Asianet Suvarna News Asianet Suvarna News

GSTಯಿಂದ ಸಾರಿಗೆ ಸಂಸ್ಥೆಗೆ ಎದುರಾಗಿದೆ ಸಂಕಷ್ಟ: ಅಪಾಯದಲ್ಲಿದೆ 2 ಕೋಟಿ ಬೆಲೆ ಬಾಳುವ ಗುಜರಿ

ದೇಶದಲ್ಲಿ ಜಿಎಸ್ ಟಿ ಜಾರಿಗೆ ಬಂದ ಮೇಲೆ  ಉದ್ಯಮ, ವ್ಯಾಪಾರ, ವಹಿವಾಟಿನ ಮೇಲೆ ಮಹತ್ವದ ಬದಲಾವಣೆಗಳು ನಡೆದಿವೆ. ಆದ್ರೆ ಜಿಎಸ್ ಟಿಯ ಬಿಸಿ ಈಗ  ಸಾರಿಗೆ ಸಂಸ್ಥೆಗಳಿಗೂ ತಟ್ಟಿದೆ. ಜಿಎಸ್ ಟಿಯಿಂದ  ಸಾರಿಗೆ ಸಂಸ್ಥೆ ಸಂಕಷ್ಟಕ್ಕೀಡಾಗಿದೆ.   

GST Effect On KSRTC and BMTC

ಬೆಂಗಳೂರು(ಅ.04): ದೇಶದಲ್ಲಿ ಜಿಎಸ್ ಟಿ ಜಾರಿಗೆ ಬಂದ ಮೇಲೆ  ಉದ್ಯಮ, ವ್ಯಾಪಾರ, ವಹಿವಾಟಿನ ಮೇಲೆ ಮಹತ್ವದ ಬದಲಾವಣೆಗಳು ನಡೆದಿವೆ. ಆದ್ರೆ ಜಿಎಸ್ ಟಿಯ ಬಿಸಿ ಈಗ  ಸಾರಿಗೆ ಸಂಸ್ಥೆಗಳಿಗೂ ತಟ್ಟಿದೆ. ಜಿಎಸ್ ಟಿಯಿಂದ  ಸಾರಿಗೆ ಸಂಸ್ಥೆ ಸಂಕಷ್ಟಕ್ಕೀಡಾಗಿದೆ.   

ಕೇಂದ್ರ ಸರ್ಕಾರ ದೇಶದಲ್ಲಿ GSTಯನ್ನ ಜಾರಿಗೆ ತಂದ ನಂತರ ವ್ಯಾಪಾರ ವಹಿವಾಟು ಸಂಪೂಣರ್ವಾಗಿ ಕುಗ್ಗಿ ಹೋಗಿತ್ತು. ಈಗ ಆ ಬಿಸಿ ಕೆಎಸ್​'ಆರ್​ಟಿಸಿಗೆ ತಟ್ಟಿದೆ. ಗುಜರಿಗೆ ಸೇರಿರುವ 800 ಬಸ್‌'ಗಳ ಖರೀದಿಗೆ ಗುಜರಿಯವರು ಮುಂದೆ ಬರುತ್ತಿಲ್ಲ. ಗುಜರಿ ವಸ್ತುಗಳ ಖರೀದಿ ಮೇಲೆ ಶೇಕಡ 28ರಷ್ಟು ತೆರಿಗೆ ವಿಧಿಸಿರುವುದೇ ಇದಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.

ಸದ್ಯಕ್ಕೆ ಬಿಎಂಟಿಸಿ ಮತ್ತು ಕೆಎಸ್​ಆರ್​ಟಿಸಿಯ ಗುಜರಿ ಬಸ್‌ಗಳನ್ನು ಡಿಪೊಗಳಲ್ಲಿ ನಿಲ್ಲಿಸಲಾಗಿದೆ. ಇದರಿಂದಾಗಿ ಬಸ್‌'ಗಳ ರಿಪೇರಿ ಮಾಡಲು, ಬಸ್'​ಗಳ ನಿರ್ವಹಣೆ ಮಾಡಲು ಡಿಪೋಗಳಲ್ಲಿ ಜಾಗ ಇಲ್ಲದಂತಹ ಸ್ಥಿತಿ ನಿರ್ಮಾಣವಾಗಿದೆ. ಗುಜರಿ ವಸ್ತುಗಳು ಡಿಪೋದಲ್ಲಿ ಹೆಚ್ಚಾಗಿರುವುದು ಅಗ್ನಿ ಅವಘಡ ಹೆಚ್ಚಾಗಲು ಕಾರಣವಾಗಿದೆ. ಸದ್ಯಕ್ಕೆ ಅಂದಾಜು 2 ಕೋಟಿ ಬೆಲೆ ಬಾಳುವ ಗುಜರಿ ಬಿದ್ದಿದೆ. ಇದನ್ನ ತ್ವರಿತಗತಿಯಲ್ಲಿ ವಿಲೇವಾರಿ ಮಾಡದೇ ಹೋದರೆ ಅಪಾಯದ ಸಾಧ್ಯತೆ ಇದೆ.

 

Follow Us:
Download App:
  • android
  • ios