Asianet Suvarna News Asianet Suvarna News

ಮೋದಿ 100 ದಿನಗಳ ಅಜೆಂಡಾ: ದೇಶದಲ್ಲಿ ಇ- ಸಿಗರೆಟ್‌ ನಿಷೇಧ?

ಇ- ಸಿಗರೆಟ್‌ಗೆ ನಿಷೇಧ?| ಮಾದಕ ವಸ್ತು ಪಟ್ಟಿಗೆ ಸೇರ್ಪಡೆ ಮಾಡಿ ನಿರ್ಬಂಧ| ಮೋದಿ 100 ದಿನಗಳ ಅಜೆಂಡಾದಲ್ಲಿ ಇದೂ ಒಂದು

Govt set to ban e cigarettes by labelling them drugs
Author
Bangalore, First Published Jul 4, 2019, 9:52 AM IST

ನವದೆಹಲಿ[ಜು.04]: ಸಿಗರೆಟ್‌ಗೆ ಪರಾರ‍ಯಯವಾಗಿ ಬಳಕೆಯಾಗುತ್ತಿರುವ ಇ-ಸಿಗರೆಟ್‌ಗಳನ್ನು ದೇಶದಲ್ಲಿ ನಿಷೇಧಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಇದಕ್ಕಾಗಿ ಇ-ಸಿಗರೆಟ್‌ಗಳನ್ನು ಮಾದಕ ವಸ್ತುಗಳ ಪಟ್ಟಿಗೆ ಸೇರ್ಪಡೆ ಮಾಡುವ ಆಲೋಚನೆಯೂ ಇದೆ.

ಇ- ಸಿಗರೆಟ್‌ಗಳ ಮಾರಾಟಕ್ಕೆ ದೇಶದಲ್ಲಿ ಯಾವುದೇ ನಿಯಂತ್ರಣ ಇಲ್ಲ. ತಂಬಾಕು ಪದಾರ್ಥಗಳ ನಿಯಂತ್ರಣಕ್ಕಾಗಿ ಇರುವ ಹಾಲಿ ಕಾನೂನುಗಳಡಿ ಸಿಗರೆಟ್‌ಗಳ ಮಾರಾಟ ನಿಯಂತ್ರಿಸುವ ಅವಕಾಶವಿದೆಯೇ ಹೊರತು ನಿಷೇಧಿಸಲು ಆಗದು. ಹೀಗಾಗಿ ಇ-ಸಿಗರೆಟ್‌ ನಿಷೇಧಿಸುವ ಸಂಬಂಧ ಕೇಂದ್ರ ಸರ್ಕಾರ ಸಮಿತಿಯೊಂದನ್ನು ರಚಿಸಿತ್ತು. ಇ-ಸಿಗರೆಟ್‌ಗಳನ್ನು ಮಾದಕ ವಸ್ತು ಎಂದು ವರ್ಗೀಕರಿಸಿ ನಿಷೇಧಿಸಬಹುದಾಗಿದೆ ಎಂದು ಆ ಸಮಿತಿ ಹೇಳಿದೆ ಎಂದು ಹೇಳಲಾಗಿದೆ. 100 ದಿನಗಳ ಕಾರ್ಯ ಯೋಜನೆಯಲ್ಲಿ ಇ-ಸಿಗರೇಟು ನಿಷೇಧವೂ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಗುರಿಯಾಗಿದೆ.

ಯಾಕಾಗಿ ಈ ಕ್ರಮ?:

ಮೊದಲಿಗೆ ಸಿಗರೇಟು ಚಟದಿಂದ ಹೊರಬರುವ ಸಲುವಾಗಿ ಯುವ ಜನಾಂಗ ಸೇರಿದಂತೆ ಹಲವರು ಇ-ಸಿಗರೆಟು ಮೊರೆ ಹೋಗುತ್ತಿದ್ದರು. ಆದರೆ, ಇ-ಸಿಗರೇಟು ಇದೀಗ ಶೋಕಿಯಾಗಿ ಪರಿವರ್ತನೆಯಾಗಿದೆ. ಅಲ್ಲದೆ, ಸಹ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆ ಎಂದು ಹೇಳಲಾಗಿದೆ. ಸರ್ಕಾರದ ವರದಿಯ ಪ್ರಕಾರವೇ ಭಾರತವೊಂದರಲ್ಲೇ 460 ಬ್ರಾಂಡ್‌ಗಳ 7700 ಸುವಾಸನೆ ಭರಿತ ಇ-ಸಿಗರೇಟು ಮಾರುಕಟ್ಟೆಯಲ್ಲಿವೆ. ಮಾಮೂಲಿ ಸಿಗರೆಟ್‌ಗಳಲ್ಲಿ ನಿಕೋಟಿನ್‌ ಅನ್ನು ಸುಟ್ಟು ಹೊಗೆ ಸೇವಿಸಲಾಗುತ್ತದೆ. ಆದರೆ ಇ-ಸಿಗರೆಟ್‌ಗಳಲ್ಲಿ ನಿಕೋಟಿನ್‌ ಅಂಶದ ದ್ರಾವಣವನ್ನು ಸೇವಿಸಲಾಗುತ್ತದೆ. ಇದು ಆರೋಗ್ಯಕ್ಕೆ ಹೆಚ್ಚು ಅಪಾಯಕಾರಿ ಎಂದು ಹೇಳಲಾಗಿದೆ.

Follow Us:
Download App:
  • android
  • ios