ಬೇಹುಗಾರಿಕೆ ಆರೋಪ : ವಾಯುಪಡೆ ಗ್ರೂಪ್ ಕ್ಯಾಪ್ಟನ್ ಬಂಧನ

First Published 1, Feb 2018, 9:10 AM IST
Group Captain of Indian Air Force suspected of Leaking classified information held for questioning
Highlights

ಬೇಹುಗಾರಿಕೆ ಮತ್ತು ಸೇನೆಗೆ ಸಂಬಂಧಿಸಿದ ಸೂಕ್ಷ್ಮ ದಾಖಲೆ ಪಡೆಯಲು ಯತ್ನಿಸಿದ ಭಾರತೀಯ ವಾಯುಪಡೆಯ ಗ್ರೂಪ್ ಕ್ಯಾಪ್ಟನ್ ಒಬ್ಬರನ್ನು ಬುಧವಾರ ಬಂಧಿಸಲಾಗಿದೆ.

ನವದೆಹಲಿ: ಬೇಹುಗಾರಿಕೆ ಮತ್ತು ಸೇನೆಗೆ ಸಂಬಂಧಿಸಿದ ಸೂಕ್ಷ್ಮ ದಾಖಲೆ ಪಡೆಯಲು ಯತ್ನಿಸಿದ ಭಾರತೀಯ ವಾಯುಪಡೆಯ ಗ್ರೂಪ್ ಕ್ಯಾಪ್ಟನ್ ಒಬ್ಬರನ್ನು ಬುಧವಾರ ಬಂಧಿಸಲಾಗಿದೆ. ಈ ಸೇನಾಧಿಕಾರಿ ಹನಿಟ್ರ್ಯಾಪ್ ಜಾಲಕ್ಕೆ ಸಿಕ್ಕಿದ್ದನೇ ಎಂಬುದರ ಬಗ್ಗೆಯೂ ವಾಯುಪಡೆಯ ಭದ್ರತಾ ಮತ್ತು ತನಿಖಾ ತಂಡ ವಿಚಾರಣೆಗೊಳಪಡಿಸಿವೆ.

ನಿಯಮ ಉಲ್ಲಂಘಿಸಿದ ಅಧಿಕಾರಿ ಎಲೆಕ್ಟ್ರಾನಿಕ್ ಸಾಧನಗಳ ಮೂಲಕ ಕೆಲ ಅಕ್ರಮ ಚಟುವಟಿಕೆಗಳಲ್ಲಿ ನಿರತನಾಗಿದ್ದನ್ನು ಗುಪ್ತಚರ ಕಣ್ಗಾವಲಿನಲ್ಲಿ ಪತ್ತೆ ಹಚ್ಚಲಾಗಿತ್ತು. ಈ ವೇಳೆ ಸಾಮಾಜಿಕ ತಾಣದ ಮೂಲಕ ಅಧಿಕಾರಿ ಸಂಪರ್ಕದಲ್ಲಿದ್ದ ಮಹಿಳೆ ಯಾರು ಎಂಬುದೂ ತನಿಖೆ ಕೈಗೊಳ್ಳಲಾಗಿದೆ.

loader