ಕಳೆದ ಏಪ್ರಿಲ್‌ ತಿಂಗಳಲ್ಲಿ 94016 ಕೋಟಿ ರು. ಜಿಎಸ್‌ಟಿ ಸಂಗ್ರಹವಾಗಿದೆ. ಇದು ಹಿಂದಿನ ಮಾಚ್‌ರ್‍ ತಿಂಗಳಿಗೆ ಹೋಲಿಸಿದೆ 6000 ಕೋಟಿ ರು. ಕಡಿಮೆ. ಮಾಚ್‌ರ್‍ ತಿಂಗಳಲ್ಲಿ ದಾಖಲೆಯ 1.03 ಲಕ್ಷ ಕೋಟಿ ರು. ಜಿಎಸ್‌ಟಿ ಸಂಗ್ರಹವಾಗಿತ್ತು.

ನವದೆಹಲಿ (ಜೂ. 02): ಕಳೆದ ಏಪ್ರಿಲ್‌ ತಿಂಗಳಲ್ಲಿ 94016 ಕೋಟಿ ರು. ಜಿಎಸ್‌ಟಿ ಸಂಗ್ರಹವಾಗಿದೆ. ಇದು ಹಿಂದಿನ ಮಾಚ್‌ರ್‍ ತಿಂಗಳಿಗೆ ಹೋಲಿಸಿದೆ 6000 ಕೋಟಿ ರು. ಕಡಿಮೆ. ಮಾರ್ಚ್ ತಿಂಗಳಲ್ಲಿ ದಾಖಲೆಯ 1.03 ಲಕ್ಷ ಕೋಟಿ ರು. ಜಿಎಸ್‌ಟಿ ಸಂಗ್ರಹವಾಗಿತ್ತು.

ಆದರೆ, ಇಲ್ಲಿ ವರೆಗಿನ (2017-18) ಜಿಎಸ್‌ಟಿ ಸಂಗ್ರಹ ಸರಾಸರಿ 89,885 ಕೋಟಿ ರು.ಗಿಂತ ಕಡಿಮೆ ಇಲ್ಲ. ಇದೇ ವೇಳೆ ಮೇ ತಿಂಗಳಲ್ಲಿ 62 ಲಕ್ಷ ಉದ್ಯಮ ಸಂಸ್ಥೆಗಳು ತಮ್ಮ ಜಿಎಸ್‌ಟಿಆರ್‌-3ಬಿ ವಿವರ ಸಲ್ಲಿಸಿವೆ ಎಂದು ಹಣಕಾಸು ಸಚಿವಾಲಯ ಮೂಲಗಳು ತಿಳಿಸಿವೆ. ಇದೇ ಅವಧಿಯಲ್ಲಿ ಸಂಗ್ರಹವಾದ ಸಿಜಿಎಸ್‌ಟಿ ಮೊತ್ತ 15,866 ಕೋಟಿ ರು., ಎಸ್‌ಜಿಎಸ್‌ಟಿ 21,691 ಕೋಟಿ ರು., ಐಜಿಎಸ್‌ಟಿ 49,120 ಕೋಟಿ ರು. ಮತ್ತು ಸೆಸ್‌ 7,399 ಕೋಟಿ ರು. ಸಂಗ್ರಹವಾಗಿದೆ.