ಹಸು, ಎತ್ತು ಸತ್ತರೆ ರಾಜ್ಯ ಸರ್ಕಾರದಿಂದ 10 ಸಾವಿರ ರೂ. ಪರಿಹಾರ ನೀಡಲಾಗುತ್ತದೆ. ಆದರೆ ಎಮ್ಮೆ ಸತ್ತರೆ ಯಾವುದೇ ಪರಿಹಾರ ಇಲ್ಲ ಎಂದು ಹೇಳಿದೆ
ಬೆಳಗಾವಿ(ನ.17): ಎತ್ತಿಗೆ ಜ್ವರ ಬಂದ್ರೆ ಎಮ್ಮೆಗೆ ಬರೆ ಎಳೆದ್ರಂತೆ ಎಂಬ ನಾಣ್ನುಡಿಯನ್ನ ರಾಜ್ಯ ಸರ್ಕಾರ ನಿಜ ಮಾಡಲು ಹೊರಟಂತಿದೆ.
ಹೌದು, ರಾಜ್ಯ ಸರ್ಕಾರ ಹಸುವಿಗೆ ನ್ಯಾಯ. ಎಮ್ಮೆಗೆ ಅನ್ಯಾಯ ಮಾಡಿದೆ. ಹಸು, ಎತ್ತಿಗೆ ಬೆಲೆ ಇದೆ, ಆದರೆ ಎಮ್ಮೆಗೆ ಕಿಂಚಿತ್ತು ಬೆಲೆಯನ್ನೂ ಕೊಟ್ಟಿಲ್ಲ. ಹಸು, ಎತ್ತು ಸತ್ತರೆ ರಾಜ್ಯ ಸರ್ಕಾರದಿಂದ 10 ಸಾವಿರ ರೂ. ಪರಿಹಾರ ನೀಡಲಾಗುತ್ತದೆ. ಆದರೆ ಎಮ್ಮೆ ಸತ್ತರೆ ಯಾವುದೇ ಪರಿಹಾರ ಇಲ್ಲ ಎಂದು ಹೇಳಿದೆ
ಬಜೆಟ್'ನಲ್ಲಿ ಘೋಷಿಸಿದ್ದ ಈ ಯೋಜನೆ ಈಗ ಅನುಷ್ಠಾನಕ್ಕೆ ತರಲು ರಾಜ್ಯ ಸರ್ಕಾರ ಮುಂದಾಗಿದೆ. ಈ ಮೂಲಕ ಎಮ್ಮೆ ಮಾಲೀಕರಿಗೆ ಅನ್ಯಾಯ ಮಾಡಲು ಹೊರಟಿದೆ. ಎಮ್ಮೆ ಸಾಕಿರುವ ಮಾಲೀಕರಿಗೆ ರಾಜ್ಯ ಸರ್ಕಾರದ ಅನ್ಯಾಯ ಮಾಡಿದೆ.
ಉತ್ತರ ಕರ್ನಾಟಕದಲ್ಲಿ ಎಮ್ಮೆಗಳ ಹೈನುಗಾರಿಕೆಯೇ ಹೆಚ್ಚಾಗಿದ್ದು ಹೀಗಾಗಿ ಸರ್ಕಾರದಿಂದ ಉತ್ತರ ಕರ್ನಾಟಕ ಭಾಗಕ್ಕೆ ಅನ್ಯಾಯ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ರಾಜ್ಯ ಸರ್ಕಾರದ ನಡೆ ಉತ್ತರ ಕರ್ನಾಟಕ ಭಾಗದ ಜನಪ್ರತಿನಿಧಿಗಳ ಅಸಮಧಾನಕ್ಕೆ ಕಾರಣವಾಗಿದೆ.
