ತಾಲೂಕಿನ ಜೇನಿ ಗ್ರಾಪಂ ಕಾರ್ಯಾಲಯದಲ್ಲಿ ರಾಜೀವ್ ಗಾಂಧಿ ಪಂಚಾಯತ್ ಸಶಕ್ತೀಕರಣ ಅಭಿಯಾನದಡಿ ನಿರ್ಮಿಸಿದ ‘ಪ್ರಕೃತಿ ವಿಕೋಪ ನಿಯಂತ್ರಣ’ ಮೊದಲ ಅಂತಸ್ತಿನ ಕಟ್ಟಡ ಉದ್ಘಾಟಿಸಿ, ಅಧಿಕಾರ ವಿಕೇಂದ್ರೀಕರಣ ನಿಟ್ಟಿನಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಗ್ರಾಪಂಗೆ ಹೆಚ್ಚು ಅಧಿಕಾರ ಹಾಗೂ ಅನುದಾನ ನೀಡುತ್ತಿದೆ ಎಂದರು.
ಹೊಸನಗರ(ಡಿ.18): ಗ್ರಾಮ ಪಂಚಾಯ್ತಿಗಳು ಹೆಚ್ಚು ಸಬಲೀಕರಣ ಆಗಬೇಕು ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಹೇಳಿದರು.
ತಾಲೂಕಿನ ಜೇನಿ ಗ್ರಾಪಂ ಕಾರ್ಯಾಲಯದಲ್ಲಿ ರಾಜೀವ್ ಗಾಂಧಿ ಪಂಚಾಯತ್ ಸಶಕ್ತೀಕರಣ ಅಭಿಯಾನದಡಿ ನಿರ್ಮಿಸಿದ ‘ಪ್ರಕೃತಿ ವಿಕೋಪ ನಿಯಂತ್ರಣ’ ಮೊದಲ ಅಂತಸ್ತಿನ ಕಟ್ಟಡ ಉದ್ಘಾಟಿಸಿ, ಅಧಿಕಾರ ವಿಕೇಂದ್ರೀಕರಣ ನಿಟ್ಟಿನಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಗ್ರಾಪಂಗೆ ಹೆಚ್ಚು ಅಧಿಕಾರ ಹಾಗೂ ಅನುದಾನ ನೀಡುತ್ತಿದೆ ಎಂದರು.
ಜಿಲ್ಲಾ ಪಂಚಾಯ್ತಿ ಸದಸ್ಯ ಕಲಗೋಡು ರತ್ನಾಕರ ಮಾತನಾಡಿ, ಅತ್ಯಂತ ಹಿಂದುಳಿದ ಗ್ರಾಪಂಗೆ ಸಚಿವರ ಪ್ರಯತ್ನದ ಫಲವಾಗಿ ಸುಮಾರು ರು. 15 ಲಕ್ಷ ವೆಚ್ಚದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಿಸಲಾಗಿದೆ ಎಂದು ತಿಳಿಸಿದರು.