ಸಂಸತ್ತು ಕಲಾಪಗಳಲ್ಲಿ ಸಂಸದರ ಗೈರು ಹಾಜರಾತಿ ಬಗ್ಗೆ ಇತ್ತೀಚೆಗೆ  ಪ್ರಧಾನಿ ಮೋದಿ ಅಸಮಾಧಾನ ವ್ಯಕ್ತಪಡಿಸಿರುವ ಬೆನ್ನಲ್ಲೇ, ಇಂದು ಕೇಂದ್ರ ಸರ್ಕಾರ ರಾಜ್ಯಸಭೆಯಲ್ಲಿ ತೀವ್ರ ಮುಜುಗರಕ್ಕೊಳಗಾದ ಘಟನೆ ನಡೆದಿದೆ,

ನವದೆಹಲಿ: ಸಂಸತ್ತು ಕಲಾಪಗಳಲ್ಲಿ ಸಂಸದರ ಗೈರು ಹಾಜರಾತಿ ಬಗ್ಗೆ ಇತ್ತೀಚೆಗೆ ಪ್ರಧಾನಿ ಮೋದಿ ಅಸಮಾಧಾನ ವ್ಯಕ್ತಪಡಿಸಿರುವ ಬೆನ್ನಲ್ಲೇ, ಇಂದು ಕೇಂದ್ರ ಸರ್ಕಾರ ರಾಜ್ಯಸಭೆಯಲ್ಲಿ ತೀವ್ರ ಮುಜುಗರಕ್ಕೊಳಗಾದ ಘಟನೆ ನಡೆದಿದೆ,

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗಕ್ಕೆ ಸಾಂವಿಧಾನಿಕ ಮಾನ್ಯತೆ ನೀಡುವ ಕುರಿತು ಮಸೂದೆಯನ್ನು ಕೇಂದ್ರವು ಇಂದು ರಾಜ್ಯಸಭೆಯಲ್ಲಿ ಪರಿಚಯಿಸಿತ್ತು. ಆದರೆ ಆ ಬಗ್ಗೆ ಚರ್ಚಿಸಲು ಕೇಂದ್ರ ಸರ್ಕಾರದ ಸಚಿವರು ಸೇರಿದಂತೆ ಸುಮಾರು 30 ಸಂಸದರೇ ಗೈರು ಹಾಜರಾಗಿದ್ದಾರೆ.

ಕೇಂದ್ರ ಸಚಿವ ವಿಜಯ್ ಗಓಯಲ್, ನಿರ್ಮಲಾ ಸೀತರಾಮನ್, ಸ್ಮೃತಿ ಇರಾನಿ., ರವಿಶಂಕರ್ ಪ್ರಸಾದ್, ಧರ್ಮೇಂದ್ರ ಪ್ರಧಾನ್, ಪಿಯುಶ್ ಗೋಯಲ್, ಎಂಜೆ ಅಕ್ಬರ್ ಹಾಗೂ ರಾಮದಾಸ್ ಅಥಾವಳೆ ಮುಂತಾದವರೇ ಕಲಾಪಗಳಿಗೆ ಗೈರು ಹಾಜರಾಗಿದ್ದಾರೆ.

ಮಿತ್ರ ಪಕ್ಷಗಳಾದ ಎಐಡಿಎಂಕೆ ಹಾಗೂ ಅಕಾಲಿ ಸಳದ ಸದಸ್ಯರೂ ಕೂಡಾ ಕಲಾಪಗಳಿಗೆ ಹಾಜರಾಗಿಲ್ಲ.

ಮುಂಬರುವ ಚುನಾವಣೆಗಳಲ್ಲಿ ಹಿಂದುಳಿದ ವರ್ಗಗಳ ಮತಗಳ ಮೇಲೆ ಕಣ್ಣಿಟ್ಟಿರುವ ಬಿಜೆಪಿಯು ಆಯೋಗಕ್ಕೆ ಸಾಂವಿಧಾನಿಕ ಮಾನ್ಯತೆ ನೀಡಲು ಮುಂದಾಗಿದ್ದು, ಈ ಬಗ್ಗೆ ಮಸೂದೆಯನ್ನು ಸಿದ್ಧಪಡಿಸಿದೆ.

(ಸಾಂದರ್ಭಿಕ ಚಿತ್ರ)