ಸಾಮಾನ್ಯವಾಗಿ ದೀಪಾವಳಿ, ಯುಗಾದಿ ಸಂದರ್ಭದಲ್ಲಿ ಗ್ರಾಹಕರಿಗೆ ಬಂಫರ್ ಆಫರ್ ಸಿಗುವುದು ಕಾಮನ್. ಆದರೆ ಜಿ.ಎಸ್.ಟಿಯಿಂದ ಮಿಡನೈಟ್'ನಲ್ಲೇ ಬಂಪರ್ ಆಫರ್ ಸಿಗುವ ಹಾಗಾಗಿದೆ. ದೇಶಾದ್ಯಂತ ಮೂರು ಗಂಟೆಯಲ್ಲಿ ಶೇ.30 ರಷ್ಟು ಆಫರ್ರನ್ನ ನೋಡುವ ಮೂಲಕ ಬಿಗ್ ಬಜಾರ್ ಜಿಎಸ್ಟಿಯನ್ನ ಸ್ವಾಗತಿಸಿದೆ.
ಬೆಂಗಳೂರು(ಜೂ.01): ಸಾಮಾನ್ಯವಾಗಿ ದೀಪಾವಳಿ, ಯುಗಾದಿ ಸಂದರ್ಭದಲ್ಲಿ ಗ್ರಾಹಕರಿಗೆ ಬಂಫರ್ ಆಫರ್ ಸಿಗುವುದು ಕಾಮನ್. ಆದರೆ ಜಿ.ಎಸ್.ಟಿಯಿಂದ ಮಿಡನೈಟ್'ನಲ್ಲೇ ಬಂಪರ್ ಆಫರ್ ಸಿಗುವ ಹಾಗಾಗಿದೆ. ದೇಶಾದ್ಯಂತ ಮೂರು ಗಂಟೆಯಲ್ಲಿ ಶೇ.30 ರಷ್ಟು ಆಫರ್ರನ್ನ ನೋಡುವ ಮೂಲಕ ಬಿಗ್ ಬಜಾರ್ ಜಿಎಸ್ಟಿಯನ್ನ ಸ್ವಾಗತಿಸಿದೆ.
ಇಂದಿನಿಂದ ದೇಶಾದ್ಯಂತ ಸರಕು ಮತ್ತು ಸೇವಾ ತೆರಿಗೆ ಜಾರಿಯಾಗಿದ ಬೆನ್ನಲೇ ಬಿಗ್ ಬಜಾರ್ ತನ್ನ ಗ್ರಾಹಕರಿಗೆ ಭಾರಿ ಆಫರ್ ನೀಡಿತ್ತು. ಪ್ರಧಾನಿ ಮೋದಿ ದೆಹಲಿಯಲ್ಲಿ ಜಿಎಸ್ಟಿ ಮಂಡನೆ ಮಾಡುತ್ತಿದ್ದಂತೆ, ಇತ್ತ ಬಿಗ್ಬಜಾರ್ ಶೇ.30 ರಷ್ಟು ರಿಯಾಯಿತಿ ನೀಡುವುದರ ಮೂಲಕ ಗ್ರಾಹಕರನ್ನು ತನ್ನತ್ತ ಸೆಳೆಯಿತು. ಮಧ್ಯ ರಾತ್ರಿ 12 ಗಂಟೆಯಿಂದ 3 ಗಂಟೆವೆರೆಗೂ ಇದ್ದ ಬಿಗ್ ಬಜಾರ್ ಆಫರ್ ಪಡೆಯಲು ಸಾವಿರಾರೂ ಜನರು ಕ್ಯೂ ನಿಂತು ಇದರ ಸದುಪಯೋಗ ಪಡೆದುಕೊಂಡರು.
ಮಲೇಶ್ವರಂನ ಬಿಗ್ ಬಜಾರ್ನಲ್ಲಿ ರಾತ್ರಿ ಮೂರು ಗಂಟೆವರೆಗೂ ಗ್ರಾಹಕರು ಶಾಪಿಂಗ್ ಮಾಡಲು ಮುಗಿಬಿದ್ದಿದ್ರು. ಟಿ.ವಿ., ರೆಫ್ರಿಜರೇಟರ್ ಗಳು ಸೇರಿದಂತೆ ಹಲವಾರು ಗೃಹೋಪಯೋಗಿ ವಸ್ತುಗಳು, ಎಲೆಕ್ಟ್ರಾನಿಕ್ ಸಾಮಾಗ್ರಿಗಳನ್ನು ಖರೀದಿ ಮಾಡೋ ಮೂಲಕ ಜಿಎಸ್ಟಿ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರದ ಒಂದು ದೇಶ ಒಂದು ತೆರಿಗೆಯನ್ನು ಜನರು ಸ್ವಾಗತಿಸಿದರು. ಮೊದಲು ಗ್ರಾಹಕರು ನೀಡುತ್ತಿದ್ದ ವಿವಿಧ ರೀತಿಯ ಟ್ಯಾಕ್ಸ್'ಗೆ ಬ್ರೇಕ್ ಬಿದ್ದಿದ್ದು, ಏಕ್ ರೂಪ ತೆರಿಗೆಗೆ ಸಾರ್ವಜನಿಕರು ಬೆಂಬಲ ಸೂಚಿಸಿದ್ದರು.
