Asianet Suvarna News Asianet Suvarna News

ಮೊಮ್ಮಗನಿಗೆ ಪಾಠ ಹೇಳಿ ಕೋಟ್ಯಾಧಿಪತಿಯಾದ ಅಜ್ಜಿ: ಪುಸ್ತಕದಲ್ಲಿದ್ದ 'ಖಜಾನೆ' ಯಾವುದು?

ಮೊಮ್ಮನಿಗೆ ಪಾಠ ಹೇಳಿಕೊಡುತ್ತಿದ್ದಾಗ ತೆರೆಯಿತು ಅಜ್ಜಿಯ ಅದೃಷ್ಟದ ಬಾಗಿಲು| ನೋಡ ನೋಡುತ್ತಿದ್ದಂತೆಯೇ ಕೋಟ್ಯಾಧಿಪತಿಯಾದ ದಂಪತಿ|

grandmother won 5 crore lottery found lottery ticket in grand sons book
Author
Bangalore, First Published Apr 4, 2019, 3:26 PM IST

ಕೆನಡಾ[ಏ.04]: ಕೆನಡಾದ ದಂಪತಿಯೊಂದು ತಿಂಗಳಾನುಗಟ್ಟಲೆ ಧೂಳು ಹಿಡಿದು ಮೂಲೆಯಲ್ಲಿ ಬಿದ್ದಿದ್ದ ಪುಸ್ತಕದ ಪುಟದೊಳಗೆ ಅಡಗಿದ್ದ ಲಾಟರಿ ಟಿಕೆಟ್ ನಿಂದ 10 ಲಕ್ಷ ಕೆನಡಾ ಡಾಲರ್ ಗೆದ್ದಿದ್ದಾರೆ. ಲೋಟೋ ಕ್ಯೂಬೆಕ್ ಸಂಘಟನೆಯು ಏಪ್ರಿಲ್ 3 ರಂದು ಈ ಜೋಡಿ 7.5 ಲಕ್ಷ ಅಮೆರಿಕನ್ ಡಾಲರ್[ಸುಮಾರು 5ಕೋಟಿ 16 ಲಕ್ಷ ರೂಪಾಯಿ] ಗೆದ್ದಿರುವುದಾಗಿ ಘೋಷಿಸಿದೆ.

ನಿಕೋಲ್ ಪೆಡ್ನಾಲ್ಟ್ ಹಾಗೂ ರಾಜರ್ ಲಾರೋಕ್ ರಿಗೆ ತಮ್ಮ ಬಳಿ 2018ರ ಏಪ್ರಿಲ್ 5ರ ಲಾಟರಿ ಟಿಕೆಟ್ ಇದೆ ಎಂಬ ವಿಚಾರ ಕಳೆದ ವಾರಾಂತ್ಯದಲ್ಲಿ ಬೆಳಕಿಗೆ ಬಂದಿತ್ತು. 

ಪೆಡ್ನಾಲ್ಟ್ ತನ್ನ ಮೊಮ್ಮಗನಿಗೆ ಹೊಂ ವರ್ಕ್ ಮಾಡಲು ಸಹಾಯ ಮಾಡುತ್ತಿದ್ದರು ಈ ಸಂದರ್ಭದಲ್ಲಿ ಈ ಲಾಟರಿ ಟಿಕೆಟ್ ಅವರ ಕೈ ಸೇರಿತ್ತು. ಈ ಟಿಕೆಟ್ ಅವರು 2018ರ ವ್ಯಾಲಂಟೈನ್ಸ್ ಡೇಯಂದು ಖರೀದಿಸಿದ್ದರು. ತಮ್ಮ ಮೊಮ್ಮಗ ಹೋಂ ವರ್ಕ್ ಮಾಡಲು ಸಹಾಯ ಮಾಡಿರದಿದ್ದರೆ ಈ ಲಾಟರಿ ಟಿಕೆಟ್ ತಮಗೆ ಸಿಗುತ್ತಿರಲಿಲ್ಲ ಎನ್ನುವುದು ಪೆಡ್ನಾಲ್ಟ್ ಮಾತಾಗಿದೆ.

ಲಾಟರಿ ಟಿಕೆಟ್ ವಿಚಾರದಲ್ಲಿ ಈ ದಂಪತಿ ಬಹಳ ಲಕ್ಕಿ. ಒಂದಡೆ ಇದರಿಂದ 5 ಕೋಟಿ ಅವರ ಕೈ ಸೇರಿದರೆ ಮತ್ತೊಂದೆಡೆ ಈ ಟಿಕೆಟ್ ಅವಧಿ ಮುಕ್ತಾಯಗೊಳ್ಳಲು ಕೆಲವೇ ದಿನಗಳ ಮೊದಲು ಸಿಕ್ಕಿರುವುದು ಅದೃಷ್ಟ.

Follow Us:
Download App:
  • android
  • ios