ನವದೆಹಲಿ (ಮಾ. 12): ಮಧ್ಯಂತರ ಬಜೆಟ್‌ನಲ್ಲಿ ಘೋಷಿಸಿದಂತೆ ದೇಶದ 2.6 ಕೋಟಿ ಸಣ್ಣ ಮತ್ತು ಅತಿ ಸಣ್ಣ ರೈತರ ಬ್ಯಾಂಕ್ ಖಾತೆಗೆ ಕೇಂದ್ರ ಸರ್ಕಾರ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ 5215 ಕೋಟಿ ಹಣವನ್ನು ಜಮಾ ಮಾಡಿರುವುದಾಗಿ ಪ್ರಧಾನ ಮಂತ್ರಿ ಕಾರ್ಯಾಲಯ ತಿಳಿಸಿದೆ.

ಪ್ರಧಾನಿ ಕಿರೀಟ ಯಾರಿಗೆ..? ಎಲೆಕ್ಷನ್ ಭವಿಷ್ಯ ನುಡಿದ ಕೋಡಿಶ್ರೀ..!

ಈ ಯೋಜನೆಯಡಿ ಪ್ರತಿ ರೈತನಿಗೆ ವಾರ್ಷಿಕ 6 ಸಾವಿರ ರು.ಗಳನ್ನು ಮೂರು ಕಂತಿನಲ್ಲಿ ನೀಡುವುದಾಗಿ ತಿಳಿಸಿದ್ದು, ಇದರಿಂದ ದೇಶದ 12 ಕೋಟಿ ರೈತ ಕುಟುಂಬಗಳಿಗೆ ಅನುಕೂಲವಾಗಲಿದೆ ಎಂದು ತಿಳಿಸಿತ್ತು. ಇದಕ್ಕಾಗಿ ಎನ್‌ಡಿಎ ಸರ್ಕಾರ ಬಜೆಟ್‌ನಲ್ಲಿ 20 ಸಾವಿರ ಕೋಟಿ ಅನುದಾನ ಮೀಸಲಿರಿಸಿದೆ.