ಜಿಲ್ಲಾಡಳಿತದ ಅಧಿಕಾರಿಗಳು ಎರಡು ಕಡೆ ಕಾಲೇಜಿಗೆ ಸೇರಿದ ಕಾಂಪೌಂಡ್'ನ್ನು ಒಡೆದು ಹಾಕಿರೋದು ಈಗ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ. ಈಗಾಗಲೇ ಕಾಲೇಜಿಗೆ ಹೋಗಲು ದಾರಿಯಿದ್ದರೂ ಅಧಿಕಾರಿಗಳು ಕಾಲೇಜಿಗೆ ಸೇರಿದ ಈ ಕಾಂಪೋಂಡ್ ಕೆಡವಿ ಬೇರೊಂದು ದಾರಿ ನಿರ್ಮಿಸಿದ್ಯಾಕೆ ಅಂತಾ ಆಕ್ರೋಶ ವ್ಯಕ್ತಪಡಿಸ್ತಿದ್ದಾರೆ.

ಮಂಡ್ಯ(ಸೆ. 07): ಮುಖ್ಯಮಂತ್ರಿಗಳ ಕಾರ್ಯಕ್ರಮಕ್ಕಾಗಿ ಸರ್ಕಾರಿ ಕಾಲೇಜಿನ ಕಾಂಪೋಂಡ್'ಅನ್ನೇ ಜಿಲ್ಲಾಡಳಿತದ ಅಧಿಕಾರಿಗಳು ಕೆಡವಿರುವ ಘಟನೆ ಸಕ್ಕರೆ ನಗರಿ ಮಂಡ್ಯದಲ್ಲಿ ನಡೆದಿದೆ. ನಾಳೆ, ಶುಕ್ರವಾರ ಸಿಎಂ ಸಿದ್ದರಾಮಯ್ಯ ವಿವಿಧ ಕಾಮಗಾರಿಗಳ ಉದ್ಘಾಟನೆಗಾಗಿ‌ ಮಂಡ್ಯಕ್ಕೆ ಆಗಮಿಸುತ್ತಿದ್ದಾರೆ. ಈ ನಿಮಿತ್ತ ಮಂಡ್ಯದ ಸರ್ಕಾರಿ ಬಾಲಕರ ಮಹಾವಿದ್ಯಾಲಯದ ಕಾಲೇಜಿನಲ್ಲಿ ಸಿಎಂ ಕಾರ್ಯಕ್ರಮ ಆಯೋಜಿಸಲಾಗಿದೆ. ‌ಇದಕ್ಕಾಗಿ ಕಾಲೇಜಿನ ಆವರಣದಲ್ಲಿ ಬೃಹತ್ ವೇದಿಕೆ ನಿರ್ಮಿಸಲಾಗಿದೆ.

ಜಿಲ್ಲಾಡಳಿತದ ಅಧಿಕಾರಿಗಳು ಎರಡು ಕಡೆ ಕಾಲೇಜಿಗೆ ಸೇರಿದ ಕಾಂಪೌಂಡ್'ನ್ನು ಒಡೆದು ಹಾಕಿರೋದು ಈಗ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ. ಈಗಾಗಲೇ ಕಾಲೇಜಿಗೆ ಹೋಗಲು ದಾರಿಯಿದ್ದರೂ ಅಧಿಕಾರಿಗಳು ಕಾಲೇಜಿಗೆ ಸೇರಿದ ಈ ಕಾಂಪೋಂಡ್ ಕೆಡವಿ ಬೇರೊಂದು ದಾರಿ ನಿರ್ಮಿಸಿದ್ಯಾಕೆ ಅಂತಾ ಆಕ್ರೋಶ ವ್ಯಕ್ತಪಡಿಸ್ತಿದ್ದಾರೆ. ಮುಖ್ಯಮಂತ್ರಿಗಳಿಗೋಸ್ಕರ ಕಾಂಪೌಂಡ್ ಕೆಡವಿ ಮತ್ತೆ ಕಟ್ಟುವ ಮೂಲಕ ಸಾರ್ವಜನಿಕರ ಹಣವನ್ನು ಪೋಲು ಮಾಡಲು ಅಧಿಕಾರಿಗಳು ಮುಂದಾಗಿದ್ದಾರೆಂದು ಆಕ್ರೋಶ ವ್ಯಕ್ತಪಡಿಸ್ತಿದ್ದಾರೆ.