ಪ್ರಸನ್ನ ಹೋರಾಟಕ್ಕೆ ಯಶ; ಕರಕುಶಲ ವಸ್ತುಗಳಿಗೆ ಜಿಎಸ್'ಟಿ ರದ್ದು

First Published 19, Jan 2018, 8:13 AM IST
GST Cancell for Handicraft Items
Highlights

ಮಹತ್ವದ ಕ್ರಮವೊಂದರಲ್ಲಿ, 29 ಕರಕುಶಲ ವಸ್ತುಗಳ ಜಿಎಸ್‌ಟಿ (ಸರಕು ಹಾಗೂ ಸೇವಾ ತೆರಿಗೆ) ರದ್ದುಗೊಳಿಸಲು ಜಿಎಸ್‌ಟಿ ಮಂಡಳಿ ನಿರ್ಧರಿಸಿದೆ. ಇದೇ ವೇಳೆ 29 ವಸ್ತು, 53 ವಿವಿಧ ಸೇವೆಯ ಜಿಎಸ್‌ಟಿ ಇಳಿಸಲು ಕೂಡಾ ನಿರ್ಧರಿಸಲಾಗಿದೆ.

ನವದೆಹಲಿ (ಜ.19): ಮಹತ್ವದ ಕ್ರಮವೊಂದರಲ್ಲಿ, 29 ಕರಕುಶಲ ವಸ್ತುಗಳ ಜಿಎಸ್‌ಟಿ (ಸರಕು ಹಾಗೂ ಸೇವಾ ತೆರಿಗೆ) ರದ್ದುಗೊಳಿಸಲು ಜಿಎಸ್‌ಟಿ ಮಂಡಳಿ ನಿರ್ಧರಿಸಿದೆ. ಇದೇ ವೇಳೆ 29 ವಸ್ತು, 53 ವಿವಿಧ ಸೇವೆಯ ಜಿಎಸ್‌ಟಿ ಇಳಿಸಲು ಕೂಡಾ ನಿರ್ಧರಿಸಲಾಗಿದೆ.

ಇದರಿಂದಾಗಿ ಕರಕುಶಲ ವಸ್ತುಗಳ ಮೇಲೆ ಜಿಎಸ್‌ಟಿ ತೆಗೆದು ಹಾಕಬೇಕು ಎಂದು ಕರ್ನಾಟಕದ ರಂಗಕರ್ಮಿ ರಂಗಾಯಣ ಪ್ರಸನ್ನ ಅವರ ಹೋರಾಟಕ್ಕೆ ಯಶ ಸಿಕ್ಕಂತಾಗಿದೆ. ಪ್ರಸನ್ನ ಅವರ ಆಗ್ರಹಾನುಸಾರ, ಕರಕುಶಲ ಜಿಎಸ್‌ಟಿ ತೆಗೆದು ಹಾಕಬೇಕು ಎಂದು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿತ್ತ ಸಚಿವ ಅರುಣ್ ಜೇಟ್ಲಿಯವರಿಗೆ ಪತ್ರ ಕೂಡ ಬರೆದಿದ್ದರು ಎಂಬುದು ಇಲ್ಲಿ ಗಮನಾರ್ಹ.

ಇನ್ನು ಪೆಟ್ರೋಲ್ ಹಾಗೂ ಡೀಸೆಲ್'ಗಳನ್ನು ಜಿಎಸ್‌ಟಿ ವ್ಯಾಪ್ತಿಗೆ ತರುವ ಸಂಬಂಧ ಮುಂದಿನ ಜಿಎಸ್‌ಟಿ ಮಂಡಳಿ ಸಭೆಯಲ್ಲಿ ಚರ್ಚಿಸಲು ನಿರ್ಧರಿಸಲಾಗಿದೆ. ಮಂಡಳಿಯ ಸಭೆ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ವಿತ್ತ ಸಚಿವ ಅರುಣ್ ಜೇಟ್ಲಿ, ‘೨೯ ಕರಕುಶಲ ವಸ್ತುಗಳಿಗೆ ಇನ್ನು ತೆರಿಗೆ ಇರುವುದಿಲ್ಲ. ಕರಕುಶಲ ಕ್ಷೇತ್ರದ ರಕ್ಷಣೆಗೋಸ್ಕರ ಈ ತೀರ್ಮಾನ ಕೈಗೊಳ್ಳಲಾಗಿದೆ’ ಎಂದು ಹೇಳಿದರು. ಭಾರತ ಪ್ರತಿ ವರ್ಷ ೪ ಸಾವಿರ ಕೋಟಿ ರು. ಮೌಲ್ಯದ ಕರಕುಶಲ ವಸ್ತುಗಳನ್ನು ರಫ್ತು ಮಾಡುತ್ತದೆ. ಈವರೆಗೆ ನೆಲಹಾಸು ಸೇರಿದಂತೆ ಹಲವು ಕರಕುಶಲ ವಸ್ತುಗಳಿಗೆ ಶೇ.೧೨ರಿಂದ ಶೇ.೧೮ರವರೆಗೆ ಜಿಎಸ್‌ಟಿ ದರ ಅನ್ವಯವಾಗುತ್ತಿತ್ತು.

ಯಾವ್ಯಾವ ವಸ್ತು ದರ ಇಳಿಕೆ

ಸೆಕೆಂಡ್ ಹ್ಯಾಂಡ್ ವೆಹಿಕಲ್, ಬಯೋ ಡೀಸೆಲ್, ಟೈಲರಿಂಗ್ ಸೇವೆ, ಥೀಮ್ ಪಾರ್ಕ್, ವಜ್ರ, ಬೆಲೆಬಾಳುವ ಹರಳು, ನೀರಾವರಿ ಉಪಕರಣ, ಚಾಕಲೆಟ್, 20 ಲೀಟರ್ ನೀರಿನ ಬಾಟಲ್, ಮೆಹಂದಿ ಕೋನ್, ಖಾಸಗಿ ಹಂಚಿಕೆದಾರರು ಸರಬರಾಜು ಮಾಡುವ ಎಲ್‌ಪಿಜಿ, ವೆಲ್ವೆಟ್, ಸೇರಿ ಹಲವು ವಸ್ತುಗಳು, ಸೇವೆಗಳ ದರ ಕಡಿತ ಮಾಡಲಾಗಿದೆ.

 

 

loader