೆ ಕಾರಣವೇನು ಎಂಬುವುದು ಇನ್ನೂ ತಿಳಿದು ಬಂದಿಲ್ಲ. ಸದ್ಯ ಆಕಸ್ಮಿಕ ಸಾವು ಎಂದು ದಾಖಲಿಸಿಕೊಂಡಿರುವ ಪೊಲೀಸರು ಪ್ರಕರಣ ದಾಖಲಿಸಿ, ತನಿಖೆ ಆರಂಭಿಸಿದ್ದಾರೆ. 

Scroll to load tweet…

ಮೃತ ವ್ಯಕ್ತಿಯನ್ನು ಹರಿಂದರ್ ಕಪಾಡಿಯಾ ಎಂದು ಗುರುತಿಸಲಾಗಿದ್ದು,. ಸೋಮವಾರ ಸಂಜೆ ಸುಮಾರು 6 ಗಮಟೆಗೆ ಈ ದುರ್ಘಟನೆ ನಡೆದಿದೆ. ವ್ಯಕ್ತಿ ಕೆಳ ಬೀಳುತ್ತಿದ್ದಂತೆಯೇ ಸುತ್ತಮುತ್ತಲಿನ ಜನ ನೆರೆದಿದ್ದಾರೆ ಹಾಗೂ ಕಪಾಡಿಯಾರನ್ನು ಆಸ್ಪತ್ರೆಗೆ ಸಾಗಿಸಲು ವ್ಯವಸ್ಥೆ ನಡೆಸಿದ್ದಾರೆ. ದುರಾದೃಷ್ಟವಶಾತ್ ಕಪಾಡಿಯಾ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.