ದೇಶದ ಆರ್ಥಿಕ ವ್ಯವಸ್ಥೆಯಲ್ಲಿ ಬಹುದೊಡ್ಡ ಕ್ರಾಂತಿ ಎಂದೇ ಬಿಂಬಿಸಲಾಗುತ್ತಿರುವ ಜಿಎಸ್’ಟಿಯನ್ನು ಜಾರಿಗೆ ತಂದು ಶಾಕ್ ನೀಡಿದ ಪ್ರಧಾನಿ ನರೇಂದ್ರ ಮೋದಿ ಕಾಳಧನಿಕರಿಗೆ ಎಚ್ಚರಿಕೆ ನೀಡಿದ್ದಾರೆ. ಇನ್ನೆರಡು ವರ್ಷಗಳಲ್ಲಿ ಸ್ವಿಜ್ಜರ್’ಲ್ಯಾಂಡ್ ಭಾರತದ ಜೊತೆ ಮಾಹಿತಿ ವಿನಿಮಯ ಮಾಡಿಕೊಳ್ಳಲು ಶುರು ಮಾಡಿದರೆ ಕಾಳಧನಿಕರಿಗೆ ಇನ್ನಷ್ಟು ಸಂಕಷ್ಟ ಎದುರಾಗಲಿದೆ ಎಂದು ಚುರುಕು ಮುಟ್ಟಿಸಿದ್ದಾರೆ.
ನವದೆಹಲಿ (ಜು.01): ದೇಶದ ಆರ್ಥಿಕ ವ್ಯವಸ್ಥೆಯಲ್ಲಿ ಬಹುದೊಡ್ಡ ಕ್ರಾಂತಿ ಎಂದೇ ಬಿಂಬಿಸಲಾಗುತ್ತಿರುವ ಜಿಎಸ್’ಟಿಯನ್ನು ಜಾರಿಗೆ ತಂದು ಶಾಕ್ ನೀಡಿದ ಪ್ರಧಾನಿ ನರೇಂದ್ರ ಮೋದಿ ಕಾಳಧನಿಕರಿಗೆ ಎಚ್ಚರಿಕೆ ನೀಡಿದ್ದಾರೆ. ಇನ್ನೆರಡು ವರ್ಷಗಳಲ್ಲಿ ಸ್ವಿಜ್ಜರ್’ಲ್ಯಾಂಡ್ ಭಾರತದ ಜೊತೆ ಮಾಹಿತಿ ವಿನಿಮಯ ಮಾಡಿಕೊಳ್ಳಲು ಶುರು ಮಾಡಿದರೆ ಕಾಳಧನಿಕರಿಗೆ ಇನ್ನಷ್ಟು ಸಂಕಷ್ಟ ಎದುರಾಗಲಿದೆ ಎಂದು ಚುರುಕು ಮುಟ್ಟಿಸಿದ್ದಾರೆ.
ಕಪ್ಪುಹಣವನ್ನು ಅಡಗಿಸಲು ಸಹಾಯ ಮಾಡುವ ವ್ಯವಹಾರ ಸಂಸ್ಥೆಯ ಮೇಲೆ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿದೆ. ಅದರಿಂದಾಗುವ ರಾಜಕೀಯ ಪರಿಣಾಮಗಳ ಬಗ್ಗೆ ಯೋಚಿಸುವಿದಿಲ್ಲ. ನಾವದನ್ನು ಎದುರಿಸಲು ಸಿದ್ಧ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಇಂದಿರಾ ಗಾಂಧಿ ಕ್ರೀಡಾಂಗಣದಲ್ಲಿ ಚಾರ್ಟೆಡ್ ಅಕೌಂಟೆಂಟ್ ಇನ್ಸಿಟ್ಯೂಟ್’ನ ಉದ್ಘಾಟನಾ ದಿನವನ್ನು ಉದ್ದೇಶಿಸಿ ಮಾತನಾಡುತ್ತಾ, ಜಿಎಸ್’ಟಿಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಚಾರ್ಟೆಡ್ ಅಕೌಂಟೆಂಟ್’ಗಳ ಜವಾಬ್ದಾರಿ ದೊಡ್ಡದಿದೆ. ಇವರೇ ಭಾರತದ ಅರ್ಥ ವ್ಯವಸ್ಥೆಯ ಪಿಲ್ಲರ್;ಗಳು. ಹೆಚ್ಚು ಬ್ಯುಸಿನೆಸ್ ಆಗಲು ಜನರ ಆರೋಗ್ಯ ಹಾಳಾಗಲಿ ಎಂದು ವೈದ್ಯರು ಹೇಗೆ ಬಯಸುವುದಿಲ್ಲವೋ ಹಾಗೆಯೇ ಸಮಾಜದ ಆರ್ಥಿಕ ಸ್ವಾಸ್ಥ್ಯ ಕಾಪಾಡಲು ಚಾರ್ಟೆಡ್ ಅಕೌಂಟೆಂಟ್’ಗಳ ಪಾತ್ರ ದೊಡ್ಡದಿದೆ ಎಂದು ಮೋದಿ ಹೇಳಿದ್ದಾರೆ.
